ಎಲ್ಲರ ಅಡುಗೆ ಮನೆಯಲ್ಲಿರುವ ಮಸಾಲೆ ಪದಾರ್ಥಗಳಲ್ಲಿ ಏಲಕ್ಕಿ ಕೂಡ ಒಂದು. ವಿವಿಧ ಖಾದ್ಯಗಳಿಗೆ ಏಲಕ್ಕಿ ಬಳಕೆ ಮಾಡಲಾಗುತ್ತದೆ. ಏಲಕ್ಕಿ ಆಹಾರದ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಕಾರಿ. ಆಯುರ್ವೇದದಲ್ಲಿ ಏಲಕ್ಕಿಗೆ ಮಾನ್ಯತೆಯಿದೆ. ಏಲಕ್ಕಿಯಲ್ಲಿ ಅನೇಕ ಪೋಷಕಾಂಶಗಳಿವೆ. ಏಲಕ್ಕಿ ದೇಹವನ್ನು ಆರೋಗ್ಯವಾಗಿಡಲು ಸಹಕಾರಿ. ಏಲಕ್ಕಿಯಿಂದ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ. ಹಿಂದಿನ ಕಾಲದಲ್ಲಿ ಏಲಕ್ಕಿ ಬಳಕೆ ಹೆಚ್ಚಿತ್ತು. ಜನರು ಯಾವುದೇ ಅನಾರೋಗ್ಯ ಕಾಡಿದ್ರೂ ಏಲಕ್ಕಿ ಬಾಯಿಗೆ ಹಾಕಿಕೊಳ್ತಿದ್ದರು. ಏಲಕ್ಕಿ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುವ ಜೊತೆಗೆ ಜೀರ್ಣಕಾರಿ ಸಮಸ್ಯೆಗಳಿಗೆ ಚಿಕಿತ್ಸೆ ನೀಡುತ್ತದೆ.
ಹಾಗಾಗಿ ಏಲಕ್ಕಿ ಬೀಜಗಳನ್ನು ನೆನೆಸಿಟ್ಟ ನೀರನ್ನು ಕುಡಿಯುವ ಅಭ್ಯಾಸ ಮಾಡಿ ಕೊಂಡರೆ, ಏನೆಲ್ಲಾ ಆರೋಗ್ಯ ಪ್ರಯೋಜನ ಗಳನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಮಾಹಿತಿ ಇಲ್ಲಿದೆ.
ತೂಕ ಇಳಿಕೆಗೆ ಏಲಕ್ಕಿ ನೀರು
ಸ್ಥೂಲಕಾಯ ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ತೂಕ ಇಳಿಸಿಕೊಳ್ಳಲು ಬಯಸುವವರು ಏಲಕ್ಕಿ ನೀರನ್ನು ಸೇವನೆ ಮಾಡಬಹುದು. ಅನೇಕ ಅಧ್ಯಯನಗಳಿಂದಲೂ ಇದು ಸಾಭೀತಾಗಿದೆ. ಏಲಕ್ಕಿಯಲ್ಲಿರುವ ಆಂಟಿ-ಆಕ್ಸಿಡೆಂಟ್ ಫೈಬರ್ ಮತ್ತು ಇತರ ಪ್ರಮುಖ ಪೋಷಕಾಂಶಗಳು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಉತ್ತಮ ಜೀರ್ಣಕ್ರಿಯೆ
ಏಲಕ್ಕಿಯಲ್ಲಿ ಫೈಬರ್ ಮತ್ತು ಆಂಟಿಆಕ್ಸಿಡೆಂಟ್ ಪೋಷಕಾಂಶವಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಹೊಟ್ಟೆ ನೋವಿನ ಸಮಸ್ಯೆಗಳನ್ನು ಕಡಿಮೆ ಮಾಡಲು ಏಲಕ್ಕಿ ಸಹಾಯ ಮಾಡುತ್ತದೆ. ಏಲಕ್ಕಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಮಲಬದ್ಧತೆ ಸಮಸ್ಯೆಯಿಂದ ಬಳಲುವವರು ಏಲಕ್ಕಿ ನೀರನ್ನು ನಿಯಮಿತವಾಗಿ ಸೇವನೆ ಮಾಡಿದ್ರೆ ಹೊಟ್ಟೆ ಸ್ವಚ್ಛವಾಗುತ್ತದೆ. ಊಟದ ನಂತ್ರ ಒಂದು ಏಲಕ್ಕಿಯನ್ನು ಬಾಯಲ್ಲಿ ಹಾಕಿಕೊಂಡು ಜಗಿದ್ರೆ ಜೀರ್ಣಕ್ರಿಯೆ ಸುಲಭವಾಗುತ್ತದೆ.
ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣ
ನಿಮ್ಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದರೆ ನೀವು ಏಲಕ್ಕಿ ನೀರನ್ನು ಬಳಸಬಹುದು. ಏಲಕ್ಕಿ ನೀರನ್ನು ನಿಯಮಿತವಾಗಿ ಬಳಕೆ ಮಾಡುವುದ್ರಿಂದ ಕೊಲೆಸ್ಟ್ರಾಲ್ ಮಟ್ಟ ಸಮತೋಲನಕ್ಕೆ ಬರುತ್ತದೆ. ಹೃದಯವನ್ನು ಆರೋಗ್ಯವಾಗಿಡಲು ಏಲಕ್ಕಿ ಸಹಾಯ ಮಾಡುತ್ತದೆ. ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯಿದ್ದರೆ ಅದನ್ನು ತಡೆಯುವ ಕೆಲಸವನ್ನು ಏಲಕ್ಕಿ ಮಾಡುತ್ತದೆ.
ಮಧುಮೇಹಿಗಳಿಗೆ ಒಳ್ಳೆಯದು ಏಲಕ್ಕಿ
ಏಲಕ್ಕಿ ನೀರು ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹದಿಂದ ಬಳಲುತ್ತಿದ್ದವರು ಏಲಕ್ಕಿ ನೀರನ್ನು ಸೇವನೆ ಮಾಡಬೇಕು. ಏಲಕ್ಕಿಯನ್ನು ನಿಯಮಿತವಾಗಿ ಸೇರಿಸಿದರೆ ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಚರ್ಮದ ಕಾಂತಿ ಹೆಚ್ಚುತ್ತದೆ
ದೇಹದಲ್ಲಿ ಕಂಡುಬರುವ ವಿಷಕಾರಿ ಅಂಶಗಳನ್ನು ಸಂಪೂರ್ಣ ಪ್ರಮಾಣದಲ್ಲಿ ದೇಹದಿಂದ ಹೊರಹೋಗಲು ಸಾಧ್ಯವಾಗದೇ ಹೋದಾಗ, ಚರ್ಮದ ಭಾಗದಲ್ಲಿ ಕೂಡ ಕಾಂತಿ ಕಡಿಮೆ ಯಾಗುತ್ತಾ ಬರುತ್ತದೆ.
ಹೀಗಾಗಿ ಇಂತಹ ಸಮಸ್ಯೆಗಳಿಂದ ದೂರವಿರಬೇಕು ಎಂದರೆ, ಏಲಕ್ಕಿ ನೆನೆಸಿಟ್ಟ ನೀರು ಕುಡಿಯುವ ಅಭ್ಯಾಸ ಮಾಡಿಕೊಂಡರೆ, ನಮ್ಮ ದೇಹದ ಚರ್ಮದ ಕಾಂತಿ ಹಾಗೂ ಹೊಳಪು ಹೆಚ್ಚಾಗುತ್ತದೆ.