ಸತತ ಎರಡನೇ ದಿನವೂ ಷೇರು ಮಾರುಕಟ್ಟೆ ಮತ್ತು ಬಂಗಾರದ ಬೆಲೆ ದಿನದ ಆರಂಭದಲ್ಲಿ ಇಳಿಕೆ ಕಂಡಿದೆ.
ಇವತ್ತೂ ಬೆಳಗ್ಗೆ ದಿನಾರಂಭದಲ್ಲೇ ಮುಂಬೈ ಷೇರು ಮಾರುಕಟ್ಟೆ 160 ಅಂಕಗಳಷ್ಟು ಕುಸಿದಿದೆ. ನಿಫ್ಟಿ 38 ಅಂಕಗಳಷ್ಟು ಕುಸಿದಿದೆ.
ಬಿಎಸ್ಇ ಸೂಚ್ಯಂಕ ನಿನ್ನೆ 71,351 ಅಂಕಗಳಿಗೆ ತನ್ನ ದಿನದ ವ್ಯವಹಾರ ಕೊನೆಗೊಳಿಸಿತ್ತು. ನಿನ್ನೆ ಬಿಎಸ್ಇ 168 ಅಂಕಗಳಷ್ಟು ಕುಸಿತ ಕಂಡಿತ್ತು. ನಿಫ್ಟಿ ನಿನ್ನೆ 38 ಸೂಚ್ಯಂಕದಷ್ಟು ಇಳಿಕೆ ಆಗಿತ್ತು.
ಚಿನ್ನದ ಬೆಲೆಯಲ್ಲೂ ಇಳಿಕೆ:
ಇವತ್ತೂ ಚಿನ್ನದ ಬೆಲೆ ದಿನದ ಆರಂಭದಲ್ಲೇ 10 ಗ್ರಾಂಗೆ 211 ರೂಪಾಯಿಯಷ್ಟು ಇಳಿಕೆ ಆಗಿದೆ. ನಿನ್ನೆ ಚಿನ್ನದ ಬೆಲೆ 463 ರೂಪಾಯಿಯಷ್ಟು ಕಡಿಮೆ ಆಗಿತ್ತು. ಈ ಮೂಲಕ ಇವತ್ತು ಮತ್ತು ನಿನ್ನೆ ಎರಡೇ ದಿನದಲ್ಲಿ 10 ಗ್ರಾಂಗೆ 674 ರೂಪಾಯಿಯಷ್ಟು ಕಡಿಮೆ ಆಗಿದೆ.
ADVERTISEMENT
ADVERTISEMENT