ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಬಿಜೆಪಿ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಭರ್ಜರಿ ಜಯ ಗಳಿಸಿದೆ. ಮಿಜೋರಾಂನಲ್ಲಿ ಹೊಸ ಪಕ್ಷ ಝಡ್ಪಿಎಂಗೆ ಮತದಾರರು ಜೈ ಎಂದಿದ್ದಾರೆ.
ಐದು ಚುನಾವಣೆಯಲ್ಲಿ ಪ್ರಮುಖ ಮೂರು ರಾಜ್ಯಗಳಲ್ಲಿ ಸೋತ ಬಳಿಕ ಕಾಂಗ್ರೆಸ್ ಹೊಸ ಲೆಕ್ಕಾಚಾರವನ್ನು ಮುಂದಿಡುವ ಮೂಲಕ ಜನ ನಮ್ಮ ಜೊತೆಗಿದ್ದಾರೆ ಎಂಬ ವಾದವನ್ನು ಬಲವಾಗಿ ಮುಂದಿಟ್ಟಿದೆ.
ಬಿಜೆಪಿ ಪಡೆದಿರುವ ಮತ ಲೆಕ್ಕಾಚಾರ:
ಛತ್ತೀಸ್ಗಢದಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಬಿಜೆಪಿ ಶೇಕಡಾ ೪೬.೨೭ರಷ್ಟು ಅಂದರೆ ೭೨ ಲಕ್ಷದ ೩೪ ಸಾವಿರದ ೯೬೮ ಮತಗಳನ್ನು ಪಡೆದಿದೆ. ಮಧ್ಯಪ್ರದೇಶದಲ್ಲಿ ಶೇಕಡಾ ೪೮.೫೫ರಷ್ಟು ಮತಗಳನ್ನು ಅಂದರೆ ೨ ಕೋಟಿ ೧೧ ಲಕ್ಷದ ೧೬ ಸಾವಿರದ ೧೯೭ ಮತಗಳನ್ನು ಪಡೆದಿದೆ. ರಾಜಸ್ಥಾನದಲ್ಲಿ ಶೇಕಡಾ ೪೧.೬೯ರಷ್ಟು ಮತಗಳನ್ನು ಅಂದರೆ ೧ ಕೋಟಿ ೬೫ ಲಕ್ಷದ ೨೪ ಸಾವಿರದ ೭೮೭ ಮತಗಳನ್ನು ಪಡೆದಿದೆ. ತೆಲಂಗಾಣದಲ್ಲಿ ಶೇಕಡಾ ೧೩.೯೦ರಷ್ಟು ಅಂದರೆ ೩೨ ಲಕ್ಷದ ೫೭ ಸಾವಿರದ ೫೧೧ ಮತಗಳನ್ನು ಪಡೆದಿದ್ದಾರೆ. ಮಿಜೋರಾಂನಲ್ಲಿ ಶೇಕಡಾ ೫.೦೬ರಷ್ಟು ಮತಗಳನ್ನು ಪಡೆದಿದ್ದು, ೩೫,೫೨೪ ಮತಗಳನ್ನು ಪಡೆದಿದೆ.
ಕಾಂಗ್ರೆಸ್ ಪಡೆದಿರುವ ಮತ ಲೆಕ್ಕಾಚಾರ:
ಛತ್ತೀಸ್ಗಢದಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಕಾಂಗ್ರೆಸ್ ಶೇಕಡಾ ೪೨.೨೩ರಷ್ಟು ಅಂದರೆ ೬೬ ಲಕ್ಷದ ೨ ಸಾವಿರದ ೫೮೬ ಮತಗಳನ್ನು ಪಡೆದಿದೆ. ಮಧ್ಯಪ್ರದೇಶದಲ್ಲಿ ಶೇಕಡಾ ೪೦.೨೩ರಷ್ಟು ಮತಗಳನ್ನು ಅಂದರೆ ೧ ಕೋಟಿ ೭೫ ಲಕ್ಷದ ೭೧ ಸಾವಿರದ ೫೮೨ ಮತಗಳನ್ನು ಪಡೆದಿದೆ. ರಾಜಸ್ಥಾನದಲ್ಲಿ ಶೇಕಡಾ ೩೯.೫೩ರಷ್ಟು ಮತಗಳನ್ನು ಅಂದರೆ ೧ ಕೋಟಿ ೫೬ ಲಕ್ಷದ ೬೭ ಸಾವಿರದ ೯೪೭ ಮತಗಳನ್ನು ಪಡೆದಿದೆ. ತೆಲಂಗಾಣದಲ್ಲಿ ಶೇಕಡಾ ೩೯.೪೦ರಷ್ಟು ಅಂದರೆ ೯೨ ಲಕ್ಷದ ೩೫ ಸಾವಿರದ ೭೯೨ ಮತಗಳನ್ನು ಪಡೆದಿದ್ದಾರೆ. ಮಿಜೋರಾಂನಲ್ಲಿ ಶೇಕಡಾ ೨೦.೮೨ರಷ್ಟು ಮತಗಳನ್ನು ಪಡೆದಿದ್ದು, ೧ ಲಕ್ಷದ ೪೬ ಸಾವಿರದ ೧೧೩ ಮತಗಳನ್ನು ಪಡೆದಿದೆ.
ಬಿಜೆಪಿಗಿಂತ ಕಾಂಗ್ರೆಸ್ಗೆ ಹೆಚ್ಚು ಮತ:
ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪಡೆದಿರುವ ಒಟ್ಟು ಮತ ೪ ಕೋಟಿ ೮೧ ಲಕ್ಷದ ೬೮ ಸಾವಿರದ ೯೮೭ ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ೪ ಕೋಟಿ ೯೨ ಲಕ್ಷದ ೨೪ ಸಾವಿರದ ೦೨೦ ಮತಗಳನ್ನು ಪಡೆದಿದೆ. ಅಂದರೆ ಬಿಜೆಪಿಗಿಂತ ಕಾಂಗ್ರೆಸ್ ೧೦ ಲಕ್ಷದಷ್ಟು ಹೆಚ್ಚು ಮತಗಳನ್ನು ಪಡೆದಿದೆ.
ಆದರೆ ರಾಜಸ್ಥಾನ ಮತ್ತು ಛತ್ತೀಸ್ಗಢ ಹಾಗೂ ಮಧ್ಯಪ್ರದೇಶದಲ್ಲಿ ಬಿಜೆಪಿ ಒಟ್ಟು ೪ ಕೋಟಿ ೪೮ ಲಕ್ಷದ ೭೫ ಸಾವಿರದ ೯೫೨ ಮತಗಳನ್ನು ಪಡೆದಿದೆ. ಆದ್ರೆ ಕಾಂಗ್ರೆಸ್ ಬಿಜೆಪಿಗಿಂತ ಕಡಿಮೆ ೩ ಕೋಟಿ ೯೮ ಲಕ್ಷದ ೪೨ ಸಾವಿರದ ೧೧೫ ಮತಗಳನ್ನು ಪಡೆದಿದೆ.
ADVERTISEMENT
ADVERTISEMENT