ಚಿನ್ನದ ಬೆಲೆ ಭಾರೀ ಏರಿಕೆ ಕಂಡಿದೆ. ಇವತ್ತು ಬಂಗಾರದ ಬೆಲೆ 10 ಗ್ರಾಂಗೆ 461 ರೂಪಾಯಿಯಷ್ಟು ಹೆಚ್ಚಳವಾಗಿದೆ.
ಈ ಮೂಲಕ ಚಿನ್ನದ ಬೆಲೆ ಮತ್ತೆ 10 ಗ್ರಾಂಗೆ 63 ಸಾವಿರ ರೂಪಾಯಿ ಗಡಿಗೆ ಬಂದು ನಿಂತಿದೆ.
ಶುಕ್ರವಾರ ಚಿನ್ನದ ಬೆಲೆ 506 ರೂಪಾಯಿಯಷ್ಟು ಹೆಚ್ಚಳವಾಗಿತ್ತು. ಗುರುವಾರ 260 ರೂಪಾಯಿಯಷ್ಟು ಹೆಚ್ಚಳ ಆಗಿತ್ತು.
ಬುಧವಾರ ಬಂಗಾರದ ಬೆಲೆ 216 ರೂಪಾಯಿಯಷ್ಟು ಹೆಚ್ಚಳವಾಗಿತ್ತು. ಈ ವಾರದಲ್ಲೇ 10 ಗ್ರಾಂ ಚಿನ್ನದ ಬೆಲೆ 1,700 ರೂಪಾಯಿಯಷ್ಟು ಹೆಚ್ಚಳವಾಗಿದೆ.