Friday, May 9, 2025
Every Minute News
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
  • News
  • Cinema
  • Sports
  • Health
  • Lifestyle
  • Gallery
  • Special
No Result
View All Result
Every Minute News
No Result
View All Result
ADVERTISEMENT
Home Special

ಹಲಾಲ್  ಮತ್ತು ಜಟ್ಕಾ ಪದ್ಧತಿ: ಒಂದು ವೈಜ್ಞಾನಿಕ ವಿಶ್ಲೇಷಣೆ

PratikshanaNews by PratikshanaNews
31st March 2022
in Special
0
0
SHARES
0
VIEWS
Share on FacebookShare on Twitter

ಇತ್ತೀಚೆಗೆ ದಿನ ಬೆಳಗಾದರೆ ಹಲಾಲ್ ಮತ್ತು ಜಟ್ಕಾ ಪ್ರಾಣಿವಧಾ ಪದ್ಧತಿಗಳ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಅನೇಕ ದೃಶ್ಯ ಮಾಧ್ಯಮಗಳು ಈ ಕುರಿತು ಚರ್ಚೆಗಳನ್ನು ಏರ್ಪಡಿಸುತ್ತಿವೆ. ಇದರಲ್ಲಿ ವಿವಿಧ ಧಾರ್ಮಿಕ ಮುಖಂಡರುಗಳು, ಪಕ್ಷಗಳ ನೇತಾರರು ಒಬ್ಬರ ಮೇಲೊಬ್ಬರು ಮುಗಿ ಬೀಳುತ್ತಿದ್ದಾರೆ. ಅನೇಕರು ಈ ಕುರಿತು ವ್ಯಾಪಕ ಪ್ರಚಾರವನ್ನೂ ಸಹ ನಡೆಸುತ್ತಿದ್ದಾರೆ. ಮುಖ್ಯವಾದ ಅಂಶವನ್ನು ಗಮನಿಸಿ. ಚರ್ಚೆಗಳಲ್ಲಿ ಭಾಗವಹಿಸಿದವರು ಅವರವರ ರೀತಿಯಲ್ಲೇ ವ್ಯಾಖ್ಯಾನ ನೀಡುತ್ತಿದ್ದಾರೆ. ಕೆಲವರು ಹಲಾಲ್ ಪದ್ಧತಿಯಲ್ಲಿ “ಕೆಟ್ಟ” ರಕ್ತವೆಲ್ಲಾ ಬಸಿದು ಹೋದರೆ ಮಾಂಸವು ತಿನ್ನಲು ಶುದ್ಧವಾಗಿ ಭಕ್ಷಣೆಗೆ ಯೋಗ್ಯವಾಗುತ್ತದೆ ಎನ್ನುತ್ತಾರೆ. ಮತ್ತೊಬ್ಬರು ಪ್ರಾಣಿ ನರಳಿ ಸಾಯುವಾಗ ಅನೇಕ ಹಾರ್ಮೋನುಗಳು, ರಾಸಾಯನಿಕಗಳು ಶರೀರದಲ್ಲಿ ಶೇಖರವಾಗಿ ಮಾಂಸ ಭಕ್ಷಣೆಗೆ ಅನರ್ಹವಾಗುತ್ತದೆ ಎನ್ನುತ್ತಾರೆ. ಜಟ್ಕಾ ಪದ್ಧತಿಯಲ್ಲಿ ಒಂದೇ ಏಟಿಗೆ ಪ್ರಾಣಿಯ ಶಿರಚ್ಚೇದನ ಮಾಡುವುದರಿಂದ ಪ್ರಾಣಿಯು ಕಡಿಮೆ ನರಳಿ ಸಾಯುವುದರಿಂದ ಪ್ರಾಣಿಯ “ಸಾಯುವ ಹಕ್ಕು” ಮಾನ್ಯತೆಗೊಳಗಾಗುತ್ತದೆ ಎನ್ನುತ್ತಾರೆ.

ಯಾವುದು ಸರಿ? ಯಾವುದು ತಪ್ಪು?
ಹಾಗಿದ್ದರೆ ವೈಜ್ಞಾನಿಕವಾಗಿ ಇದರ ಬಗ್ಗೆ ಚರ್ಚೆ ನಡೆಯುವುದು ಬೇಡವೇ? ಇದು ಅವಶ್ಯ ಸಹಾ. ಈ ವ್ಯವಸ್ಥೆಯನ್ನು ಹಲವಾರು ಆಯಾಮಗಳಲ್ಲಿ ನೋಡುವುದು ಅಗತ್ಯ. ಧಾರ್ಮಿಕ ಭಾವನೆಗಳು, ಪ್ರಾಣಿ ಹಿತದೃಷ್ಟಿ, ಗ್ರಾಹಕರ ಮಾನ್ಯತೆ ಇತ್ಯಾದಿಗಳು. ಇದಕ್ಕೆ ಪೂರಕವಾಗಿ ಒಂದಿಷ್ಟು ಅಂಕಿ ಅಂಶಗಳೂ ಸಹ ಅಗತ್ಯ. ಸಂಶೋಧನಾ ಲೇಖನಗಳು, ವಿಜ್ಞಾನಿಗಳ ಅಭಿಪ್ರಾಯ ಎಲ್ಲವನ್ನು ಮೇಲೈಸಿ ಹೇಳಬೇಕಾಗುತ್ತದೆ.

ಕೆಲವು ನಂಬಲರ್ಹವಾದ ಅಂಕಿ ಅಂಶಗಳನ್ನು ಗಮನಿಸಿದರೆ ಪ್ರಪಂಚದ ಶೇ 80-90 ರಷ್ಟು ಮಾಂಸಾಹಾರಪ್ರಿಯರಂತೆ. ಇದರಲ್ಲಿಯೂ ಸಹ 20-30 % ಜನ ನಿತ್ಯ ಮಾಂಸಾಹಾರಿಗಳು.., 30-70 % ಜನ ವಾರಾಂತ್ಯ ಮಾಂಸಾಹಾರಿಗಳು.. , 20-30 % ಜನ ಅಪರೂಪದ ಮಾಂಸಾಹಾರಿಗಳಂತೆ. ಪ್ರತಿ ದೇಶದಿಂದ ದೇಶಕ್ಕೆ ಇದರ ಅನುಪಾತ ಒಂದಿಷ್ಟು ವ್ಯತ್ಯಾಸವಾದರೂ ಸಹ ಮಾಂಸಾಹಾರ ಇಷ್ಟ ಪಡುವವರ ಸಂಖ್ಯೆಯೇ ಪ್ರಪಂಚದಲ್ಲಿ ಜಾಸ್ತಿ ಎನ್ನುವುದು ನಿರ್ವಿವಾದ. ಅರೆ ಸಸ್ಯಾಹಾರ (ಹಾಲು ಮತ್ತು ಮೊಟ್ಟೆ ಸೇವಿಸುವವರು) ಮತ್ತು ಪಕ್ಕಾ ಕರ್ಮಠ ಸಸ್ಯಾಹಾರ (“ವೇಗಾನ್”) ಎಂಬುದು ಇತ್ತೀಚೆಗೆ ಜನಪ್ರಿಯವಾಗುತ್ತಿರುವುದು ಬೇರೆ ಮಾತು.

ಮನುಷ್ಯ ಪ್ರಾಣಿಗಳನ್ನು ಸಾಕುವುದು ತನ್ನ ಸ್ವಾರ್ಥ, ಸುಖ, ಆಹಾರ ಲೋಲುಪತೆಗೆ ಹೊರತು ಪಡಿಸಿದರೆ ಪ್ರಾಣಿಗಳ ಮೇಲಿನ ಅನುಕಂಪ, ಕಾಳಜಿಯಿಂದ ಎಂಬುದು ಬಹಳ ವಿರಳ. ಆಕಳನ್ನು, ಎಮ್ಮೆಗಳನ್ನು ಸಾಕುವುದು ಅವುಗಳ ಹಾಲಿಂದ ಅವುಗಳ ಕರುಗಳನ್ನು ಸಾಕಲೆಂದು ಖಂಡಿತಾ ಅಲ್ಲ. ಅವುಗಳ ಹಾಲನ್ನು ಕರುಗಳಿಂದ ಬಲವಂತದಿಂದ ಕಸಿದುಕೊಂಡು ತಾವು ಸೇವಿಸಿ ಅಥವಾ ಮಾರಿ ಬದುಕಲೋಸುಗ ಅಥವಾ ಅವುಗಳ ಸಗಣಿ, ಗೊಬ್ಬರ ಗಂಜಳದ ಮೇಲಿನ ಆಸೆಯಿಂದ. ನಾಯಿ ಬೆಕ್ಕುಗಳನ್ನೂ ಸಾಕುವುದು ಮನೆ ಕಾಯಲಿ ಅಥವಾ ಇಲಿ ಹಿಡಿಯಲಿ, ಸಂಗಾತಿಯಾಗಿರಲಿ ಎಂದೇ ಹೊರತು ಅವುಗಳಿವೆ ಬಾಳು ನೀಡಲೆಂದು ಸಾಕುವವರು ಅಪರೂಪ. ಇದು ವೈಜ್ಞಾನಿಕವಾಗಿ ಸಾಬೀತಾದ ವಿಷಯ.

