Accident – ಭೀಕರ ಅಪಘಾತದಲ್ಲಿ 9 ಮಂದಿ ದುರ್ಮರಣ

ಭೀಕರ ಅಪಘಾತದಲ್ಲಿ (Deadly Accident) 9 ಮಂದಿ ದುರ್ಮರಣ ಹೊಂದಿದ ದಾರುಣ ಘಟನೆ ಇಂದು ನಸುಕಿನಜಾವ ತುಮಕೂರು (Tumkur)ಜಿಲ್ಲೆ ಕಳ್ಳಂಬೆಳ್ಳ (Kallambella)ಸಮೀಪದ ಬಾಲೇನಹಳ್ಳಿ ಬಳಿ ನಡೆದಿದೆ. ರಾಯಚೂರಿನಿಂದ (Raichur)ಬೆಂಗಳೂರು (Bengaluru l)ಕಡೆಗೆ ಬರುತ್ತಿದ್ದ ಕ್ರೂಸೆರ್(Cruiser), ಲಾರಿಯನ್ನು (Lorry)ಓವರ್ ಟೇಕ್ (Overtake) ಮಾಡಲು ಪ್ರಯತ್ನಿಸಿದಾಗ ಈ ದುರಂತ ಸಂಭವಿಸಿದೆ. ಕ್ರೂಸೆರ್ ನಲ್ಲಿದ್ದ 24 ಮಂದಿ ಪೈಕಿ 9 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್ ಗೆ (Nimhans)ದಾಖಲಿಸಲಾಗಿದೆ. 9 ಮಂದಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿದೆ. ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಸುಕಿನಜಾವ 3-30 ಕ್ಕೆ ಅಪಘಾತ ಸಂಭವಸಿದೆ. ಲಾರಿಯನ್ನು ಕ್ರೂಸೆರ್ ಓವರ್ ಟೇಕ್ ಮಾಡಲು ಹೋಗಿದೆ. ಆಗ ಹಿಂದಿನಿಂದ  ಬಂದ ಲಾರಿ ಡಿಕ್ಕಿ ಹೊಡೆದಿದೆ. ಕ್ರೂಸೆರ್ ವಾಹನದಲ್ಲಿದ್ದವರು ಕಾಪಾಡಿ ಎಂದು ಕಿರುಚುತಿದ್ದರು. ಅವರ ಆಕ್ರಂದನ ಕೇಳಿ‌ ನಾವು ಎಚ್ಚರಗೊಂಡ್ವಿ. ತಕ್ಷಣ ಅವರ ಸಹಾಯಕ್ಕೆ ಬಂದ್ವಿ. ಪೊಲೀಸರು ಮತ್ತು ಆಂಬುಲೆನ್ಸ್ ಗೆ ಮಾಹಿತಿ ನೀಡಿದ್ವಿ ಎಂದು ಸ್ಥಳೀಯರೊಬ್ಬರು ಮಾಹಿತಿ ನೀಡಿದ್ದಾರೆ.

ಜಿಲ್ಲಾಸ್ಪತ್ರೆಗೆ ಜಿಲ್ಲಾಧಿಕಾರಿ ವೈಎಸ್ ಪಾಟೀಲ್,ಎಸ್ಪಿ ರಾಹುಲ್ ಕುಮಾರ್ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

LEAVE A REPLY

Please enter your comment!
Please enter your name here