ಸೌದಿ ಅರೇಬಿಯಾದಿಂದ ಮಂಗಳೂರಿಗೆ ಕಚ್ಚಾತೈಲ ಸಾಗಿಸುತ್ತಿದ್ದ ಹಡಗಿನ ಮೇಲೆ ವೈಮಾನಿಕ ದಾಳಿ ನಡೆದಿದೆ.
ಗುಜರಾತ್ನ ಪೋರಬಂದರ್ ಕರಾವಳಿ ತೀರದಿಂದ 217 ನಾಟಿಕಲ್ ಮೈಲಿ (401 ಕಿಲೋ ಮೀಟರ್) ದೂರದಲ್ಲಿ ದಾಳಿ ನಡೆದಿದೆ.
ಈ ಹಡಗಿನಲ್ಲಿ 20 ಮಂದಿ ಭಾರತೀಯರಿದ್ದರು. ಹಡಗಿನ ರಕ್ಷಣೆಗೆ ಭಾರತದ ಯುದ್ಧ ನೌಕೆ ಐಎನ್ಎಸ್ ವಿಕ್ರಾಂತ್ ಧಾವಿಸಿದೆ. ಹಡಗಿಗೆ ಹೊತ್ತುಕೊಂಡಿದ್ದ ಬೆಂಕಿಯನ್ನು ನಂದಿಸಲಾಗಿದೆ. ದಾಳಿ ವೇಳೆ ಯಾರಿಗೂ ಪ್ರಾಣ ಹಾನಿಯಾಗಿಲ್ಲ.
ಸೋಮವಾರವಷ್ಟೇ ಆರು ಮಂದಿ ಕಡಲಗಳ್ಳರು ಅರಬ್ಬಿ ಸಮುದ್ರದಲ್ಲಿ ಎಂವಿ ರೂಯೆನ್ ಹೆಸರಿನ ವ್ಯಾಪಾರಿ ಹಡಗಿನ ಅಪಹರಣಕ್ಕೆ ಯತ್ನಿಸಿದ್ದರು. ಆದರೆ ಆ ಯತ್ನವನ್ನು ಐಎಎನ್ ವಿಕ್ರಾಂತ್ ವಿಫಲಗೊಳಿಸಿತ್ತು.