H D Kumarswamy: ಮತ್ತೆ ವಿದೇಶಕ್ಕೆ ಕುಮಾರಸ್ವಾಮಿ – ವಾಪಸ್​ ಆದ ಮೂರೇ ದಿನದಲ್ಲಿ ಮತ್ತೆ ಪ್ರವಾಸ

ಮೂರು ದಿನಗಳ ಹಿಂದೆಯಷ್ಟೇ ಯುರೋಪ್​ ಪ್ರವಾಸ ಮುಗಿಸಿ ವಾಪಸ್​ ಆಗಿದ್ದ ಜೆಡಿಎಸ್​ ಶಾಸಕಾಂಗ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಮತ್ತೆ ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ಸೋಮವಾರ ರಾತ್ರಿಯೇ ಕಾಂಬೋಡಿಯಾಕ್ಕೆ ತೆರಳಿದ್ದಾರೆ. 

ಕುಮಾರಸ್ವಾಮಿ ಅವರ ಜೊತೆಗೆ ಮಾಜಿ ಶಾಸಕ ಸಾ ರಾ ಮಹೇಶ್​ ತೂಪಲ್ಲಿ ಚೌಡರೆಡ್ಡಿ ಸೇರಿದಂತೆ 10 ಮಂದಿ ತೆರಳಲಿದ್ದಾರೆ.

4 ದಿನಗಳ ಪ್ರವಾಸ ಮುಗಿಸಿಕೊಂಡು ಆಗಸ್ಟ್​ 11ರಂದು ಕುಮಾರಸ್ವಾಮಿ ರಾಜ್ಯಕ್ಕೆ ಮರಳಲಿದ್ದಾರೆ.

ಜುಲೈ 23ರಿಂದ 10 ದಿನಗಳ ಯುರೋಪ್​ ಪ್ರವಾಸ ಮುಗಿಸಿ ಆಗಸ್ಟ್​ 3ರಂದು ಬೆಂಗಳೂರಿಗೆ ವಾಪಸ್​ ಆಗಿದ್ದರು. ಯುರೋಪ್​ ಪ್ರವಾಸದ ವೇಳೆ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್​ ಕುಮಾರಸ್ವಾಮಿ ದಂಪತಿಯೂ ಇದ್ದರು.

LEAVE A REPLY

Please enter your comment!
Please enter your name here