ನ್ಯೂಜಿಲೆಂಡ್ ವಿರುದ್ಧದ 3 ಏಕದಿನ ಸರಣಿ ಪಂದ್ಯಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಇಂದು ಶುಕ್ರವಾರ ತಂಡ ಪ್ರಕಟ ಮಾಡಿದ್ದು, ಸಂಜು ಸ್ಯಾಮ್ಸನ್ಗೆ (Sanju Samson) ನಾಯಕತ್ವ ನೀಡಲಾಗಿದೆ.
ಚೆನ್ನೈನಲ್ಲಿ ಈ 3 ಏಕದಿನ ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಸೆಪ್ಟಂಬರ್ 22 ರಂದು, ಎರಡನೇ ಪಂದ್ಯ ಸೆಪ್ಟಂಬರ್ 25 ರಂದು ಮತ್ತು ಕೊನೆಯ ಪಂದ್ಯ ಸೆಪ್ಟಂಬರ್ 27 ರಂದು ನಡೆಯಲಿದೆ.
ಸಂಜು ಸ್ಯಾಮ್ಸನ್ ಐಪಿಎಲ್ ಮಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೇ, ರಾಜಸ್ಥಾನ ರಾಯಲ್ಸ್ ತಂಡವನ್ನು ಪೈನಲ್ಗೆ ತರುವಲ್ಲಿ ಶಕ್ತರಾಗಿದ್ದರು.
17 ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಸಂಜು ಸ್ಯಾಮ್ಸನ್ (Sanju Samson) 458 ರನ್ ಬಾರಿಸಿದ್ದಾರೆ. 6 ಟಿ20 ಪಂದ್ಯಗಳಲ್ಲಿ 179 ರನ್, 6 ಏಕದಿನ ಪಂದ್ಯಗಳಲ್ಲಿ 130 ರನ್ ಬಾರಿಸಿದ್ದಾರೆ.
ಭಾರತ ತಂಡ :
ಪೃಥ್ವಿ ಶಾ, ಅಭಿಮನ್ಯು ಈಶ್ವರನ್, ರುತುರಾಜ್ ಗಾಯಕ್ವಾಡ್, ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಸಂಜು ಸ್ಯಾಮ್ಸನ್ (ನಾಯಕ), ಕೆಎಸ್ ಭರತ್(ವಿಕೆಟ್ ಕೀಪರ್), ಕುಲ್ದೀಪ್ ಯಾದವ್, ಶಹಬಾಜ್ ಅಹ್ಮದ್, ರಾಹುಲ್ ಚಹರ್, ತಿಲಕ್ ವರ್ಮಾ, ಕುಲ್ದೀಪ್ ಸೇನ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲೀಕ್, ನವದೀಪ್ ಶೈನಿ ಮತ್ತು ರಾಜ್ ಅಂಗಡ್ ಭವ.
ಇದನ್ನೂ ಓದಿ : BREAKING: ವೆಸ್ಟ್ ಇಂಡೀಸ್ ವಿರುದ್ಧ ಟಿ-ಟ್ವೆಂಟಿ ಸರಣಿಗೆ ಟೀಂ ಇಂಡಿಯಾ ಪ್ರಕಟ