ಇನ್ನು ಭಾರತದಲ್ಲಿ ಕುರಿ, ಕೋಳಿ, ಮೇಕೆ, ಹಂದಿ ಇವುಗಳನ್ನು ಸಾಕುವುದು ಮನುಷ್ಯನ ಆಹಾರಕ್ಕೋಸ್ಕರವೇ ಹೊರತು ಅವುಗಳ ಮೇಲಿನ ಮಮತೆಯಿಂದಲ್ಲ. ಕೆಲ ರಾಜ್ಯಗಳನ್ನು ಹೊರತು ಪಡಿಸಿದರೆ ಆಕಳು, ಎತ್ತುಗಳು, ಕರುಗಳು, ಎಮ್ಮೆಗಳು ಎಲ್ಲವನ್ನೂ ಸಹ ಮಾಂಸಕ್ಕಾಗಿ ವಧೆ ಮಾಡುತ್ತಾರೆ. ವಿದೇಶಗಳಲ್ಲಂತೂ ಮಾಂಸಕ್ಕೆ ಎಂದೇ ವಿಶೇಷ ತಳಿಯ ಹಸುಗಳನ್ನು ಸಾಕಿ ವಧಿಸುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಗೋಹತ್ಯಾ ಕಾನೂನು ಜಾರಿಯಲ್ಲಿದ್ದು ಇದರ ಪ್ರಕಾರ ಯಾವುದೇ ವಯಸ್ಸಿನ ಗೋವು, ಎತ್ತು, ಕರು ಮತ್ತು 13 ವರ್ಷಗಳ ಒಳಗಿನ ಎಮ್ಮೆಗಳನ್ನು ವಧಿಸುವುದು ಅಪರಾಧ.

ವಧೆಯ ವಿಧಾನಗಳು ಯಾವುವು?
ಜಾಗತಿಕವಾಗಿ, ಎರಡು ವ್ಯಾಪಕವಾಗಿ ಹರಡಿರುವ ಧಾರ್ಮಿಕ ಪ್ರಾಣಿ ವಧೆ ವಿಧಾನಗಳೆಂದರೆ ಕೋಷರ್ (ಶೆಚಿತಾಹ್) ಮತ್ತು ಹಲಾಲ್ (ದಬಿಹಾ) ಇವು ಅನುಕ್ರಮವಾಗಿ ಯಹೂದಿಗಳು ಮತ್ತು ಮುಸ್ಲಿಮರು ಅನುಸರಿಸುವ ಒಂದೇ ಪ್ರಕ್ರಿಯೆಯ ವಿಭಿನ್ನ ಹೆಸರುಗಳಾಗಿವೆ. ವಿದೇಶಗಳಲ್ಲಿ ಅತ್ಯಾಧುನಿಕವಾದ ವಧಾಗಾರಗಳಿದ್ದರೆ ಈವತ್ತಿನ ವರೆಗೂ ಭಾರತದಲ್ಲಿ ಅತ್ಯಂತ ವ್ಯವಸ್ಥಿತ ವಧಾಗಾರಗಳಿಲ್ಲ ಮತ್ತು ವೈಜ್ಞಾನಿಕವಾಗಿ ಶುಚಿಯಾದ ಮಾಂಸವನ್ನು ನೀಡುವ ವ್ಯವಸ್ಥೆಯಿಲ್ಲವೆಂದೇ ಹೇಳಬಹುದು. ಪ್ರಾಣಿಗಳನ್ನು ಸಾಕುವುದೇ ನಮಗಾಗಿ ಎಂದಾಗ ಅವುಗಳನ್ನು ವಧೆ ಮಾಡುವುದೂ ನಮ್ಮದೇ ಹಕ್ಕು. ರಸ್ತೆಯ ಬದಿಗೆ, ಮಾಂಸ ಮಳಿಗೆಗಳಲ್ಲಿ, ಜಾತ್ರೆಗಳಲ್ಲಿ, ಬಲಿಯ ರೂಪದಲ್ಲಿ, ಕೆಲವೊಮ್ಮೆ ಬೇಟೆಯ ರೂಪದಲ್ಲಿ (ಈಗ ಇದಕ್ಕೆ ನಿಷೇಧವಿದೆ) ಪ್ರಾಣಿಗಳ ವಧೆ ನಡೆಯುತ್ತಿದೆ. ಪ್ರಾಣಿಗಳನ್ನು ಆಹಾರ ರೂಪದಲ್ಲಿ ಸೇವಿಸಿದಾಗ ಅವುಗಳ ಪ್ರತಿ ಭಾಗವೂ ಸಹ ಸೇವನೆಗೆ ಅರ್ಹ. ಸಾಮಾನ್ಯವಾಗಿ ಮಾಂಸವೆಂದರೆ ವೈಜ್ಞಾನಿಕವಾಗಿ ಒಂದು ಅಂಗಾಂಶ ಸಮೂಹ. ಅದು ಎಲುಬಿಗೆ ಅಂಟಿಕೊಂಡ  ಮಾಂಸವಿರಬಹುದು, ತಲೆಯ ವಿವಿಧ ಮಾಂಸವಿರಬಹುದು ಅಥವಾ ಜೀರ್ಣಾಂಗ ವ್ಯೂಹಕ್ಕೆ ಲಗತ್ತಾಗಿರುವ ಮೃದು ಮಾಂಸವಿರಬಹುದು, ಅಥವಾ ಲಿವರ್, ಕಿಡ್ನಿ, ಮೆದುಳು, ಗರ್ಭಕೋಶ ಅಥವಾ ಜನನಾಂಗದ ಯಾವುದೇ ಭಾಗವಿರಬಹುದು ಅವರವರ ಅಭಿರುಚಿಯ ಮೇಲೆಗೆ ಸೇವನೆಗೆ ಅರ್ಹ. ಕೆಲವರಿಗೆ ತಲೆ ಮಾಂಸ ಇಷ್ಟವಾದರೆ ಕೆಲವರಿಗೆ ಬೋಟಿ ಕಲಿಜಾ ಇಷ್ಟ. ಸದ್ಯಕ್ಕೆ ಭಾರತದಲ್ಲಿ ಪ್ರಾಣಿಗಳನ್ನು ವಧಿಸಲು ಅತ್ಯಂತ ಚಾಲ್ತಿಯಲ್ಲಿರುವುದು ಹಲಾಲ್ ಮತ್ತು ಜಟ್ಕಾ ಪದ್ಧತಿ. ಇದೇ ಪದ್ಧತಿಯ ಬಗ್ಗೆ ಈಗ ವ್ಯಾಪಕ ಚರ್ಚೆ ನಡೆಯುತ್ತಿರುವುದು.

