ಕೆಆರ್​ ಸರ್ಕಲ್ ಅಂಡರ್​ ಪಾಸ್​ನಲ್ಲಿ ಸಿಲುಕಿದ ಕಾರು.. ರಕ್ಷಣೆಗಾಗಿ ಮೊರೆಯಿಟ್ಟ ಕುಟುಂಬ..!

ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ರಣ ಮಳೆ ಆಗುತ್ತಿದ್ದು. ಹತ್ತು ಹಲವು ಕಡೆ ಅವಾಂತರಗಳು ಉಂಟಾಗಿವೆ.

ಜಲಾವೃತವಾದ ಕೆಆರ್​ ಸರ್ಕಲ್​ ಬಳಿಯ ಅಂಡರ್​ಪಾಸ್​ ನಲ್ಲಿ ಕಾರೊಂದು ಸಿಲುಕಿದೆ. ಅದರಲ್ಲಿರುವ ಮಂದಿ ರಕ್ಷಣೆಗಾಗಿ ಹೆಲ್ಪ್ ಹೆಲ್ಪ್ ಎಂದು ಅಸಹಾಯಕರಾಗಿ ಅಂಗಲಾಚುತ್ತಿದ್ದಾರೆ. ಒಬ್ಬರು ಸಾವನ್ನಪ್ಪಿರುವ ಬಗ್ಗೆಯೂ ವರದಿಗಳು ಬರುತ್ತಿವೆ.

ಲೋಕಾಯುಕ್ತ ಕಚೇರಿ ಮುಂದಿನ ರಸ್ತೆಯಲ್ಲಿ ನಿಲ್ಲಿಸಲಾಗಿರುವ ವಾಹನಗಳು ನೀರಲ್ಲಿ ಮುಳುಗಡೆ ಆಗಿವೆ.

 ಬಸವನಗುಡಿಯ ಬುಲ್​ ಟೆಂಪಲ್ ರಸ್ತೆ ಬೆಂಗಳೂರು ಹೈಸ್ಕೂಲ್ ಬಳಿ ಬೃಹತ್ ಮರವೊಂದು ಧರೆಗುರುಳಿದೆ. ಅದೃಷ್ಟವಶಾತ್​ ಯಾವುದೇ ಸಾವು ನೋವು ಆಗಿಲ್ಲ.

 ವಿಂಡ್ಸರ್ ಮ್ಯಾನರ್ ಬಳಿ ನಿರ್ಮಾಣದ ಹಂತದ ಕಟ್ಟಡದ ಸುತ್ತ ನಿರ್ಮಿಸಲಾಗಿದ್ದ ಕಬ್ಬಿಣದ ತಡೆ ಗೋಡೆ ನೆಲಕ್ಕುರುಳಿದೆ. ಹಲವು ವಿದ್ಯುತ್ ಕಂಬಗಳು, ಮರಗಳು ಧಾರಾಶಾಹಿಯಾಗಿದ್ದು,  ಹೆಬ್ಬಾಳ ಮಾರ್ಗದ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿದೆ.

ಮಲ್ಲೇಶ್ವರಮ್, ಚಿಕ್ಕಪೇಟೆ, ವಿಜಯನಗರ, ನಾಗರಬಾವಿ, ಫನ್​ ವರ್ಲ್ಡ್ ಸೇರಿ ಹಲವೆಡೆ ಮರಗಳು ನೆಲಕ್ಕುರುಳಿವೆ.