No Result
View All Result
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕರಲ್ಲಿ ಸೋತ ಬಳಿಕ ಕಾಂಗ್ರೆಸ್ ತನ್ನ ಸಂಘಟನೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕ ಗಾಂಧಿ ಅವರಿಗೂ ಸಂಘಟನಾ ಜವಾಬ್ದಾರಿಯನ್ನು ನೀಡಲಾಗಿದೆ. ಆದರೆ ಅವರಿಗೆ ಯಾವುದೇ ರಾಜ್ಯದ ಉಸ್ತುವಾರಿಯನ್ನಾಗಲೀ ಅಥವಾ ನಿರ್ದಿಷ್ಟ ಜವಾಬ್ದಾರಿಯನ್ನಾಗಲೀ ನೀಡಲಾಗಿಲ್ಲ.
ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರಿಗೆ ಛತ್ತೀಸ್ಗಢದ ಹೊಣೆಗಾರಿಕೆ ನೀಡಲಾಗಿದೆ. ಸಚಿನ್ ಪೈಲಟ್ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಉತ್ತರ ಪ್ರದೇಶ ಉಸ್ತುವಾರಿಯಿಂದ ಪ್ರಿಯಾಂಕ ಗಾಂಧಿ ಅವರನ್ನು ವಿಮುಕ್ತಗೊಳಿಸಿ ಅವಿನಾಶ್ ಪಾಂಡೆಗೆ ಜವಾಬ್ದಾರಿ ನೀಡಲಾಗಿದೆ.
ಕರ್ನಾಟಕದ ಉಸ್ತುವಾರಿಯಾಗಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನೇ ಮುಂದುವರಿಸಲಾಗಿದೆ.
ಲೋಕಸಭಾ ಚುನಾವಣೆಗೂ ಮೊದಲು ಕಾಂಗ್ರೆಸ್ ತನ್ನ ಸಂಘಟನೆಯಲ್ಲಿ ಬದಲಾವಣೆಯನ್ನು ಮಾಡಿದೆ.
No Result
View All Result
error: Content is protected !!