ಕರ್ನಾಟಕದಿಂದ CJI ಆಗಿದ್ದು ನಾಲ್ವರು ನ್ಯಾಯಮೂರ್ತಿಗಳು

ಈವರೆಗೂ 49 ಮಂದಿ  ಭಾರತದ ಮುಖ್ಯ ನ್ಯಾಯಮೂರ್ತಿಗಳಾಗಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳಾಗಿದ್ದವರ ಪೈಕಿ 9 ಮಂದಿ ದಕ್ಷಿಣ ಭಾರತೀಯರು (South Indian). ಇವರಲ್ಲಿ  ನಾಲ್ಕು ಮಂದಿ ಕರ್ನಾಟಕದವರು (Karnataka) ಎಂಬುದು ವಿಶೇಷ.

ಕರ್ನಾಟಕದ ಜಸ್ಟಿಸ್ ಇ ಎಸ್ ವೆಂಕಟರಾಮಯ್ಯ (Justice E S Venakataramaiah), ಜಸ್ಟಿಸ್ ಎಂ ಎನ್ ವೆಂಕಟಾಚಲಯ್ಯ (Justice MN venkatachalaiah ), ಜಸ್ಟಿಸ್ ರಾಜೇಂದ್ರ ಬಾಬು (Justice Rajendrabaabu), ಜಸ್ಟಿಸ್ ಹೆಚ್ ಎಲ್ ದತ್ತು ( HL Dattu )ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

ಜಸ್ಟಿಸ್ ಇ ಎಸ್ ವೆಂಕಟರಾಮಯ್ಯ ಅವರ  ಪುತ್ರಿ ಬಿವಿ ನಾಗರತ್ನ (BV Nagarathna)ಅವರು ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಮೂರ್ತಿಯಾಗಿ ಸದ್ಯ ಕಾರ್ಯನಿರ್ವಹಿಸಿದ್ದಾರೆ. ಬಿವಿ ನಾಗರತ್ನ ಅವರು 2027ಕ್ಕೆ ಮುಖ್ಯ  ನ್ಯಾಯಮೂರ್ತಿ ಆಗುವ ಅವಕಾಶ  ಇದೆ. ಈ  ಮೂಲಕ ದೇಶದ  ಮೊದಲ ಮುಖ್ಯ ನ್ಯಾಯಮೂರ್ತಿ ಆಗುವ ಅಪರೂಪದ ಗೌರವ ನಾಗರತ್ನ ಅವರಿಗೆ ದಕ್ಕುವ ಸಂಭವ ಇದೆ.

ಸುದೀರ್ಘ ಅವಧಿಗೆ  CJI ಆಗಿದ್ದ ಕೀರ್ತಿ ವೈ ವಿ ಚಂದ್ರಚೋಡ್ (Justice YV Chandrachud) ಅವರದ್ದು. ಏಳು ವರ್ಷ CJI ಆಗಿ  ಕಾರ್ಯನಿರ್ವಹಿಸಿದ್ದರು. ವೈ ವಿ ಚಂದ್ರಚೂಡ್ ಅವರ ಪುತ್ರ ಡಿ ವೈ ಚಂದ್ರಚೂಡ್ (Justice DY Chandrachud)ಅವರು  ಸದ್ಯ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಕಾರ್ಯನಿರ್ವಹಿಸುದ್ದಾರೆ. UU ಲಲಿತ್ (UU Lalith)ಬಳಿಕ ಡಿ ವೈ ಚಂದ್ರಚೂಡ್ ಅವರೇ CJI ಆಗಲಿದ್ದಾರೆ.

ಕಡಿಮೆ ಅವಧಿಗೆ  CJI ಆಗಿದ್ದವರ ಪೈಕಿ  ಕನ್ನಡಿಗರಾದ ರಾಜೇಂದ್ರ ಬಾಬು  ಸಹ ಅವರು ಇದ್ದಾರೆ. ಜಸ್ಟಿಸ್ ರಾಜೇಂದ್ರ ಬಾಬು ಅವರು  2004ರ ಮೇ 2ರಿಂದ ಮೇ 31ರವರೆಗೂ ಸೇವೆ ಸಲ್ಲಿಸಿದ್ದರು

LEAVE A REPLY

Please enter your comment!
Please enter your name here