ಏನಿದು ಹಲಾಲ್ ಪದ್ಧತಿ? ಈ ಪದ್ಧತಿಯಲ್ಲಿ ಪ್ರಾಣಿಯನ್ನು ಸರಿಯಾಗಿ ಬಂಧಿಸಿ ಕುತ್ತಿಗೆಯ ಭಾಗದಲ್ಲಿ ಅತ್ಯಂತ ಚೂಪಾಗಿರುವ ಚೂರಿಯಿಂದ ಅದರ ಅಪದಮನಿ ಮತ್ತು ಅಬಿಧಮನಿಗಳನ್ನು ವಾಯುನಳಿಕೆಯ ಸಮೇತ ಏಕಕಾಲದಲ್ಲಿ ಕತ್ತರಿಸುವುದು ವಾಡಿಕೆ. ಇದಕ್ಕೆ ಬಲಿದಾನವೆಂದೂ ಮತ್ತೊಂದು ಹೆಸರು. “ಹಲಾಲ್” ಎಂದರೆ ಅರೇಬಿಕ್ ಭಾಷೆಯಲ್ಲಿ ಅನುಮತಿ. ಇದು ಇಸ್ಲಾಮಿಕ್ ನಿಯಮದ ಪ್ರಕಾರ ಪ್ರಾಣಿಗಳನ್ನು ವಧಿಸಲು ಇರುವ ಕ್ರಿಯೆಯಾಗಿದೆ. ಈ ಪದವು ಪ್ರಾಣಿಗಳ ವಧೆಯನ್ನೂ ಸೇರಿಸಿದಂತೆ ಕೆಲವು ಆಹಾರ ಮತ್ತು ಪಾನೀಯವನ್ನು ಬಳಸುವುದಕ್ಕೂ ಅನ್ವಯವಾಗುತ್ತದೆ. ಹಲಾಲ್ ಪದ್ಧತಿಯ ಪ್ರಕಾರ ಪ್ರಾಣಿಗಳನ್ನು ವಧಿಸಲು ಮೂರು ವಿಧಾನಗಳಿವೆ. ಗಂಟಲನ್ನು ಸೀಳುವುದು (ದಭ್), ಚಾಕುವನ್ನು ಎದೆಯ ಮೂಳೆಯಲ್ಲಿ ಆಳವಾಗಿ ಹುಗಿಸುವುದು (ನಹ್ರ್), ಮತ್ತು ಇತರ ವಿಧಾನಗಳಲ್ಲಿ ಆಹಾರಕ್ಕಾಗಿ ಪ್ರಾಣಿಯನ್ನು ದೇವರಿಗೆ ಅರ್ಪಿಸಿ ವಧಿಸುವುದು(ಅಕ್ರ್). ಈ ವಿಧಾನದಲ್ಲಿ ಪ್ರಾಣಿಯನ್ನು ಕೊಲ್ಲುವ ಮೊದಲು ದೇವರ ಹೆಸರನ್ನು (ಬಿಸ್ಮಿಲ್ಲಾ) ಹೇಳಬೇಕು. ಕೊಲ್ಲುವಿಕೆಯು ಅತ್ಯಂತ ಕ್ಷಿಪ್ರವಾಗಿರಬೇಕು ಮತ್ತು ಕೊಲ್ಲಲ್ಪಟ್ಟ ಪ್ರಾಣಿಗೆ ಅರಿವಳಿಕೆಯಂತ ಯಾವುದೇ ಕ್ರಿಯೆಯಾಗಿರದೇ ಶುದ್ಧವಾಗಿರಬೇಕು. ಬಹಳ ಮುಖ್ಯವಾಗಿ ಎಷ್ಟು ಸಾಧ್ಯವೋ ಅಷ್ಟು ಪ್ರಮಾಣದಲ್ಲಿ ಮೃತದೇಹದಿಂದ ರಕ್ತವನ್ನು ಹೊರಹಾಕಬೇಕು. ಬಹಳ ಮುಖ್ಯವಾಗಿ ಇದನ್ನು ಧಾರ್ಮಿಕ ವ್ಯಕ್ತಿ ಮಂತ್ರವನ್ನು ಉಚ್ಚರಿಸುತ್ತಾ ಮೆಕ್ಕಾದೆಡೆ ಮುಖಮಾಡಿ ಪವಿತ್ರ ನೀರನ್ನು ಪ್ರಾಣಿಯ ಬಾಯಿಗೆ ಹಾಕಿದ ನಂತರ ಕುತ್ತಿಗೆ ಸೀಳಬೇಕು. ಈ ಪದ್ಧತಿಯಿಂದ ಪಡೆದ ಮಾಂಸವು ಭಕ್ಷ÷್ಯಯೋಗ್ಯ. ಧಾರ್ಮಿಕ ವ್ಯಕ್ತಿ ಲಭ್ಯವಿಲ್ಲದಿದ್ದಾಗ ಯಾವುದೇ ವಯಸ್ಕ ಮುಸ್ಲಿಂ ವ್ಯಕ್ತಿ ಹಲಾಲ್ ಮಾಡಬಹುದು. ಸಿದ್ದ ಪಡಿಸಿದ ಮಾಂಸವನ್ನು ಮಾರಾಟ ಮಾಡುವಾಗ ಅದಕ್ಕೆ ಧಾರ್ಮಿಕ ಸಂಘಟನೆಯಿಂದ ಪ್ರಮಾಣ ಪತ್ರವನ್ನು ನೀಡುವುದು ವಾಡಿಕೆ. ಇಸ್ಲಾಂ ಪ್ರಕಾರ ಪ್ರಾಣಿಯನ್ನು ವಧಿಸುವುದು ಅದರ ಮಾಂಸವನ್ನು ಆಹಾರವಾಗಿ ಉಪಯೋಗಿಸುವುದಕ್ಕೆ ಮತ್ತು ಪ್ರಾಣಿಯಿಂದ ಮನುಜರಿಗೆ ತೊಂದರೆಯಿದ್ದಾಗ ಮಾತ್ರ (ರೇಬಿಸ್ ಪೀಡಿತ ನಾಯಿ).
ಮೆದುಳಿಗೆ ರಕ್ತ ಸಾಗಿಸುವ ಕ್ಯಾರೊಟೀಡ್ ಅಪಧಮನಿ, ಮೆದುಳಿಂದ ರಕ್ತವನ್ನು ವಾಪಸ್ ತರುವ ಜುಗ್ಯುಲರ್ ಅಬಿಧಮನಿ, ವಾಯುನಾಳ ಅಥವಾ ಟ್ರೇಕಿಯಾ ಇವುಗಳನ್ನು ಏಕಕಾಲಕ್ಕೆ ಅತ್ಯಂತ ಹರಿತವಾದ ಆಯುಧದಿಂದ ಕತ್ತರಿಸುವ ಪದ್ಧತಿಯೇ ಹಲಾಲ್. ಈ ರೀತಿ ಕತ್ತರಿಸಿದಾಗ ಮೆದುಳಿಗೆ ಬಹುಮುಖ್ಯವಾದ ರಕ್ತದ ಸರಬರಾಜು ನಿಂತು ಹೋದರೂ ಸಹ ಅಲ್ಪಪ್ರಮಾಣದಲ್ಲಿ ಸಣ್ಣ ಪುಟ್ಟ ರಕ್ತನಾಳಗಳು ಸರಬರಾಜು ಮಾಡುತ್ತಿರುವುದರಿಂದ ಹಾಗೂ ಬೆನ್ನು ನರವು ಕೆಲಸ ನಿರ್ವಹಿಸುವುದರಿಂದ ಹೃದಯವೂ ಸಹ ಹೆಚ್ಚಿಗೆ ಕೆಲಸ ಮಾಡಲು ಪ್ರಯತ್ನಿಸುತ್ತಾ ಮೆದುಳಿಗೆ ರಕ್ತ ಒದಗಿಸಲು ಜೋರಾಗಿ ಹೊಡೆದುಕೊಳ್ಳುತ್ತದೆ. ಆದರೆ ರಕ್ತನಾಳಗಳು ತುಂಡಾಗಿರುವುದರಿಂದ ಎಲ್ಲಾ ರಕ್ತವು ಹೊರಚಿಮ್ಮುತ್ತದೆ. ಸುಮಾರು 5-10 ನಿಮಿಷದಲ್ಲಿ ಹೃದಯ ಕೆಲಸ ನಿಲ್ಲಿಸುವುದರಿಂದ ಶೆ: 30-50 ರಷ್ಟು ರಕ್ತ ಶರೀರದಿಂದ ಹೊರಬರುತ್ತದೆ. ರಕ್ತ ಹೊರಚಿಮ್ಮಿದ ನಂತರ ಮಾಂಸವನ್ನು ಸಂಗ್ರಹಿಸುವ ಗುಣಮಟ್ಟವೂ ಸಹ ಜಾಸ್ತಿಯಾಗುತ್ತದೆ ಎಂಬುದು ಪ್ರತೀತಿ.

