Deadliest Roads in Bengaluru – ಇವು ಬೆಂಗಳೂರಿನ ಡೆಡ್ಲಿ ರಸ್ತೆಗಳು

# ಒಂದು ವರ್ಷದಲ್ಲಿ ಬೆಂಗಳೂರಿನಲ್ಲಿ ಸರಾಸರಿ 650 ರಸ್ತೆ ಅಪಘಾತಗಳು ಉಂಟಾಗುತ್ತವೆ.

# ಬೆಂಗಳೂರಿನ 60 ಕಿಲೋ ಮೀಟರ್ ಉದ್ದದ ಔಟರ್ ರಿಂಗ್ ರೋಡ್ (ORR) ನಲ್ಲಿ 2019-2021ರ ಅವಧಿಯಲ್ಲಿ 69 ಅಪಘಾತ ಸಂಭವಿಸಿವೆ.

#  ಏರ್ಪೋರ್ಟ್ ಗೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯಲ್ಲಿ (Bellary Road)2019- 2021ರ ನಡುವೆ 63 ಅಪಘಾತ ಉಂಟಾಗಿವೆ.

# ಗಾರ್ಮೆಂಟ್ ಫ್ಯಾಕ್ಟರಿಗಳೇ ಹೆಚ್ಚಿರುವ ಹೊಸೂರು ರಸ್ತೆಯಲ್ಲಿ (Hosuru Road )ಇದೇ ಅವಧಿಯಲ್ಲಿ 57 ರಸ್ತೆ ಅನಾಹುತ ಸಂಭವಿಸಿವೆ.

# ನಂತರದ ಸ್ಥಾನಗಳಲ್ಲಿ ತುಮಕೂರು ರಸ್ತೆ, ಸರ್ಜಾಪುರ ರಸ್ತೆ, ಹಳೆ ಮದ್ರಾಸ್ ರಸ್ತೆ, ನೈಸ್ ರೋಡ್ ಬರುತ್ತವೆ.

ಡೇಂಜರ್ ಸ್ಪಾಟ್ ಗಳ ಪಟ್ಟಿ.. ಇಲ್ಲಿ ಎಚ್ಚರ ವಹಿಸಿ

# ಔಟರ್ ರಿಂಗ್ ರೋಡ್ (Outer Ring Road )- ಇಬ್ಬಲೂರು ಜಂಕ್ಷನ್, ಹೆಣ್ಣೂರು ಅಂಡರ್ ಪಾಸ್, ಬಾಬುಸಾಬ್ ಪಾಳ್ಯ, ಬಾಗಮನೆ ಟೆಕ್ ಪಾರ್ಕ್, ಮಾರತ್ ಹಳ್ಳಿಯ ಜೆಪಿ ಮೊರ್ಗನ್, ಮಾರತ್ ಹಳ್ಳಿಯ ಕಾರ್ತಿಕ್ ನಗರ, ಮಹದೇವಪುರ

# ಬಳ್ಳಾರಿ ರೋಡ್ (Bellary Road ) – ಜಕ್ಕೂರ್ ಫ್ಲೈ ಓವರ್, ಯಲಹಂಕ ಬೈಪಾಸ್  ಪಾಲನಹಳ್ಳಿ ಗೇಟ್, ಕನ್ನಮಂಗಲ ಪಾಳ್ಯ ಗೇಟ್, ಹುಣಸಮಾರನಹಳ್ಳಿ, ಬೆಟ್ಟ ಹಲಸೂರು ಜಂಕ್ಷನ್, ಕೊಡಿಗೇಹಳ್ಳಿ ಗೇಟ್

# ಹೊಸೂರು ರೋಡ್ (Hosur Road ) – ಬೊಮ್ಮನಹಳ್ಳಿ ಜಂಕ್ಷನ್, ಕೂಡ್ಲು ಗೇಟ್  ಸಿಂಗಸಂದ್ರ ಬಸ್ ಸ್ಟಾಪ್, ಗಾರೆಬಾವಿ ಪಾಳ್ಯ, ಕೋನಪ್ಪನ ಅಗ್ರಹಾರ, ಇಲೆಕ್ಟ್ರಾನಿಕ್ ಸಿಟಿ, ವೀರಸಂದ್ರ ಜಂಕ್ಷನ್

# ಈಗ ನಗರದ ಎಲ್ಲಾ ರಸ್ತೆಗಳು ಗುಂಡಿಮಯವಾಗಿವೆ. ಹೀಗಾಗಿ ಬೈಕ್ ಸವಾರರು ಸಂಚರಿಸುವಾಗ ಮೈ ಎಲ್ಲಾ ಕಣ್ಣಾಗಿರಬೇಕು.