ಮಗಳ ಹೆಸರನ್ನು ರಿವೀಲ್ ಮಾಡಿದ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್

ಗೌಡ

ಬಾಲಿವುಡ್ ನಟಿ ಆಲಿಯಾ ಭಟ್ ನ.6ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿ ಮೊದಲ ಮಗು ಆಗಮನವಾದ ಖುಷಿಯಲ್ಲಿದ್ದಾರೆ.

ಮದುವೆಯಾದ 2 ತಿಂಗಳಲ್ಲಿಯೇ ಆಲಿಯಾ ಗರ್ಭಿಣಿಯಾದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇದೀಗ ಮದುವೆಯಾಗಿ 8 ತಿಂಗಳು ಪೂರ್ಣಗೊಳ್ಳುವ ಮೊದಲೇ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿ ತಾಯ್ತನವನ್ನು ಸಂಭ್ರಮಿಸುತ್ತಿದ್ದಾರೆ.

ಈ ನಡುವೆ ಆಲಿಯಾ ಹಾಗೂ ರಣಬೀರ್ ದಂಪತಿ  ತಮ್ಮ ಮಗಳಿಗೆ ಹೆಸರಿಟ್ಟಿದ್ದು, ಬಹಳ ವಿಭಿನ್ನವಾಗಿ ಹೆಸರನ್ನು ಬಹಿರಂಗಪಡಿಸಿದ್ದಾರೆ.

ಹೌದು ತಮ್ಮ ಮುದ್ದು ಮಗಳಿಗೆ ‘ರಾಹಾ’ಎಂದು ಆಲಿಯಾ ಭಟ್ ಹಾಗೂ ರಣಬೀರ್ ನಾಮಕಾರಣ ಮಾಡಿದ್ದು, ಈ ಕುರಿತು ಆಲಿಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

https://www.instagram.com/p/ClWGK8gsIkr/?igshid=YmMyMTA2M2Y=

‘ರಾಹಾ” ಎಂದು ಬರೆಯಲಾದ ಗೋಡೆಯ ಮೇಲೆ ನೇತಾಡುವ ಸಣ್ಣ ಫುಟ್ಬಾಲ್ ಜರ್ಸಿಯೊಂದಿಗೆ ನವಜಾತ ಶಿಶುವನ್ನು ಹಿಡಿದಿರುವ ರಣಬೀರ್ ಹಾಗೂ ತನ್ನ ಫೋಟೋವೊಂದನ್ನು ಆಲಿಯಾ ಭಟ್ ಶೇರ್ ಮಾಡಿದ್ದಾರೆ. ರಾಹಾ ಹೆಸರಿನ ಮಹತ್ವದ ಬಗ್ಗೆಯೂ ಆಲಿಯಾ ಹಂಚಿಕೊಂಡಿದ್ದಾರೆ.

ರಾಹಾ ಎಂಬ ಹೆಸರನ್ನು ತಮ್ಮ ಬುದ್ದಿವಂತ ತಂದೆ ಆಯ್ಕೆ ಮಾಡಿದ್ದಾರೆ. ಇದು ಅನೇಕ ಸುಂದರವಾದ ಅರ್ಥಗಳನ್ನು ಒಳಗೊಂಡಿದೆ. ರಾಹಾ ಅದರ ಶುದ್ಧ ರೂಪದಲ್ಲಿ ದೈವಿಕ ಮಾರ್ಗ ಎಂದರ್ಥ, ಸ್ವಾಹಿಲಿಯಲ್ಲಿ ಅವಳು ಸಂತೋಷ, ಸಂಸ್ಕೃತದಲ್ಲಿ, ರಾಹಾ ಒಂದು ಕುಲ, ಬಾಂಗ್ಲಾದಲ್ಲಿ – ವಿಶ್ರಾಂತಿ, ಸೌಕರ್ಯ, ಪರಿಹಾರ, ಅರೇಬಿಕ್ ಶಾಂತಿ, ಇದು ಸಂತೋಷ, ಸ್ವಾತಂತ್ರ್ಯ ಮತ್ತು ಆನಂದ ಎಂದರ್ಥ ಎಂದಿದ್ದಾರೆ.

ಇನ್ನೂ ಆಲಿಯಾ ಭಟ್ ಮತ್ತು ರಣಬೀರ್‌ ಕಪೂರ್ 2022 ಎಪ್ರಿಲ್ 14ರಂದು ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇತ್ತೀಚೆಗಷ್ಟೆ ಆಲಿಯಾ ಭಟ್ ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಮಗುವಿನ ಆಗಮನದ ಸಂಭ್ರಮ ಆಚರಿಸಿಕೊಂಡಿದ್ದರು.