ಏನಿದು ಜಟ್ಕಾ ಕಟ್ ಪದ್ಧತಿ?
ಜಟ್ಕಾ ಪದ್ಧತಿಯು ಮೂಲತ ಪಂಜಾಬಿನ ಸಿಖ್ಖರ ಮೂಲದಿಂದಾಗಿದ್ದು ಇದು ಹಿಂದು ಮತ್ತು ಸಿಖ್ ಧರ್ಮಗಳಿಂದಲೂ ಸಹ ಅನುಸರಿಸಲ್ಪಡುತ್ತದೆ. ಈ ಪದ್ಧತಿಯ ಪ್ರಾಣಿ ವಧೆಯಲ್ಲಿ ಹರಿತವಾದ ಆಯುಧದ ಬಲವಾದ ಒಂದೇ ಏಟಿಗೆ ರುಂಡ ಮುಂಡದಿಂದ ಬೇರ್ಪಡುತ್ತದೆ. ಇದರಲ್ಲಿ ಕುತ್ತಿಗೆಯ ನರ, ಮೆದುಳಿಗೆ ರಕ್ತ ಪೂರೈಸುವ ಎಲ್ಲಾ ರಕ್ತ ನಾಳಗಳು, ಶ್ವಾಸನಾಳ ತುಂಡಾಗುವುದರಿಂದ ಪ್ರಾಣಿಗೆ ಉಂಟಾಗುವ ನೋವು ಕಡಿಮೆ ಎನ್ನುವುದು ಪ್ರತೀತಿ. ಪಂಜಾಬಿನಲ್ಲಿ ಈ ಪದ್ಧತಿಯಿಂದ ಪಡೆದ ಮಾಂಸವನ್ನು “ಕುಥಾ” ಮಾಂಸವೆಂದು ಕರೆಯುತ್ತಾರೆ. ಬಹುತೇಕ ಹಿಂದು ಪದ್ಧತಿಯ ಹಬ್ಬ ಹರಿದಿನಗಳಲ್ಲಿ, ದೇವರಿಗೆ ಸಮರ್ಪಣೆಯ ಸಮಯದಲ್ಲಿ ಈ ಪದ್ಧತಿಯನ್ನೇ ಅನುಸರಿಸುವ ವಾಡಿಕೆ ಇದೆ. ಪ್ರಾಣಿಯು ಸಾವನ್ನಪ್ಪುವಾಗಲೂ ಸಹ ಗೌರವಯುತ ನಿರ್ಗಮನ ಹೊಂದಬೇಕು ಎಂಬುದು ಈ ಪದ್ಧತಿಯ ಮೂಲ ಉದ್ಧೇಶ. ಆದರೆ ಖಾಲ್ಸಾ ಪಂಗಡದ ಸಿಖ್ಖರು ಈ ಪದ್ಧತಿಯನ್ನು ಅಷ್ಟಾಗಿ ಒಪ್ಪುವುದಿಲ್ಲ. ಸಿಖ್ಖರೂ ಸಹ ಹಿಂದುಗಳಂತೆಯೇ ಗೋ ಮಾಂಸ, ಎತ್ತಿನ ಮಾಂಸವನ್ನು ತಿನ್ನಲು ಇಷ್ಟ ಪಡುವುದಿಲ್ಲ ಅಲ್ಲದೇ ಹಲಾಲಿನಂತ ನಿಧಾನವಾಗಿ ಸಾಯಿಸಿ ಮಾಂಸ ಪಡೆಯುವ ವಿಧಾನವನ್ನು ಇಷ್ಟ ಪಡುವುದಿಲ್ಲ.

ಜಟ್ಕಾ ಪದ್ಧತಿಯಲ್ಲಿ ಒಂದೇ ರಭಸವಾದ ಹರಿತ ಕತ್ತಿಯ ಏಟಿಗೆ ಕುತ್ತಿಗೆಯ ನರಗಳು, ಎಲ್ಲಾ ರಕ್ತ ನಾಳಗಳು ಮತ್ತು ಶ್ವಾಸ ನಾಳ ಕಟಾವಣೆಯಾಗುವುದರಿಂದ ಪ್ರಾಣಿಗೆ ನೋವಿನ ಅರಿವು ಕಡಿಮೆಯಾಗುತ್ತದೆ. ಇದರಲ್ಲಿ ಸುಮಾರು ಶೇ:15-20 % ರಕ್ತವು ಹೊರಗೆ ಬಸಿದು ಹೋಗುತ್ತದೆ. ಕಾರಣ ಮಾಂಸದ ಗುಣಮಟ್ಟವೂ ಸಹ ತೀರಾ ಕಡಿಮೆಯಾಗುವುದಿಲ್ಲ.

ಹಿಂದುಗಳು ಅನಾದಿ ಕಾಲದಿಂದಲೂ ಸಹ ವಿವಿಧ ಪದ್ಧತಿಯಲ್ಲಿ ಪ್ರಾಣಿಗಳನ್ನು ವಧಿಸುವ ಪದ್ಧತಿ ಹೊಂದಿದ್ದಾರೆ. ಕುತ್ತಿಗೆಯ ಭಾಗದಲ್ಲಿ ಹರಿತವಾದ ಕತ್ತಿ ಉಪಯೋಗಿಸಿ ರಕ್ತನಾಳ ಮತ್ತು ಶ್ವಾಸನಾಳನ್ನು ಕಟಾವಣೆ ಮಾಡಿ ವಧಿಸುವ ಪದ್ಧತಿಯನ್ನು ಪಾಲಿಸಿದರೂ ಸಹ ಇದಕ್ಕೆ “ಹಲಾಲ್” ಎಂಬಿತ್ಯಾದಿ ಹೆಸರಿಟ್ಟಿರಿಲಿಲ್ಲ ಮತ್ತು ಯಾವುದೇ ಧಾರ್ಮಿಕ ಪ್ರಕ್ರಿಯೆಗಳನ್ನು ಇದಕ್ಕಾಗಿಯೇ ಅನುಸರಿಸುವ ಪದ್ಧತಿಯನ್ನು ಹೊಂದಿರಲಿಲ್ಲ. ದೇವರ ಬಲಿಗೆ, ಹರಕೆ ಕಟ್ಟಿಕೊಂಡಾಗ, ಧಾರ್ಮಿಕ ಹಬ್ಬ ಹರಿದಿನಗಳಲ್ಲಿ ಹಿಂದುಗಳು ಅನುಸರಿಸುವುದು ಮಾತ್ರ ಒಂದೇ ಏಟಿಗೆ ರುಂಡ ಎಗರಿಸುವ “ಜಟ್ಕಾ” ಪದ್ಧತಿಯನ್ನು. ಧಾರ್ಮಿಕವಾದ ಭಾವನೆಯಲ್ಲಿಯೇ ಯೋಚಿಸಬೇಕೆಂದರೆ ಒಂದು ದೇವರಿಗೆ ನೈವೇದ್ಯ ಮಾಡಿದ ಖಾದ್ಯಗಳನ್ನು ಮತ್ತೊಮ್ಮೆ ಇನ್ನೊಂದು ದೇವರಿಗೆ ನೈವೈದ್ಯ ಮಾಡುವುದು ಸಲ್ಲ ಎನ್ನುತ್ತಾರೆ.

ಪ್ರಾಣಿ ಕಲ್ಯಾಣದ ನಿಯಮಗಳು ಏನು ಹೇಳುತ್ತವೆ?

