ಅದಾನಿ ಗ್ರೂಪ್ಸ್ ಚೇರ್ಮನ್ ಗೌತಮ್ ಅದಾನಿ ಮತ್ತೊಂದು ದಾಖಲೆ ಬರೆದಿದ್ದಾರೆ. ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿ ವಿಶ್ವ ಕುಬೇರರ ಪಟ್ಟಿಯಲ್ಲಿ 10ನೇ ಸ್ಥಾನ ಪಡೆದುಕೊಂಡಿದ್ದಾರೆ. ಮೊದಲ ಬಾರಿಗೆ ನೂರು (ಶತಕೋಟಿ) ಬಿಲಿಯನ್ ಕ್ಲಬ್ ಸೇರಿದ್ದಾರೆ. ಏಷಿಯಾದಲ್ಲಿಯೇ ಅತ್ಯಂತ ಧನಿಕ ಎಂಬ ಘನತೆಯನ್ನು ಗೌತಮ್ ಅದಾನಿ ಮತ್ತೊಮ್ಮೆ ದಕ್ಕಿಸಿಕೊಂಡಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಅದಾನಿ ಸಂಪತ್ತು ಅಗಣಿತವಾಗಿ ಹೆಚ್ಚಿದೆ. ಮೈನಿಂಗ್, ಗ್ರೀನ್ ಎನರ್ಜಿ, ಪೋರ್ಟ್ ವಲಯದಲ್ಲಿ ಅದಾನಿಯನ್ನು ಮೀರಿಸುವವರೇ ಇಲ್ಲ. ಸನಿಹಕ್ಕೂ ಬರುವವರಿಲ್ಲ.
ಇತ್ತೀಚಿಗೆ ಸೌದಿ ಅರೇಬಿಯಾದ ಅರಾಮ್ಕೋ ಜೊತೆ ಒಪ್ಪಂದ ಬೇರೆ ಮಾಡಿಕೊಂಡಿದ್ದಾರೆ. ಅದಾನಿ ಗ್ರೂಪ್ನ ಕುಕ್ಕಿಂಗ್ ಆಯಿಲ್ ವಿಲ್ಮರ್ ಕಂಪನಿಯ ಷೇರುಗಳ ಮೌಲ್ಯ ಶೇಕಡಾ 130ರಷ್ಟು ಹೆಚ್ಚಿದೆ.
ರಷ್ಯಾ – ಉಕ್ರೇನ್ ಯುದ್ಧದಿಂದ ಜಗತ್ತಿನಲ್ಲಿ ಕಲ್ಲಿದ್ದಲು ಕೊರತೆ ಏರ್ಪಟ್ಟಿದೆ. ಇದು ಕೂಡ ಅದಾನಿ ಸಂಪತ್ತು ರಾಕೆಟ್ ವೇಗದಲ್ಲಿ ಹೆಚ್ಚಲು ಕಾರಣವಾಗಿದೆ
ನೂರು ಬಿಲಿಯನ್ ಕ್ಲಬ್ ಸೇರಿದ ಮೊದಲ ಧನಿಕ ಬಿಲ್ ಗೇಟ್ಸ್,, 1999ರಲ್ಲಿ ಗೇಟ್ಸ್ ಸಂಪತ್ತು ನೂರು ಬಿಲಿಯನ್ ದಾಟಿತ್ತು. ನಂತರ ಈ ಕ್ಲಬ್ಗೆ ವಾರೆನ್ ಬಫೆಟ್ ಸೇರಿದರು. 2017ರಲ್ಲಿ ಅಮೆಜಾನ್ ಚೀಫ್ ಜೆಫ್ ಬೆಜೋಸ್ ಈ ಪಟ್ಟಿ ಸೇರಿದ ನಂತರ ಇಲ್ಲಿ ಕಾಂಪಿಟೇಷನ್ ಹೆಚ್ಚಾಯ್ತು.
ಜೆಫ್ ಬೆಜೋಸ್ ದಾಖಲೆಯನ್ನು 2021ರಲ್ಲಿ ಎಲನ್ ಮಸ್ಕ್ ಕ್ರಾಸ್ ಮಾಡಿದರು. ಸದ್ಯ 270 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ ಎಲನ್ ಮಸ್ಕ್ ನಂಬರ್ ಒನ್ ಕುಬೇರನಾಗಿದ್ದಾರೆ.
99 ಬಿಲಿಯನ್ ಡಾಲರ್ ಸಂಪತ್ತು ಹೊಂದಿರುವ ರಿಲಯನ್ಸ್ನ ಮುಖೇಶ್ ಅಂಬಾನಿ 11ನೇ ಸ್ಥಾನದಲ್ಲಿದ್ದಾರೆ.