ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಕಠಿಣವಾಗಿ ವ್ಯವಹರಿಸಬೇಡಿ. ಮಕ್ಕಳ ಜೊತೆ ಫ್ರೆಂಡ್ಲಿಯಾಗಿ ಇದ್ದು, ಅವರ ಸಮಸ್ಯೆಗಳನ್ನು ತಿಳಿದುಕೊಳ್ಳಿ. ಆಗ ನಿಮ್ಮ ಮತ್ತು ಮಕ್ಕಳ ನಡುವೆ ಒಳ್ಳೆಯ ಬಾಂಧವ್ಯ ಮೂಡುತ್ತದೆ.
ಮಕ್ಕಳು ಹೇಳುವ ವಿಚಾರಗಳಿಗೆ ಪ್ರಾಧಾನ್ಯತೆ ನೀಡಬೇಕು.. ಹೀಗೆ ಮಾಡಿದಲ್ಲಿ ಮಕ್ಕಳು ಎಲ್ಲಾ ವಿಷಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತವೆ. ಅದರಲ್ಲೇನಾದರೂ ತಪ್ಪು ಕಂಡುಬಂದಲ್ಲಿ ಅದನ್ನು ಹಾಗಲ್ಲ.. ಹೀಗೆ ಎಂದು ವಿವರಿಸಿ.. ಸರಿ ಮಾಡುವ ಪ್ರಯತ್ನ ಮಾಡಿ..
ಅತಿಯಾಗಿ ಮುದ್ದಿಸುವುದು ಒಳ್ಳೆಯದಲ್ಲ. ಮಕ್ಕಳು ಕೇಳಿದ್ದೆಲ್ಲಾ ಕೊಡಿಸಬಾರದು. ಅವರಿಗೆ ಏನು ಅಗತ್ಯವೋ ಅದನ್ನೇ ಗುರುತಿಸಿ ಕೊಡಿಸಿಕೊಡಿ. ನಿಮ್ಮ ಇಷ್ಟ ಕಷ್ಟ, ಒಳಿತು ಕೆಡುಕುಗಳ ಬಗ್ಗೆ ಅವರಿಗೆ ತಿಳಿಹೇಳಿ.
ನೀವು ಯಾರು..? ನಿಮ್ಮ ಇಷ್ಟಗಳೇನು? ನಿಮ್ಮ ಅಪ್ಪ ಅಮ್ಮ ನಿಮ್ಮನ್ನು ಬೆಳೆಸಿದ ಬಗೆ ಹೇಗೆ..? ಬಂಧುಗಳು ಯಾರು? ಗೆಳೆಯರು ಯಾರು? ಹೇಗೆ? ಎಂಬ ಅಂಶಗಳ ಬಗ್ಗೆ ಮಕ್ಕಳ ಜೊತೆ ಆಗಾಗ ಪ್ರಸ್ತಾಪಿಸುತ್ತಲೇ ಇರಿ. ಹೀಗೆ ಮಾಡಿದಲ್ಲಿ ಮಕ್ಕಳಿಗೆ ಸಾಮಾಜಿಕ ಜೀವನ ಅರಿವಾಗುತ್ತದೆ. ಅಭ್ಯಾಸವಾಗುತ್ತದೆ.
ಮಕ್ಕಳು ಗೆಲುವು ಸೋಲುಗಳನ್ನು ಆಟದ ಮೂಲಕವೇ ತಿಳಿದುಕೊಳ್ಳುತ್ತಾರೆ. ಸಾಧ್ಯವಾದಲ್ಲಿ ಮಕ್ಕಳ ಜೊತೆ ಬೆರೆತು ಆಟ ಆಡಿ. ಅವರಿಗೆ ಇಷ್ಟವಾದ ಆಟ ಯಾವುದು ಎಂದು ತಿಳಿದುಕೊಳ್ಳಿ.. ಅದರ ತರಬೇತಿ ಕೊಡಿಸಿ.
ಖಾಲಿ ಸಮಯ ಸಿಕ್ಕಿದಲ್ಲಿ ಮಕ್ಕಳಿಗೆ ಕತೆ ಹೇಳಿ.. ರಾಮಾಯಣ, ಮಹಾಭಾರತ, ಬೈಬಲ್, ಖುರಾನ್‌ನಲ್ಲಿ ಇರುವ ನೈತಿಕ ಮೌಲ್ಯಗಳನ್ನು ವಿವರಿಸಿ.
ಉನ್ನತ ಮಟ್ಟದ ಕನಸುಗಳನ್ನು ಕಾಣುವ ವಾತಾವರಣ ಸೃಷ್ಟಿಸಿ. ಇದರಿಂದ ಚಿಕ್ಕಂದಿನಿಂದಲೇ ದೊಡ್ಡ ದೊಡ್ಡ ಗುರಿಗಳನ್ನು ಹೊಂದಿ ಅವುಗಳನ್ನು ಸಾಧಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸುತ್ತಾರೆ.
ನೀವು ಹೇಗೆ ಜೀವನ ಮಾಡುತ್ತಿದ್ದೀರಿ. ಸುತ್ತಮುತ್ತಲಿನ ಜನರ ಜೊತೆ ಹೇಗೆ ವರ್ತಿಸುವಿರಿ. ಸಮಾಜದಲ್ಲಿ ಹೇಗೆ ಗೌರವ ಮರ್ಯಾದೆಗಳನ್ನು ಹೊಂದುತ್ತೀರಿ ಎಂಬ ಅಂಶಗಳು ನಿಮ್ಮ ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ.
ಏನನ್ನಾದರೂ ಪ್ರೀತಿಯಿಂದಲೇ ಜಯಿಸಬಹುದು ಎಂಬ ವಿಚಾರವನ್ನು ಮರೆಯದಿರಿ. ನಿಮ್ಮ ಮಕ್ಕಳ ಪ್ರೀತಿಯನ್ನು ನಿಮ್ಮ ಪ್ರೀತಿಯೊಂದಿಗೆ ಜಯಿಸಿ…