ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲ್ಲ ಎಂದು ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಅವರು ಘೋಷಿಸಿದ್ದಾರೆ.
ಈ ಮೂಲಕ ನಂಜನಗೂಡು ಕ್ಷೇತ್ರದಿಂದ ಇತ್ತೀಚೆಗಷ್ಟೇ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅವರ ಪುತ್ರ ದರ್ಶನ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದು ಖಚಿತವಾಗಿದೆ.
ಧ್ರುವ ನಾರಾಯಣ್ ಅವರ ಪುತ್ರ ದರ್ಶನ್ಗೆ ಸಾಂತ್ವನ ಹೇಳಿದ ಬಳಿಕ ಮಹದೇವಪ್ಪ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ನಂಜುನಗೂಡು ಕ್ಷೇತ್ರದಿಂದ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ. ಧ್ರುವನಾರಾಯಣ್ ಪುತ್ರ ದರ್ಶನ್ಗೆ ಬೆಂಬಲ ನೀಡುತ್ತೇನೆ. ನಂಜನಗೂಡಲ್ಲಿ ದರ್ಶನ್ರನ್ನು ಗೆಲ್ಲಿಸುತ್ತೇನೆ.
ಧ್ರುವನಾರಾಯಣ್ ಹಠಾತ್ ನಿಧನರಾದಾಗಲೇ ಈ ನಿರ್ಧಾರ ಮಾಡಿದ್ದೆ. ನನ್ನ ಪುತ್ರ ಸುನಿಲ್ ಬೋಸ್, ಧ್ರುವ ಪುತ್ರ ದರ್ಶನ್ ಸಮ್ಮುಖದಲ್ಲಿ ಬಹಿರಂಗಪಡಿಸಿದ್ದೇನೆ. ಈ ಸಂದರ್ಭದಲ್ಲಿ ನಾನು ನಂಜನಗೂಡು ಅಭ್ಯರ್ಥಿಯಾಗಲು ಬಯಸುವುದಿಲ್ಲ. ನಾನು ಸಾವಿನ ಸಮಾಧಿಯ ಮೇಲೆ ರಾಜಕೀಯ ಮಾಡುವುದಿಲ್ಲ. ನೀನು ಬೇರೆಯಲ್ಲ ನನ್ನ ಮಗ ಬೇರೆಯಲ್ಲ, ನೀವಿಬ್ಬರೂ ನನಗೆ ಒಂದೇ. ನಿಮ್ಮ ಕುಟುಂಬಕ್ಕೆ ಅಗತ್ಯವಾದ ಎಲ್ಲಾ ನೆರವು ನೀಡುತ್ತೇನೆ