BREAKING: ಎಲ್ಲರಿಗೂ ಸಿಗಲಿದೆ ಉಚಿತ ವಿದ್ಯುತ್- ಸಿಎಂ ಸಿದ್ದರಾಮಯ್ಯ ಸಭೆಯಲ್ಲಿ ಲೆಕ್ಕಾಚಾರ

ಕರ್ನಾಟಕದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ (BPL) ಜೊತೆಗೆ ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೂ (APL) ಕುಟುಂಬಗಳಿಗೂ ಪ್ರತಿ ತಿಂಗಳು 200 ಯುನಿಟ್​ ಉಚಿತ ವಿದ್ಯುತ್​ ಸಿಗುವ ಸಾಧ್ಯತೆ ನಿಚ್ಚಳವಾಗಿದೆ.
ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್​ ಘೋಷಿಸಿರುವ ಗ್ಯಾರಂಟಿ ಯೋಜನೆಗಳ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಇವತ್ತು ಅಧಿಕಾರಿಗಳ ಜೊತೆಗೆ ಹಂತ-ಹಂತದ ಸಭೆ ನಡೆಸಿದ್ದಾರೆ.
ಉಚಿತ ವಿದ್ಯುತ್​ ಯೋಜನೆ ಜಾರಿ ಸಂಬಂಧ ಮುಖ್ಯಮಂತ್ರಿಗಳಿಗೆ ಸಭೆಯಲ್ಲಿ ನೀಡಲಾಗಿರುವ ಮಾಹಿತಿ ಪ್ರಕಾರ ಅಂದಾಜು 2.14 ಕೋಟಿ ಕುಟುಂಬಗಳು ಲಾಭ ಪಡೆಯಲಿವೆ. 
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಂಕಿಅಂಶದ ಪ್ರಕಾರ ಸದ್ಯಕ್ಕೆ ರಾಜ್ಯದಲ್ಲಿರುವ ಬಿಪಿಎಲ್​ ಕಾರ್ಡ್​ದಾರರ ಸಂಖ್ಯೆ 1 ಕೋಟಿ 27 ಲಕ್ಷ. ರಾಜ್ಯದಲ್ಲಿ ಬಿಪಿಎಲ್​ ಕುಟುಂಬದಡಿ ಬರುವ ಜನಸಂಖ್ಯೆ 4 ಕೋಟಿ 30 ಲಕ್ಷ.
ಅಂದರೆ ಬಿಪಿಎಲ್​ ಕಾರ್ಡ್​​ ಹೊರತುಪಡಿಸಿ 87 ಲಕ್ಷ ಕುಟುಂಬಗಳಿಗೆ ಯೋಜನೆಯ ಲಾಭ ಸಿಗಲಿದೆ.
ಕರ್ನಾಟಕದಲ್ಲಿ ವಾರ್ಷಿಕ ವಿದ್ಯುತ್​ ಬಳಕೆ 13,575 ದಶಲಕ್ಷ ಯುನಿಟ್​. ನಿಗದಿತ ಶುಲ್ಕ, ತೆರಿಗೆ, ಸಹಾಯಧನ ಒಳಗೊಂಡು 12,038 ಕೋಟಿ ರೂಪಾಯಿ ಬೇಕಾಬಹುದು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.