ಆಸ್ಟ್ರೇಲಿಯಾ ವಿರುದ್ಧದ 5ನೇ ಮತ್ತು ಕಡೆಯ ಟೆಸ್ಟ್‌ನ ಮೊದಲ ದಿನವೇ ಭಾರತ ಆಲೌಟ್ ಆಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 72.2 ಓವರ್‌ಗಳಲ್ಲಿ 185 ರನ್‌ಗೆ ಟೀಂ ಇಂಡಿಯಾದ ಎಲ್ಲಾ ವಿಕೆಟ್‌ಗಳು ಪತನವಾಗಿವೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾವನ್ನು ಆಸ್ಟ್ರೇಲಿಯಾ ಬೌಲರ್‌ಗಳು ಕಂಗೆಡಿಸಿದರು. ನಾಯಕ ರೋಹಿತ್ ಶರ್ಮಾ ಅವರನ್ನು ಹೊರಗಿಟ್ಟು ಬೂಮ್ರಾಗೆ ನಾಯಕತ್ವ ವಹಿಸಿದರೆ ಬದಲಾವಣೆ ಅಗುತ್ತದೆ ಎಂಬ ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್‌ಕರ್ ಲೆಕ್ಕಾಚಾರ ಮೊದಲ ಇನ್ನಿಂಗ್ಸ್‌ನಲ್ಲಿ ಫಲ ಕೊಟ್ಟಿಲ್ಲ.
ಯಶಸ್ವಿ ಜೈಸ್ವಾಲ್ 10 ರನ್, ಕೆ ಎಲ್ ರಾಹುಲ್ 4 ರನ್‌ಗೆ ಔಟಾದರು. ಶುಭ್ಮನ್ ಗಿಲ್ 20, ವಿರಾಟ್ ಕೊಹ್ಲಿ 17 ರನ್‌ಗೆ ಔಟಾದರು. ರಿಷಭ್ ಪಂತ್ 40, ರವೀಂದ್ರ ಜಡೇಜಾ 26 ರನ್‌ಗೆ ಔಟಾದರು.
ನಿತೀಶ್ ಕುಮಾರ್ ರೆಡ್ಡಿ ತಾವು ಆಡಿದ ಮೊದಲ ಎಸೆತದಲ್ಲೇ ಔಟಾದರು. ವಾಷಿಂಗ್ಟನ್ ಸುಂದರ್ 14, ಪ್ರಸಿಧ್ ಕೃಷ್ಣ 3 ರನ್‌ಗೆ ಔಟಾದರು. ನಾಯಕ ಜಸ್ಪ್ರೀತ್ ಬೂಮ್ರಾ 22 ರನ್‌ಗೆ ಔಟಾದರು.
ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲಾಂಡ್ 4 ವಿಕೆಟ್ ಪಡೆದರೆ, ವೇಗಿಯೂ ಆಗಿರುವ ನಾಯಕ ಪ್ಯಾಟ್ ಕಮ್ಮಿನ್ಸ್ 2, ಮಿಚೆಲ್ ಸ್ಟಾರ್ಕ್ 3 ವಿಕೆಟ್ ಪಡೆದರು. ನಥಾನ್ ಲಿಯಾನ್ 1 ವಿಕೆಟ್ ಪಡೆದರು.
ADVERTISEMENT
ADVERTISEMENT