ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂನ ಇಬ್ಬರು ಸಹಚರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬಂಧಿಸಿದೆ.
ಬಂಧಿತ ಆರೋಪಿಗಳನ್ನು ಆರೀಫ್ ಅಬೂಬಕರ್ ಶೇಖ್ (59 ವರ್ಷ) ಮತ್ತು ಶಬ್ಬೀರ್ ಅಬೂಬಕರ್ ಶೇಖ್ (51 ವರ್ಷ) ಎಂದು ಗುರುತಿಸಲಾಗಿದೆ. ಇವರಿಬ್ಬರೂ ನಿಜವಾದ ಸಹೋದರರಾಗಿದ್ದು, ಗುರುವಾರ ಸಂಜೆ ಆರೋಪಿಗಳನ್ನು ಸಂಜೆ ಅವರ ನಿವಾಸಿಗಳಿಂದ ಎನ್ಐಎ ಬಂಧಿಸಿದೆ.
ಇಂದು ಮಧ್ಯಾಹ್ನ ಅವರನ್ನು ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಂಬೈನ ಪಶ್ಚಿಮ ಭಾಗದಲ್ಲಿ ದಾವೂದ್ನ ಅಕ್ರಮ ಚಟುವಟಿಕೆಗಳು ಮತ್ತು ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವಲ್ಲಿ ಶೇಖ್ ಸಹೋದರರು ಎಂದು ಕರೆಯಲ್ಪಡುವ ಇಬ್ಬರೂ ಭಾಗಿಯಾಗಿದ್ದಾರೆ ಎಂದು ಎನ್ಐಎ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಮುಂಬೈಯ ಅನೇಕ ಕಡೆಗಳಲ್ಲಿ ದಾವೂದ್ ಇಬ್ರಾಹಿಂ ಸಹಚರರ ಮತ್ತು ಹವಾಲಾ ದಂದೆ ನಡೆಸುವವರ ಮೇಲೆ ಕೆಲ ದಿನಗಳ ಹಿಂದಷ್ಟೇ ಎನ್ಐಎ ದಾಳಿ ನಡೆಸಿತ್ತು. ನಾಗಪದ, ಗೋರ್ಗಾಂವ್, ಬೊರಿವಲಿ, ಸಂತಾಕ್ರೂಜ್, ಮುಂಬ್ರಾ, ಭೆಂದಿ ಬಜಾರ್ ಹಾಗೂ ಇತರೆಡೆಗಳಲ್ಲಿ ದಾಳಿ ನಡೆಸಲಾಗಿತ್ತು. ಫೆಬ್ರುವರಿಯಲ್ಲಿ ದಾಖಲಿಸಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ಈ ದಾಳಿ ನಡೆದಿತ್ತು.