ಸರ್ಕಾರಿ ಚಾಲಕರ ಹುದ್ದೆಗೆ ಅರ್ಜಿ ಆಹ್ವಾನ – 81 ಸಾವಿರ ರೂಪಾಯಿವರೆಗೆ ಸಂಬಳ

ಕರ್ನಾಟಕ ಹೈಕೋರ್ಟ್​ನಲ್ಲಿ 39 ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ HCRB 13/2022 (Driver – RPC) (37  ಉಳಿದ ಮೂಲ ವೃಂದ) ಮತ್ತು ಅಧಿಸೂಚನೆ ಸಂಖ್ಯೆ HCRB 3/2023 (Driver – KKR) (02 ಹುದ್ದೆಗಳು ಕಲ್ಯಾಣ ಕರ್ನಾಟಕ) ವಾಹನ ಚಾಲಕರ ಹುದ್ದೆಗಳಿಗಾಗಿ ಉಳಿದ ಮೂಲ ವೃಂದ ಮತ್ತು ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವೇತನ ಶ್ರೇಣಿ 25000 – 81100/- ರೂಪಾಯಿ ಇರುತ್ತದೆ. ಅರ್ಜಿ ಸಲ್ಲಿಸಲು ಏಪ್ರಿಲ್ 06 ಕೊನೆಯ ದಿನಾಂಕವಾಗಿದೆ. ವಿದ್ಯಾರ್ಹತೆ, ಅರ್ಜಿ ಶುಲ್ಕ ಹಾಗೂ ಅಧಿಸೂಚನೆ ಮಾಹಿತಿಗಾಗಿ ಜಾಲತಾಣ https://karnatakajudiciary.nic.in/recruitmentNotification.php  ನ್ನು ಸಂಪರ್ಕಿಸಬಹುದಾಗಿದೆ ಎಂದು ವಿಲೇಖನಾಧಿಕಾರಿ (ನೇಮಕಾತಿ) ಮಂಜುನಾಥ್ ನಾಯಕ್ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here