BIG BREAKING: ಹಾಸನ ಜಿಲ್ಲೆಯ 2 ಕ್ಷೇತ್ರಗಳಿಗಷ್ಟೇ ಕಾಂಗ್ರೆಸ್​​ ಟಿಕೆಟ್​ ಘೋಷಣೆ

ಹಾಸನ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ 2 ಕ್ಷೇತ್ರಗಳಿಗೆ ಮಾತ್ರ ಕಾಂಗ್ರೆಸ್​ ಮೊದಲ ಹಂತದಲ್ಲಿ ಟಿಕೆಟ್​ ಘೋಷಿಸಿದೆ.

ಹೊಳೆನರಸೀಪುರ ಕ್ಷೇತ್ರದಿಂದ ಶ್ರೇಯಸ್​ ಎಂ ಪಟೇಲ್​ ಅವರಿಗೆ ಟಿಕೆಟ್​ ನೀಡಲಾಗಿದೆ.

ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಮುರಳಿ ಮೋಹನ್​ ಅವರಿಗೆ ಟಿಕೆಟ್​ ನೀಡಲಾಗಿದೆ.

ಉಳಿದಂತೆ ಹಾಸನ, ಅರಸೀಕೆರೆ, ಅರಕಲಗೂಡು, ಶ್ರವಣಬೆಳಗೊಳ, ಬೇಲೂರು ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್​ ಟಿಕೆಟ್​ ಘೋಷಿಸಿಲ್ಲ.