ಸತತ ಮೂರು ದಿನಗಳಿಂದ ಏರಿಕೆ ಆಗಿದ್ದ ಚಿನ್ನದ ಬೆಲೆಯಲ್ಲಿ ಇವತ್ತು ಭಾರೀ ಇಳಿಕೆಯಾಗಿದೆ.
22 ಕ್ಯಾರೆಟ್ ಗುಣಮಟ್ಟದ 1 ಗ್ರಾಂ ಚಿನ್ನದ ಬೆಲೆ 45 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂಗೆ 450 ರೂಪಾಯಿ ಇಳಿಕೆ ಆಗಿದೆ. 10 ಗ್ರಾಂ ಚಿನ್ನದ ಬೆಲೆ 67,850 ರೂಪಾಯಿಗೆ ಇಳಿದಿದೆ.
24 ಕ್ಯಾರೆಟ್ ಗುಣಮಟ್ಟದ ಚಿನ್ನದ ಬೆಲೆ 1 ಗ್ರಾಂಗೆ 48 ರೂಪಾಯಿ ಇಳಿಕೆಯಾಗಿದೆ. 10 ಗ್ರಾಂಗೆ 480 ರೂಪಾಯಿ ಕಡಿಮೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ 71,240 ರೂಪಾಯಿಗೆ ಇಳಿದಿದೆ.
ಮೂರು ದಿನಗಳಲ್ಲಿ ಚಿನ್ನದ ಬೆಲೆ ನಿರಂತರವಾಗಿ ಏರಿಕೆ ಆಗಿತ್ತು.
22 ಕ್ಯಾರೆಟ್ ಗುಣಮಟ್ಟದ 10 ಗ್ರಾಂ ಚಿನ್ನ ಮೂರು ದಿನದಲ್ಲಿ 800 ರೂಪಾಯಿಯಷ್ಟು ದುಬಾರಿ ಆಗಿತ್ತು. 24 ಕ್ಯಾರೆಟ್ ಗುಣಮಟ್ಟದ 10 ಗ್ರಾಂ ಚಿನ್ನ ಮೂರು ದಿನದಲ್ಲಿ 840 ರೂಪಾಯಿಯಷ್ಟು ದುಬಾರಿ ಆಗಿತ್ತು.
ADVERTISEMENT
ADVERTISEMENT