ಶ್ರೀಮುರಳಿ ನಟನೆಯ ‘ಬಘೀರ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು,, ಚಿತ್ರ ತಂಡದಿಂದ ಸದ್ಯ ಹೊಸದೊಂದು ಅಪ್ಡೇಟ್ ಹೊರಬಿದ್ದಿದೆ.
ಹೌದು, ಚಿತ್ರೀಕರಣಣದಲ್ಲಿ ಬ್ಯುಸಿಯಾಗಿರುವ ತಂಡ ನಟನ ಹುಟ್ಟುಹಬ್ಬಕ್ಕೆ ಟೀಸರ್ ಬಿಡುಗಡೆಗೊಳಿಸಲು ಯೋಜನೆ ಹಾಕಿಕೊಂಡಿದ್ದು, ಡಿಸೆಂಬರ್ 17ರಂದು ಶ್ರೀಮುರಳಿ ಹುಟ್ಟುಹಬ್ಬ. ಅಂದೇ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.
ಇನ್ನು ಡಿಸೆಂಬರ್ 17ರ ಬೆಳಿಗ್ಗೆ 9:45ಕ್ಕೆ ಬಘೀರ’ ಸಿನಿಮಾದ ಟೀಸರ್ ಬಿಡುಗಡೆ ಆಗಲಿದ್ದು, ‘ಅರಣ್ಯ ಉಸಿರು ಬಿಗಿ ಹಿಡಿದು ಕಾಯುತ್ತಿರುತ್ತದೆ’ ಎಂಬ ಅಡಿಬರಹದೊಂದಿಗೆ ಟೀಸರ್ ಬಿಡುಗಡೆ ದಿನಾಂಕವನ್ನು ಹೊಂಬಾಳೆ ಫಿಲ್ಮ್ಸ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ
ಈ ಹಿಂದೆ ‘ಲಕ್ಕಿ’ ಸಿನಿಮಾ ನಿರ್ದೇಶನ ಮಾಡಿದ್ದ ಡಾ.ಸೂರಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹತ್ತು ವರ್ಷಗಳ ಬಳಿಕ ಸೂರಿ ನಿರ್ದೇಶನ ಮಾಡುತ್ತಿರುವ ಎರಡನೇ ಸಿನಿಮಾವಿದು.
ಕೆಜಿಎಫ್, ಕಾಂತಾರ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಬಘೀರ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದೆ. ಉಗ್ರಂ, ಕೆಜಿಎಫ್ ಚಿತ್ರಗಳ ನಿರ್ದೇಶಕ ಪ್ರಶಾಂತ್ ನೀಲ್ ಸಿನಿಮಾಗೆ ಕಥೆ ಬರೆದಿದ್ದಾರೆ. ಈ ಸಿನಿಮಾ ಶ್ರೀಮುರಳಿಗೆ ದೊಡ್ಡ ಮಟ್ಟದ ಹೆಸರು ತಂದುಕೊಡುತ್ತೆ ಅನ್ನೋದು ಚಿತ್ರತಂಡದವರ ವಿಶ್ವಾಸ.