ಭಾರತದಲ್ಲಿ ಅತೀ ಹೆಚ್ಚು ಮಾರಾಟ ಆಗುತ್ತಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಯಾವ ಕಂಪನಿಯದ್ದು..? ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಡಿಯಲ್ಲಿ ಸಿಗುವ ವಾಹನ್ ಅಂಕಿಅಂಶದ ಪ್ರಕಾರ ದೇಶದಲ್ಲಿ ಓಲಾ ಸ್ಕೂಟರ್ ಮಾರಾಟ ಗಣನೀಯವಾಗಿ ಕುಸಿದಿದೆ.
ವಾಹನ್ ಅಂಕಿಅಂಶದ ಪ್ರಕಾರ
ಭಾರತದಲ್ಲಿ ಅತೀ ಹೆಚ್ಚು ಮಾರಾಟ ಆಗುತ್ತಿರುವುದು ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್. ಜೂನ್ ತಿಂಗಳಲ್ಲಿ 6,976 ಒಕಿನಾವಾ ಸ್ಕೂಟರ್ಗಳ ಮಾರಾಟ ಆಗಿದೆ.
ಆಂಪೇರ್ ಕಂಪನಿಯ 6,534 ಇ-ಸ್ಕೂಟರ್ಗಳು ಮಾರಾಟ ಆಗಿವೆ. ಮೂರನೇ ಸ್ಥಾನದಲ್ಲಿ ಹೀರೋ ಕಂಪನಿಯ ಇ-ದ್ವಿಚಕ್ರವಾಹನವಿದ್ದು 6,484 ಸ್ಕೂಟರ್ಗಳು ಮಾರಾಟ ಆಗಿವೆ.
ಆಥರ್ ಎನರ್ಜಿಯ ಸ್ಕೂಟರ್ಗಳಿಗೆ ಬೇಡಿಕೆ ಹೆಚ್ಚಾಗಿದ್ದು, 3,797 ಸ್ಕೂಟರ್ಗಳು ಮಾರಾಟ ಆಗಿವೆ.
5,869 ಓಲಾ ಸ್ಕೂಟರ್ ಮಾರಾಟ ಆಗಿದ್ದು, ಈ ಹಿಂದಿಗೆ ಹೋಲಿಸಿದ್ರೆ ಕಡಿಮೆ.
ಓಲಾ ಬೈಕ್ಗಳಲ್ಲಿ ಬ್ಯಾಟರಿ ದೋಷದ ಕಾರಣದಿಂದ ಬೆಂಕಿ ಹೊತ್ತಿಕೊಂಡಿರುವುದು ಸೇರಿದಂತೆ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗ್ತಿರುವ ಕಾರಣ ಓಲಾ ಮಾರಾಟ ಕಡಿಮೆ ಆಗಿದೆ.