ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಸರ್ಕಾರ ವಿದೇಶಕ್ಕೆ ರಫ್ತು ಮಾಡುವ ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನದ ಮೇಲೆ ತೆರಿಗೆ ವಿಧಿಸಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಲೀಟರ್ಗೆ 6 ರೂಪಾಯಿ ರಫ್ತು ತೆರಿಗೆ ಮತ್ತು ವಿಮಾನ ಇಂಧನ ಮೇಲೆ ಲೀಟರ್ಗೆ 13 ರೂಪಾಯಿ ರಫ್ತು ತೆರಿಗೆ ವಿಧಿಸಿದೆ.
ಭಾರತದಲ್ಲೇ ಉತ್ಪಾದಿಸುವ ಕಚ್ಚಾತೈಲದ ಮೇಲೆ ಲೀಟರ್ಗೆ 23,350 ರೂಪಾಯಿ ಸುಂಕವನ್ನೂ ವಿಧಿಸಿದೆ.
ಈ ತೆರಿಗೆಯಿಂದಾಗಿ ಕೇಂದ್ರ ಸರ್ಕಾರಕ್ಕೆ ಸರ್ಕಾರಿ ಸ್ವಾಮ್ಯದ ಒಎನ್ಜಿಸಿ ಮತ್ತು ಖಾಸಗಿ ವಲಯದ ವೇದಾಂತ ಕಂಪನಿಗಳಿಂದ 67,425 ಕೋಟಿ ರೂಪಾಯಿ ಮೊತ್ತದ ಆದಾಯ ಬರಲಿದೆ.
ರಷ್ಯಾದಿಂದ ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಲಾಗುತ್ತಿದ್ದ ಕಚ್ಚಾತೈಲವನ್ನು ಭಾರತದಲ್ಲಿ ಸಂಸ್ಕರಿಸಿ ಆ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ನಯಾರಾ ಎನರ್ಜಿ ಯುರೋಪ್ ರಾಷ್ಟ್ರಗಳು ಮತ್ತು ಅಮೆರಿಕಕ್ಕೆ ರಫ್ತು ಮಾಡುತ್ತಿದ್ದವು.
ಈ ಮೂಲಕ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಮಾರಾಟದಿಂದ ಆಗುತ್ತಿದ್ದ ನಷ್ಟವನ್ನು ಆ ರಫ್ತು ಲಾಭದ ಮೂಲಕ ಭರಿಸಿಕೊಳ್ಳುತ್ತಿದ್ದವು.
ಖಾಸಗಿ ತೈಲ ಕಂಪನಿಗಳು ದೇಶೀಯ ಮಾರುಕಟ್ಟೆ ಬದಲು ವಿದೇಶಕ್ಕೆ ಸಂಸ್ಕರಿಸಿದ ಇಂಧನ ಮಾರಾಟಕ್ಕೆ ಒತ್ತು ಕೊಟ್ಟಿದ್ದ ಹಿನ್ನೆಲೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್ ರಾಜ್ಯಗಳಲ್ಲಿ ಇಂಧನ ಪೂರೈಕೆ ಕೊರತೆ ಉಂಟಾಗಿತ್ತು.