ಇತ್ತೀಚೆಗೆ ಪ್ರಾಣಿ ಕಲ್ಯಾಣದ ಪರವಾಗಿ ಧ್ವನಿ ಎತ್ತುವವರ ಸಂಖ್ಯೆ ಅಧಿಕಗೊಂಡಿದೆ. ಸಂಶೋಧನೆಯಲ್ಲಂತು ಪ್ರಾಣಿಗಳ ಬಳಕೆ ಭಾರತ ಸರ್ಕಾರದ ಪ್ರಾಣಿಕಲ್ಯಾಣ ಮಂಡಳಿಯ ಕಠಿಣ ನೀತಿ ನಿಯಮಗೊಳಪಟ್ಟಿದ್ದು ನಿಖರವಾಗಿ ಪಾಲಿಸಲ್ಪಡುತ್ತಿದೆ. ಆದರೆ ಮಾಂಸಕ್ಕಾಗಿ ಪ್ರಾಣಿವಧೆಗಳ ಬಗ್ಗೆ ಸಾಕಷ್ಟು ನಿಯಮಗಳಿದ್ದರೂ ಸಹ ಕಠಿಣವಾಗಿ ಇವು ಪಾಲನೆಯಾಗದಿರುವುದು ಖೇದದ ಸಂಗತಿ. ಪೇಟಾದಂತ ವಿವಿಧ ಪ್ರಾಣಿ ಪ್ರಿಯರ ಸಂಘಗಳು ಪ್ರಾಣಿಹಿಂಸೆಯನ್ನು ಮತ್ತು ಪ್ರಾಣಿವಧೆಯನ್ನು ಸಂಪೂರ್ಣವಾಗಿ ವಿರೋಧಿಸುತ್ತವೆ. ಪ್ರಾಣಿಗಳಿಗೆ ಬದುಕುವ ಹಕ್ಕು ಕೊಡಬೇಕು, ಇಲ್ಲವಾದರೆ ಅವು ಸುಖವಾಗಿಯಾದರೂ ಸಾಯುವ ಹಕ್ಕು ಹೊಂದಿವೆ ಎಂಬುದು ಅವರ ಪ್ರತಿಪಾದನೆ. ಪ್ರಾಣಿಗಳು ಮನುಷ್ಯರ ಆಹಾರಕ್ಕೆಂದೇ ಸಾಕಲ್ಪಟ್ಟರೂ ಸಹ ಅವುಗಳ ಸಾವು ಗೌರವಯುತವಾಗಿರಬೇಕೆಂಬುದು, ಕಡಿಮೆ ಹಿಂಸೆಯಿ0ದ ಕೂಡಿರಬೇಕೆಂಬುದು ಅವರ ವಾದ. ಹಲಾಲ್ ಪದ್ಧತಿಯಲ್ಲಿ ಪ್ರಾಣಿಯ ಮೆದುಳು ಮತ್ತು ಬೆನ್ನು ಹುರಿಗಳು ಕಟಾವಣೆಯಾಗದೇ ಇರುವುದರಿಂದ ಮತ್ತು ಹೆಚ್ಚಿನ ಸಮಯ ಅವುಗಳ ಚಡಪಡಿಕೆ ಇರುವುದರಿಂದ ನೋವಿನಿಂದ ನರಳುವ ಸಮಯ ಜಾಸ್ತಿ ಎಂಬುದು ವಾದ. ಅಲ್ಲದೇ ಬೆನ್ನು ಹುರಿಯ ನರವು ಮೆದುಳಿನಿಂದ ಸಂಪೂರ್ಣವಾಗಿ ಬೇರ್ಪಡದಿರುವುದರಿಂದ ಹಾಗೂ ಪ್ರಮುಖ ರಕ್ತನಾಳಗಳು ತುಂಡಾದರೂ ಕಶೇರುಕ ಮಣಿಯ ಪಕ್ಕದಿಂದ ಮೆದುಳು ಸೇರುಬ ಸಣ್ಣ ಪುಟ್ಟ ರಕ್ತ ನಾಳಗಳು ಮೆದುಳಿಗೆ ಸಣ್ಣ ಪ್ರಮಾಣದಲ್ಲಿ ರಕ್ತ ಪೂರೈಸುವುದರಿಂದ ಮೆದುಳು ಮತ್ತು ನರಗಳು ಜೀವಂತ ಇರುವುದರಿಂದ ಸಂವೇಧನೆಯು ಇರುವುದರಿಂದ ಅವು ಜಾಸ್ತಿ ಸಮಯ ನೋವಿನಿಂದ ಪರಿತಪಿಸುವುದು ನಿಜವೆನ್ನುತ್ತದೆ ಸಾಮಾನ್ಯ ಜ್ಞಾನ. ಒಂದೇ ಸಾರಿ ಹರಿತವಾದ ಕತ್ತಿಯ ಏಟಿನಿಂದ ರುಂಡವನ್ನು ಎಗರಿಸುವ ಜಟ್ಕಾ ಪದ್ಧತಿಯಲ್ಲಿ ರಕ್ತನಾಳಗಳು, ಬೆನ್ನು ಹುರಿಯ ನರ, ಶ್ವಾಸನಾಳ ಎಲ್ಲವೂ ಸಹ ಒಮ್ಮೆಯೇ ತುಂಡರಿಸಿ ಹೋಗುವುದರಿಂದ ನೋವಿನ ಪ್ರಮಾಣ ಕಡಿಮೆ ಎಂಬುದನ್ನು ತಾರ್ಕಿಕವಾಗಿ ಒಪ್ಪಬಹುದು.

ವಿಜ್ಞಾನಿಗಳ ಅಭಿಪ್ರಾಯವೇನು?

ವೈಜ್ಞಾನಿಕ ಪದ್ಧತಿಯ ಪ್ರಕಾರ ಮೊದಲು ಪ್ರಾಣಿಯ ಪ್ರಜ್ಞೆ ತಪ್ಪಿಸಿ ನಂತರ ಅದನ್ನು ಹಲಾಲ್ ಅಥವಾ ಜಟ್ಕಾ ಮಾಡಿ ವಧಿಸಿದರೆ ಅತ್ಯಂತ ಕಡಿಮೆ ನೋವಿನಿಂದ ಅದು ಸಾಯುತ್ತದೆ. ಇದನ್ನು ಸ್ಟನ್ನಿಂಗ್ ಎಂದು ಕರೆಯುತ್ತಾರೆ. ಪ್ರಾಣಿ ವಧೆಯ ಸಂದರ್ಭದಲ್ಲಿ ಜಾಸ್ತಿ ನೋವನ್ನು ಅನುಭವಿಸಿದರೆ ಮಾಂಸದ ಗುಣಮಟ್ಟ ಕೆಡುತ್ತದೆ ಎನ್ನುತ್ತವೆ ಅನೇಕ ವೈಜ್ಞಾನಿಕ ಲೇಖನಗಳು. ವೈಜ್ಞಾನಿಕವಾಗಿ ಪ್ರಾಣಿವಧೆಗೆ ಅನೇಕಾನೇಕ ಪದ್ಧತಿಗಳಿದ್ದು ಜಗತ್ತಿನಾದ್ಯಂತ ಪಾಲಿಸಲ್ಪಡುತ್ತವೆ. ಪ್ರಾಣಿಯನ್ನು ಪ್ರಜ್ಞೆ ತಪ್ಪಿಸಿ ಕುತ್ತಿಗೆಯ ರಕ್ತನಾಳಗಳನ್ನು ಕತ್ತರಿಸುವುದರಿಂದ ರಕ್ತವೂ ಸಹ ಜಾಸ್ತಿ ಬಸಿದಷ್ಟೂ ಸಹ ಮಾಂಸದ ಸಂಗ್ರಹ ಗುಣಮಟ್ಟ ಜಾಸ್ತಿಯಾಗುವುದರಿಂದ ಅದನ್ನು ಜಾಸ್ತಿ ಕಾಲ ಶೀತಲ ವಾತಾವರಣದಲ್ಲಿ ಸಂಗ್ರಹಿಸಿಡಬಹುದು ಎನ್ನುತ್ತಾರೆ ಪ್ರಾಣಿ ಉತ್ಪನ್ನಗಳ ವಿಜ್ಞಾನಿಗಳು. ಪ್ರಾಣಿಗಳನ್ನು ವಧಿಸಬೇಕಾದರೆ ಮೊದಲೇ ಪ್ರಜ್ಞೆ ತಪ್ಪಿಸುವುದು ಕಡ್ಡಾಯ. ವೈಜ್ಞಾನಿಕ ರೀತಿಯ ಆಧುನಿಕ ವಧಾಗಾರದಲ್ಲಿಯೇ ವಿವಿಧ ಧಾರ್ಮಿಕ ಪದ್ಧತಿಯ ವಿಧಾನಗಳನ್ನು ಅನುಸರಿಸಿ ಮಾಂಸವಿತರಣೆಯ ವ್ಯವಸ್ಥೆಯನ್ನು ಮಾಡುವ ವ್ಯವಸ್ಥೆಯ ಬಗ್ಗೆಯೂ ಸಹ ಚಿಂತನೆ ಅವಶ್ಯ. ಆದರೆ ಆಧುನಿಕ ವಧಾಗಾರದಲ್ಲಿಯೇ ವೈಜ್ಞಾನಿಕ ವಿಧಾನದಲ್ಲಿಯೇ ಪ್ರಾಣಿ ಕಲ್ಯಾಣ ವಿಧಾನ ಅನುಸರಿಸಿ ವಧೆ ಮಾಡುವುದು ಕಡ್ಡಾಯವಾಗಬೇಕು.

