BREAKING: ಹಾಸನ ಜಿಲ್ಲೆ: ಚುನಾವಣಾ ಸಮೀಕ್ಷೆ – ಜೆಡಿಎಸ್​..? ಕಾಂಗ್ರೆಸ್​..? ಬಿಜೆಪಿ..?

ಕರ್ನಾಟಕ ವಿಧಾನಸಭಾ ಚುನಾವಣೆ ಹೊತ್ತಲ್ಲಿ ಜಿಲ್ಲಾವಾರು ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟವಾಗಿದೆ. 

ಹಾಸನ ಜಿಲ್ಲೆಯಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರಗಳಿವೆ.

2018ರಲ್ಲಿ ಬಿಜೆಪಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಮತ್ತು ಉಳಿದ 6 ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಗೆದ್ದಿತ್ತು. ಕಾಂಗ್ರೆಸ್​ ಒಂದೂ ಕ್ಷೇತ್ರದಲ್ಲಿ ಗೆದ್ದಿರಲಿಲ್ಲ.

ಈ ಬಾರಿ ಲೆಕ್ಕಾಚಾರ ಹೇಗಿದೆ..?

ಗುರುರಾಜ್​ ಅಂಜನ್​ ಅವರ ಸಮೀಕ್ಷೆ ಪ್ರಕಾರ:

ಈ ಬಾರಿ ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್​ ತನ್ನ ಖಾತೆ ತೆರೆಯಲಿದೆ.  ಕಾಂಗ್ರೆಸ್​ 1 ಕ್ಷೇತ್ರದಲ್ಲಿ ಗೆಲ್ಲಲಿದೆ. ಬಿಜೆಪಿ 1 ಕ್ಷೇತ್ರದಲ್ಲಿ ಗೆಲ್ಲಲಿದೆ. ಜೆಡಿಎಸ್​ ಐದು ಕ್ಷೇತ್ರಗಳಲ್ಲಿ ಗೆಲಲ್ಲಿದೆ.

ಬಿಜೆಪಿ ಹಾಸನ ವಿಧಾನಸಭಾ ಕ್ಷೇತ್ರವನ್ನು ಈ ಬಾರಿಯೂ ಗೆಲ್ಲಲಿದೆ ಎಂದು ಸಮೀಕ್ಷೆಯಲ್ಲಿ ಹೇಳಿದ್ದಾರೆ.

ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್​ ಗೆಲ್ಲಲಿದೆ ಎಂದು ಗುರುರಾಜ್​ ಅಂಜನ್​ ಅಂದಾಜಿಸಿದ್ದಾರೆ.

ಹೊಳೆನರಸೀಪುರ, ಅರಕಲಗೂಡು, ಬೇಲೂರು, ಶ್ರವಣಬೆಳಗೊಳ ಮತ್ತು ಸಕಲೇಶಪುರ ಮೀಸಲು ಕ್ಷೇತ್ರದಲ್ಲಿ ಈ ಬಾರಿಯೂ ಜೆಡಿಎಸ್​​​ ಗೆಲ್ಲಲಿದೆ ಎಂದು ಗುರುರಾಜ್​ ಅಂಜನ್​ ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here