Accident – ಬೆಂಗಳೂರು ಕುಟುಂಬ ಹೊರಟಿದ್ದು ಶಿರಡಿಗೆ… ಸೇರಿದ್ದು ಮಸಣಕ್ಕೆ

ತಾನೊಂದು  ಬಗೆದರೆ ದೈವವೊಂದು ಬಗೆಯಿತು ಎನ್ನುವ ಹಾಗೆ, ಶಿರಡಿ ಸಾಯಿಬಾಬಾ ದರ್ಶನಕ್ಕೆ (Shirdi Saibaba Darshan)ಹೊರಟಿದ್ದ ಕುಟುಂಬವೊಂದರ ಐವರಲ್ಲಿ ಮೂವರು ಮಾರ್ಗ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident)ಸಾವನ್ನಪ್ಪಿದ್ದಾರೆ.

ಚಿತ್ರದುರ್ಗದ (Chitradurga) ಸೀಬಾರ (Sibara)ಬಳಿಯ ರಾಷ್ಟ್ರೀಯ ಹೆದ್ದಾರಿ -48ರಲ್ಲಿ (NH-48)ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೃತರನ್ನು ಬೆಂಗಳೂರಿನ (Bengaluru)ಮನೀಶ್, ಸಿಂಚನ, ಭೂಮಿಕಾ ಎಂದು ಗುರುತಿಸಲಾಗಿದೆ. ಇದರಲ್ಲಿ  ಮನೀಶ್  ಮತ್ತು ಸಿಂಚನ ದಂಪತಿ. ಮನೀಶ್  ಸಹೋದರಿ  ಭೂಮಿಕಾ ಕೂಡ ಇಹಲೋಕ ತ್ಯಜಿಸಿದ್ದಾರೆ.

ಅಪಘಾತಕ್ಕೆ ಈಡಾದ ಕಾರ್ ನಲ್ಲಿದ್ದ ಗಿರಿಧರ್, ಆಶಾ ಮತ್ತು ಲಾರಿ ಚಾಲಕ ಗಾಯಗೊಂಡಿದ್ದು, ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರಿನ ಈ ಕುಟುಂಬ ಶಿರಡಿ ಪ್ರವಾಸಕ್ಕೆ ಕಾರ್ ನಲ್ಲಿ ತೆರಳುತ್ತಿತ್ತು. ಆದರೆ, ಕಾರ್ ಚಾಲನೆ  ಮಾಡುತ್ತಿದ್ದವರ ಅತಿಯಾದ ವೇಗ ಮತ್ತು ನಿರ್ಲಕ್ಷ್ಯ ದುರಂತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here