ರಕ್ತ ಬಸಿಯುವುದರಿಂದ ಏನು ಲಾಭ?
1. ರಕ್ತವು ಅನೇಕ ಸೂಕ್ಷ್ಮಣುಗಳು ಬೆಳೆಯಲು ಉತ್ತಮ ಮಾಧ್ಯಮವಾಗಿರುವುದರಿಂದ ಮಾಂಸದಲ್ಲಿ ರಕ್ತದ ಪ್ರಮಾಣವು ಕಡಿಮೆಯಿದ್ದಷ್ಟೂ ಸಹ ಅದನ್ನು ಜಾಸ್ತಿ ದಿನ ಸಂಗ್ರಹಿಸಿ ಇಡಬಹುದು.
2. ಮಾಂಸವನ್ನು ರಫ್ತ್ತು ಮಾಡುವಾಗ ಅದರಲ್ಲಿ ರಕ್ತ ಕಡಿಮೆಯಿದ್ದಷ್ಟು ಸಹ ಬೇಡಿಕೆ ಹೆಚ್ಚುವುದು.
3. ರಕ್ತ ಕಡಿಮೆಯಿದ್ದರೆ ಮಾಂಸದ ಬಾಹ್ಯ ನೋಟದ ಗುಣಮಟ್ಟವೂ ಸಹ ಹೆಚ್ಚುತ್ತದೆ.
4. ಮಾಂಸವು ಜಾಸ್ತಿ ಹೊಂದಿದ್ದರೆ ಅದರ ಪರಿಮಳ ಮತ್ತು ರುಚಿಯೂ ಸಹ ಒಂದಿಷ್ಟು ಜಾಸ್ತಿ ಎಂದು ಕೆಲವರ ಅಭಿಪ್ರಾಯ.
ಈ ಕೆಳಗಿನ ವಿಷಯಗಳಿಗೆ ವೈಜ್ಞಾನಿಕ ಸಹಮಿತ ಅಥವಾ ಆಧಾರಗಳಿಲ್ಲ.
1. ಆದರೆ ರಕ್ತವು ಹೊರಹೋಗುವುದರಿಂದ ಶರೀರದಲ್ಲಿನ ಕಲ್ಮಶವೆಲ್ಲಾ ಹೊರಗೆ ಹೋಗಿಬಿಡುತ್ತದೆ. ಕೆಲವೊಮ್ಮೆ ಕಲ್ಮಶಗಳು ಅಂದರೆ ವಿಷವಸ್ತುಗಳು ಮಾಂಸಖ0ಡ, ಎಲುಬು, ಮೇದಸ್ಸು ಇತ್ಯಾದಿಗಳಲ್ಲಿ ಶೇಖರವಾಗುವುದರಿಂದ ರಕ್ತ ಬಸಿದರೆ ಪ್ರಾಣಿಯ ಶರೀರ ಶುದ್ಧವಾಗುತ್ತದೆ ಎಂಬುದಕ್ಕೆ ಅರ್ಥವಿಲ್ಲ.
2. ಪ್ರಾಣಿಯನ್ನು ಬಹಳ ಹೊತ್ತು ನೋವಿಗೆ ಗುರಿಪಡಿಸಿದರೆ ಅದರಲ್ಲಿ ವಿಷಕಾರಕ ವಸ್ತುಗಳು ಮತ್ತು ಶೇಖರವಾಗಿ ಅವು ಮಾಂಸದಲ್ಲಿ ಬಂದು ಅದರಿಂದ ಮನುಷ್ಯನಿಗೆ ತೊಂದರೆಯಾಗುತ್ತದೆ ಎಂಬುದರಲ್ಲಿ ಹುರುಳಿಲ್ಲ.
3. ಪ್ರಾಣಿಯ ಮರಣ ಭಯದಿಂದ ತತ್ತರಿಸುವಾಗ ಶರೀರದಲ್ಲೇ ಉತ್ಪನ್ನವಾಗುವ ಅಡ್ರಿನಾಲಿನ್, ಹಿಸ್ಟಮಿನ್ ಇತ್ಯಾದಿಗಳು ಮಾಂಸದಲ್ಲಿ ಶೇಖರವಾಗಿ ಮನುಷ್ಯನ ಹೊಟ್ಟೆ ಸೇರಿ ತೊಂದರೆ ಕೊಡುತ್ತದೆ ಎಂಬುದಕ್ಕೂ ಆಧಾರಗಳಿಲ್ಲ. ಆದರೆ ಪ್ರಾಣಿ ಪ್ರಾಣ ಭಾಯದಿಂದ ತತ್ತರಿಸಬಾರದು ಎಂಬುದು ಪ್ರಾಣಿ ಕಲ್ಯಾಣ ದೃಷ್ಟಿಯಿಂದ ಸರಿ.
ಮಾಂಸಕ್ಕೂ ಸಹ ಯಾವುದೇ ಆಹಾರ ವಸ್ತುವಿಗೆ ಭಾರತ ಸರ್ಕಾರದ ಆಹಾರ ಸುರಕ್ಷತಾ ಪ್ರಾಧಿಕಾರದ ಮಾನ್ಯತೆ ಪಡೆದ ಅಂಗೀಕೃತ ಮಾನದಂಡಗಳು ಆಧಾರವಾಗಬೇಕು ಮತ್ತು ಎಲ್ಲಾ ಆಹಾರದಂತೇ ಮಾಂಸವೂ ಸಹ ಶುಚಿ ರುಚಿಯಾಗಿ ರೋಗರಹಿತವಾಗಿ ಗ್ರಾಹಕರಿಗೆ ದೊರಕಬೇಕು ಎನ್ನುತ್ತದೆ ವಿಜ್ಞಾನ.

ಮುಂದೇನು?

