ವೈದಿಕಶಾಹಿ, ಹಿಂದುತ್ವದ ಹೇರಿಕೆಯನ್ನು ಮೊದಲಿನಿಂದ ತೀವ್ರವಾಗಿ ವಿರೋಧಿಸುತ್ತ ಬಂದಿರುವ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಇದೀಗ ಹೊಸ ವಿಚಾರವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರಸ್ತಾಪಿಸಿದ್ದಾರೆ.
ಇಸ್ರೋ ಮತ್ತು ಪರಿಸರ, ಇಂಧನ ಸಚಿವಾಲಯಗಳು, ‘ಪಂಚ ಭೂತ’ವನ್ನು (ಭೂಮಿ/ನೀರು/ಬೆಂಕಿ/ಗಾಳಿ/ಆಕಾಶ) ಆಚರಿಸಲು, ಸರ್ಕಾರೇತರ ಸಂಸ್ಥೆ ‘ವಿಜ್ಞಾನ ಭಾರತಿ’ಯ ಜೊತೆ ಪಾಲುದಾರಿಕೆಯನ್ನು ಹೊಂದಿವೆ.
ಋಗ್ವೇದದ ಐತರೇಯ ಉಪನಿಷತ್ತಿನಲ್ಲಿ ನಮೂದಿಸಲಾದ ‘ಪಂಚ ಭೂತ’ವು ವೈದಿಕ ಹಿಂದೂ ಧರ್ಮದ ಪ್ರಮುಖ ಅಂಶವಾಗಿದ್ದು, ಇದನ್ನು ವಿಜ್ಞಾನದಿಂದ ದೂರವಿಡಬೇಕು ಎಂದು ನಟ ಚೇತನ್ ಒತ್ತಾಯ ಮಾಡಿದ್ದಾರೆ.
ಇತ್ತೀಚಿಗಷ್ಟೇ ನಟ ಚೇತನ್ ಮಾತನಾಡುತ್ತ , ಕಾಂತಾರ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಹೇಳುವಂತೆ ಭೂತಾರಾಧನೆ ಹಿಂದೂ ಧರ್ಮದ ಸಂಸ್ಕೃತಿ ಅಲ್ಲ. ಅದು ಬುಡಕಟ್ಟು ಸಮುದಾಯಗಳ ಅವೈದಿಕ ಆಚರಣೆ ಎಂದು ಪ್ರತಿಪಾದಿಸಿದ್ದರು. ಚೇತನ್ ಅಹಿಂಸಾ ಅವರ ಈ ಮಾತುಗಳಿಗೆ ಬಲಪಂಥಿಯರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.