ADVERTISEMENT
ವೇಗಿ ಜಸ್ಪ್ರೀತ್ ಬೂಮ್ರಾ ಬಿರುಗಾಳಿಗೆ ತತ್ತರಿಸಿದ ಪಾಕಿಸ್ತಾನ ತಂಡ ಭಾರತದ ವಿರುದ್ಧ ಸೋಲು ಕಂಡಿದೆ. ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದ ಟಿ-ಟ್ವೆಂಟಿ ವಿಶ್ವಕಪ್ನ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು 6 ರನ್ಗಳ ಅಂತರದಿಂದ ಸೋಲಿಸಿದೆ.
ಮೊದಲು ಬ್ಯಾಟ್ ಮಾಡಿದ ಭಾರತ 19 ಓವರ್ಗೆ 119 ರನ್‌ಗೆ ಆಲೌಟಾಯ್ತು. ಪಾಕಿಸ್ತಾನ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸ್ತು.
ಗುರಿ ಬೆನ್ನತ್ತಿದ್ದ ಪಾಕಿಸ್ತಾನ ಉತ್ತಮ ಆರಂಭದೊಂದಿಗೆ ಗೆಲುವಿನ ವಿಶ್ವಾಸದಲ್ಲಿತ್ತು. ಆದರೆ ಬೂಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಮಾರಕ ದಾಳಿಗೆ ಪಾಕಿಸ್ತಾನ ಸೋಲು ಅನುಭವಿಸ್ತು.
4 ಓವರ್ನಲ್ಲಿ ಕೇವಲ 14 ರನ್ ನೀಡಿದ ಬೂಮ್ರಾ 3 ವಿಕೆಟ್ ಕಬಳಿಸಿ ಪಾಕಿಸ್ತಾನದ ಪತನಕ್ಕೆ ಕಾರಣವಾದರು. ಹಾರ್ದಿಕ್ ಪಾಂಡ್ಯ 24 ರನ್ ನೀಡಿ 2 ವಿಕೆಟ್ ಕಬಳಿಸಿದರು.
ಪಾಕಿಸ್ತಾನ ಪರ ಮೊಹಮ್ಮದ್ ರಿಜ್ವಾನ್ 44 ಬಾಲ್ಗೆ 31 ರನ್ ಗಳಿಸಿದರೆ ಭಾರತದ ಪರ ರಿಷಭ್ ಪಂತ್ 31 ಬಾಲ್ಗೆ 42 ರನ್ ಗಳಿಸಿದರು.
ಈ ಮೂಲಕ ಗ್ರೂಪ್ ಎನಲ್ಲಿರುವ ಭಾರತ ಸತತ 2ನೇ ಗೆಲುವು ದಾಖಲಿಸಿದೆ. ನೆದರ್ಲೆಂಡ್ ವಿರುದ್ಧ ಭಾರತ 8 ವಿಕೆಟ್ಗಳ ಗೆಲುವು ಸಾಧಿಸಿತ್ತು.
ಪಾಕಿಸ್ತಾನ 2ನೇ ಸೋಲು ಕಂಡಿದ್ದು, ಸೂಪರ್ ಓವರ್ನಲ್ಲಿ ಅಮೆರಿಕ ವಿರುದ್ಧ ಸೋತಿತ್ತು.
ADVERTISEMENT