ಮಾಂಸದಂಗಡಿ ಎಲ್ಲೆಂದೆಡೆ ನಾಯಿಕೊಡೆಗಳಂತೆ ನಿಯಮ ಪಾಲಿಸದೇ ತಲೆ ಎತ್ತಿರುವುದರಿಂದ ಮತ್ತು ಇಲ್ಲಿ ಅತ್ಯಂತ ಗಲೀಜಾಗಿ ಯಾವುದೇ ಪ್ರಾಣಿಕಲ್ಯಾಣ ವಿಧಾನಗಳನ್ನು, ಶುಚಿತ್ವದ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸುವುದರಿಂದ ಇಲ್ಲಿ ತಯಾರಾಗುವ ಯಾವುದೇ ಪದ್ಧತಿಯ ಮಾಂಸ ಗ್ರಾಹಕರ ಆರೋಗ್ಯಕ್ಕೆ ಮಾರಕ. ಪ್ರತಿ ಪದ್ಧತಿಯಲ್ಲಿಯೂ ಸಹ ಅದರದೇ ಆದ ಗುಣಾವಗುಣಗಳಿರುವುದರಿಂದ ಆಧುನಿಕ ಪದ್ಧತಿಯ ವಧಾಗಾರಗಳನ್ನು ಎಲ್ಲೆಡೆ ನಿರ್ಮಿಸಿ ಗ್ರಾಹಕರಿಗೆ ಶುಚಿ, ರುಚಿಯಾದ ಮಾಂಸವನ್ನು ನೀಡುವುದು ಆಧ್ಯತೆಯಾಗಬೇಕೇ ವಿನ: ಯಾವ ಪದ್ಧತಿ ಒಳ್ಳೆಯದು ಎಂಬೆಲ್ಲಾ ಗೌಣವೆನ್ನುತ್ತಾರೆ ಜಾನುವಾರು ಉತ್ಪಾದನೆ ಮತ್ತು ಉತ್ಪನ್ನ ತಂತ್ರಜ್ಞಾನ ವಿಭಾಗದ ವಿಜ್ಞಾನಿಗಳು. ಕುರಿ ಸಾಕಣೆ, ಕೋಳಿ ಸಾಕಣೆ, ಹಂದಿ ಸಾಕಣೆ ಇವು ಗ್ರಾಮೀಣ ಭಾಗದ ಜಮೀನು ರಹಿತ ಕಾರ್ಮಿಕರ, ಸಣ್ಣ ರೈತರ ಆರ್ಥಿಕ ಜೀವನಾಡಿಯಾಗಿರುವುದರಿಂದ ಅವುಗಳ ವಧೆ ಅನಿವಾರ್ಯವಾದರೂ ಸಹ ಅದನ್ನು ನೋವು ರಹಿತವಾಗಿ ಧಾರ್ಮಿಕ ವಿಧಾನಗಳನ್ನೂ ಸಹ ಅನುಸರಿಸಿ ವೈಜ್ಞಾನಿಕವಾಗಿ ಮಾಡಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯಾದರೆ ಗೌರವಯುತ ಸಮಾಜಕ್ಕೆ ಒಳ್ಳೆಯದು. ಧರ್ಮವನ್ನೂ ಮೀರಿ ವೈಜ್ಞಾನಿಕ ಮನೋಭಾವ ಮೂಡುವುದು ಆರೋಗ್ಯಕರ ಸಮಾಜಕ್ಕೆ ನಾಂದಿ. ಉತ್ತಮ ಗುಣಮಟ್ಟದ, ಶುಚಿ ರುಚಿಯಾದ ಮಾಂಸವನ್ನು ಆಹಾರವಾಗಿ ಉತ್ತಮ ಮಳಿಗೆಯಿಂದ ಯೋಗ್ಯ ದರದಲ್ಲಿ ಪಡೆಯುವ ಹಕ್ಕು ಗ್ರಾಹಕರಾಗಿದ್ದು ಇದನ್ನು ಗ್ರಾಹಕರೇ ತೀರ್ಮಾನಿಸಬೇಕು.

ಕೃಪೆ – ಡಾ: ಎನ್ ಬಿ.ಶ್ರೀಧರ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ
ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ

ADVERTISEMENT
ADVERTISEMENT

ಆಯ್ದ ಆಕರಗಳು:

1. Animal Welfare Board of India Ministry of Environment Forests & Climate Change,2018.  Guide to Animal Welfare Laws Target group – Law enforcement agencies., Government of India.
2. Bozzo G, Barrasso R, Marchetti P, Roma R, Samoilis G, Tantillo G, Ceci E. 2018.Analysis of Stress Indicators for Evaluation of Animal Welfare and Meat Quality in Traditional and Jewish Slaughtering. Animals (Basel)..  8(4):44-54.
3. Ceci E, Marchetti P, Samoilis G, Sportelli S, Roma R, Barrasso R, Tantillo G, Bozzo G. 2017. Determination of plasmatic cortisol for evaluation of animal welfare during slaughter. Ital J Food Saf.6(3):6912.
4. Dario G Pighin, Sebastian A Cunzolo Maria Zimerman Adriana A Pazos Ernesto Domingo Anibal J Pordomingo Gabriela Grigioni., 2013.  Impact of Adrenaline or Cortisol Injection on Meat Quality Development of Merino Hoggets. Journal of Integrative Agriculture. 12 (11): 1931-1936.
5. Ferguson DM and Warner RD, 2008. Have we underestimated the impact of pre-slaughter stress on meat quality in ruminants?. Meat Sci.80: 12-19.
6. Fuseini, A., Knowles, T. G., Lines, J., Hadley, P. J., & Wotton, S. B.,2016. The stunning and slaughter of cattle within the EU: A review of the current situation with regard to the halal market. Animal Welfare, 25(3): 365-376.
7. Gibson TJ, Johnson CB, Murrell JC, Hulls CM, Mitchinson SL, Stafford KJ, Johnstone AC, Mellor DJ, 2009. Electroencephalographic responses of halothane – anaesthetised calves to slaughter by ventral-neck incision without prior stunning..N Z Vet J. 57(2):77-83.
8. Gill CO, Newton KG. 1982. Effect of lactic acid concentration on growth on meat of Gram-negative psychrotrophs from a meatworks. Appl Environ Microbiol. 43(2):284-288.
9. Grandin, T. 1980.The effect of stress on livestock and meat quality prior to and during slaughter. International Journal for the Study of Animal Problems,. 1(5): 313-337.
10. Gregory, N. G., Fielding, H. R., von Wenzlawowicz, M. and von Hollenben, K., 2010.Time to collapse following slaughter without stunning in cattle.  Meat Sci.  82: 66-69.
11. Holson RR., 1992.  Euthanasia by decapitation: Evidence that this technique produces prompt, painless unconsciousness in laboratory rodents. Neurotoxicol Teratol. 14(4):253-7.
12. Johnson CB, Mellor DJ, Hemsworth PH, Fisher AD, 2015. A scientific comment on the welfare of domesticated ruminants slaughtered without stunning. N Z Vet J. 63(1):58-65.
13. Mellor DJ, Gibson TJ, Johnson CB., 2009.  A re-evaluation of the need to stun calves prior to slaughter by ventral-neck incision: An introductory review. N Z Vet J. 57(2):74-76.
14. Nakyinsige K, Che Man YB, Aghwan ZA, Zulkifli I, Goh YM, Abu Bakar F, Al Kahtani HA and Sazili AQ, 2013. Stunning and animal welfare from Islamic and scientific perspectives. Meat Sci. 2013. 95: 352-361.
15. Petty DB, Hattingh J, Ganhao MF, Bezuidenhout L.1994. Factors which affect blood variables of slaughtered cattle. J S Afr Vet Assoc. 65(2):41-5.
16. Pozzi, P.; Geraisy, W.; Barakeh, S.; Azaran, M. Principles of Jewish and Islamic Slaughter with Respect to OIE (World Organization for Animal Health) Recommendations. Isr. J. Vet. Med. 2015, 70, 3.
17. Souvik Dey, 2019. Halal versus Jhatka: A scientific review. pragyata.com
18. Terlouw C, Bourguet C, Deiss V., 2016. Consciousness, unconsciousness and death inthe context of slaughter. Part I. Neurobiological mechanisms underlying stunning and killing.  Meat Sci. 118:133-146.
19. Time to collapse following slaughter without stunning in cattle. Gregory NG, Fielding HR, von Wenzlawowicz M, von Holleben K. Meat Sci. 2010. Vol 85(1):66-9. 
20. Zdun M, Frąckowiak H, Kiełtyka-Kurc A, Kowalczyk K, Nabzdyk M, Timm A.,2013. The arteries of brain base in species of Bovini tribe. Anat Rec (Hoboken). 296(11):1677-1682.

  1. Daymand Satta
  2. Diamond Exchange 9
  3. Betln Exchange
  4. Daimand Satta Com
  5. Satsport Exchange
Tags: Scintific analysisಜಟ್ಕಾಹಲಾಲ್
ADVERTISEMENT
Previous Post

ಪುನೀತ್ ರಾಜ್ ಕುಮಾರ್ ಮನೆಗೆ ರಾಹುಲ್ ಗಾಂಧಿ ಭೇಟಿ – ಆಶ್ವಿನಿ ಪುನೀತ್ ರಾಜ್ ಕುಮಾರ್ ಗೆ ಸಾಂತ್ವನ

Next Post

ದೇಶವಾಸಿಗಳಿಗೆ ಯುಗಾದಿ ಗಿಫ್ಟ್ – ಗ್ಯಾಸ್ ಸಿಲಿಂಡರ್ ಬೆಲೆ ಬರೋಬ್ಬರಿ 273 ರೂಪಾಯಿ ಹೆಚ್ಚಳ

Related Posts

700ಕ್ಕೂ ಹೆಚ್ಚು ಶವಪರೀಕ್ಷೆ ಮಾಡಿದ ಮಹಿಳೆಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ!
News

700ಕ್ಕೂ ಹೆಚ್ಚು ಶವಪರೀಕ್ಷೆ ಮಾಡಿದ ಮಹಿಳೆಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ!

by PratikshanaNews
15th January 2024
ಭಾನುವಾರ ಈ ಕೆಲಸಗಳನ್ನು ಮಾಡುವುದರಿಂದ ಸೂರ್ಯ ದೇವನ ಕೃಪೆಗೆ ಪಾತ್ರರಾಗುತ್ತೀರಾ….!
Lifestyle

ಭಾನುವಾರ ಈ ಕೆಲಸಗಳನ್ನು ಮಾಡುವುದರಿಂದ ಸೂರ್ಯ ದೇವನ ಕೃಪೆಗೆ ಪಾತ್ರರಾಗುತ್ತೀರಾ….!

by PratikshanaNews
17th December 2023
Astrology Tips: ಅಪ್ಪಿತಪ್ಪಿಯೂ ಶುಕ್ರವಾರದಂದು ಈ ಕೆಲಸ ಮಾಡಬೇಡಿ…!
Astrology

Astrology Tips: ಅಪ್ಪಿತಪ್ಪಿಯೂ ಶುಕ್ರವಾರದಂದು ಈ ಕೆಲಸ ಮಾಡಬೇಡಿ…!

by PratikshanaNews
15th December 2023
Kantara Sequel: ಕಾಂತಾರ ಸಿನಿಮಾದಲ್ಲಿ ನಟಿಸುವ ಆಸೆ ನಿಮಗಿದ್ಯಾ?; ಇಲ್ಲಿದೆ ಗೋಲ್ಡನ್ ಅಪಾರ್ಚುನಿಟಿ…!
Cinema

Kantara Sequel: ಕಾಂತಾರ ಸಿನಿಮಾದಲ್ಲಿ ನಟಿಸುವ ಆಸೆ ನಿಮಗಿದ್ಯಾ?; ಇಲ್ಲಿದೆ ಗೋಲ್ಡನ್ ಅಪಾರ್ಚುನಿಟಿ…!

by PratikshanaNews
12th December 2023
ಗ್ರಾಹಕರಿಗೆ  ನಿಂದ Airtel ನಿಂದ  ಬಿಗ್‌ ಆಫರ್‌
News

ಗ್ರಾಹಕರಿಗೆ ನಿಂದ Airtel ನಿಂದ ಬಿಗ್‌ ಆಫರ್‌

by PratikshanaNews
5th December 2023
ಭವಾನಿ ರೇವಣ್ಣ ಒಂದೂವರೆ ಕೋಟಿ ರೂ. ಕಾರಿನ ವಿಶೇಷತೆಗಳೇನು  ಗೊತ್ತಾ?
News

ಭವಾನಿ ರೇವಣ್ಣ ಒಂದೂವರೆ ಕೋಟಿ ರೂ. ಕಾರಿನ ವಿಶೇಷತೆಗಳೇನು ಗೊತ್ತಾ?

by PratikshanaNews
4th December 2023
ಡಿ.7 ಕ್ಕೆ Realme GT 5 Pro ಸ್ಮಾರ್ಟ್‌ ಫೋನ್  ಬಿಡುಗಡೆ
Special

ಡಿ.7 ಕ್ಕೆ Realme GT 5 Pro ಸ್ಮಾರ್ಟ್‌ ಫೋನ್  ಬಿಡುಗಡೆ

by PratikshanaNews
4th December 2023
Mobile Phones: ಕಳೆದು ಹೋದ ಮೊಬೈಲ್‌ ಫೋನ್‌ ಬ್ಲಾಕ್‌ ಮಾಡೋದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ
News

Mobile Phones: ಕಳೆದು ಹೋದ ಮೊಬೈಲ್‌ ಫೋನ್‌ ಬ್ಲಾಕ್‌ ಮಾಡೋದು ಹೇಗೆ..? ಇಲ್ಲಿದೆ ಸಂಪೂರ್ಣ ಮಾಹಿತಿ

by PratikshanaNews
30th November 2023
Next Post

ದೇಶವಾಸಿಗಳಿಗೆ ಯುಗಾದಿ ಗಿಫ್ಟ್ - ಗ್ಯಾಸ್ ಸಿಲಿಂಡರ್ ಬೆಲೆ ಬರೋಬ್ಬರಿ 273 ರೂಪಾಯಿ ಹೆಚ್ಚಳ

Leave a Reply Cancel reply

Your email address will not be published. Required fields are marked *

ADVERTISEMENT

Trend News

ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ

by PratikshanaNews
19th February 2025
0
ಮಹಾಕುಂಭ ಮೇಳದಲ್ಲಿ ನೀರು ಸ್ನಾನಕ್ಕೂ ಯೋಗ್ಯ ಇಲ್ಲ – ಕೇಂದ್ರ ಸರ್ಕಾರದ ಸಂಸ್ಥೆಯಿಂದಲೇ ವರದಿ
News

ಮಹಾಕುಂಭದಲ್ಲಿ ಭಕ್ತರು ಪವಿತ್ರ ಸ್ನಾನ ಮಾಡುತ್ತಿರುವ ನೀರು ಸ್ನಾನ ಮಾಡುವುದಕ್ಕೂ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರದ ಆಧೀನದಲ್ಲಿ ಬರುವ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ ಸಲ್ಲಿಸಿದೆ....

Read more

ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ

by PratikshanaNews
18th February 2025
0
ಮುಸಲ್ಮಾನರಿಗೆ ರಂಜಾನ್‌ನಲ್ಲಿ ರಾಜ್ಯ ಸರ್ಕಾರದಿಂದ ಭಾರೀ ವಿನಾಯಿತಿ
News

ಮುಸಲ್ಮಾನರ ಉಪವಾಸ ತಿಂಗಳು ಆಗಿರುವ ರಂಜಾನ್‌ನಲ್ಲಿ ಇಸ್ಲಾಂ ಧರ್ಮಕ್ಕೆ ಸೇರಿದ ರಾಜ್ಯ ಸರ್ಕಾರಿ ನೌಕರರು ಮತ್ತು ಗುತ್ತಿಗೆ ನೌಕರರಿಗೆ ತೆಲಂಗಾಣದಲ್ಲಿರುವ ಕಾಂಗ್ರೆಸ್‌ ಸರ್ಕಾರ ಮತ್ತು ಆಂಧ್ರಪ್ರದೇಶದಲ್ಲಿರುವ ತೆಲುಗು...

Read more

ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌

by PratikshanaNews
3rd January 2025
0
ಫಲ ಕೊಡದ ನಾಯಕತ್ವ ಬದಲಾವಣೆ – ಅಲ್ಪ ಮೊತ್ತಕ್ಕೆ ಭಾರತ ಆಲೌಟ್‌
News

ಆಸ್ಟ್ರೇಲಿಯಾ ವಿರುದ್ಧದ 5ನೇ ಮತ್ತು ಕಡೆಯ ಟೆಸ್ಟ್‌ನ ಮೊದಲ ದಿನವೇ ಭಾರತ ಆಲೌಟ್‌ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 185 ರನ್‌ಗೆ ಟೀಂ ಇಂಡಿಯಾದ ಎಲ್ಲಾ...

Read more

ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!

by PratikshanaNews
3rd January 2025
0
ಅಮೆರಿಕ ಅಧ್ಯಕ್ಷ ಬಿಡೆನ್‌ ಪತ್ನಿಗೆ 17 ಲಕ್ಷ ರೂ. ಮೌಲ್ಯದ ಉಡುಗೊರೆ ಕೊಟ್ಟ ಪ್ರಧಾನಿ ಮೋದಿ..! ಇದು ದುಬಾರಿಗಳಲ್ಲಿ ನಂ.1..!
News

ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ ಪತ್ನಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅತ್ಯಂತ ದುಬಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದಾರೆ. ಜೋ ಬಿಡೆನ್‌ ಪತ್ನಿ ಜಿಲ್‌ ಬಿಡೆನ್‌ಗೆ ಪ್ರಧಾನಿ...

Read more
ADVERTISEMENT
ADVERTISEMENT
Every Minute News

© 2023 Pratikshana News

Navigate Site

  • News
  • Cinema
  • Sports
  • Health
  • Lifestyle
  • Gallery
  • Special

Follow Us

No Result
View All Result
  • News
  • Cinema
  • Sports
  • Health
  • Lifestyle
  • Gallery
  • Special

© 2023 Pratikshana News

error: Content is protected !!