ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ನೇಕಾರರ ಸಮುದಾಯಕ್ಕೆ ಹೊಸ ಕೊಡುಗೆ ಘೋಷಿಸುವ ನಿರೀಕ್ಷೆ ಇದೆ.
ನೇಕಾರರ ಸಮುದಾಯಕ್ಕೆ ಪ್ರತ್ಯೇಕವಾಗಿ ನೇಕಾರರ ಅಭಿವೃದ್ಧಿ ನಿಗಮ ರಚನೆ ಬಗ್ಗೆ ಘೋಷಣೆ ಮಾಡುವ ನಿರೀಕ್ಷೆ ಇದೆ.
ಮಾರ್ಚ್ 12ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನೇಕಾರರ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಅವರು ನಿಗಮ ರಚನೆ ಬಗ್ಗೆ ಘೋಷಣೆ ಮಾಡಲಿದ್ದಾರೆ.
ಇದನ್ನೂ ಓದಿ: ಬೃಹತ್ ಬೆಂಗಳೂರು ವಿಧಾನಸಭಾ ಸಮೀಕ್ಷೆ – ಯಾವ ಪಕ್ಷಕ್ಕೆ ಮೇಲುಗೈ..?
ನೇಕಾರರ ಸಮಾವೇಶ ಸಂಬಂಧ ಇವತ್ತು ಬೆಂಗಳೂರಲ್ಲಿರುವ ಬಿಜೆಪಿ ಮುಖ್ಯ ಕಚೇರಿಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಯಿತು.
ಈ ಸಭೆಯಲ್ಲಿ ಮಾಜಿ ಶಾಸಕ ಎಂಡಿ ಲಕ್ಷ್ಮೀನಾರಾಯಣ್, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ನಿರ್ದೇಶಕ ಮತ್ತು ರಾಜ್ಯ ಬಿಜೆಪಿ ನೇಕಾರರ ವಿಭಾಗದ ರಾಜ್ಯ ಸಮಿತಿ ಸದಸ್ಯ ದಯಾನಂದ್ ಜಿ ಎಸ್ ಸೇರಿದಂತೆ ಹಲವು ಭಾಗವಹಿಸಿದ್ದರು.
ಕರ್ನಾಟಕದಲ್ಲಿ ನೇಕಾರರ ಸಮುದಾಯಕ್ಕೆ ಸೇರಿದ 60 ಲಕ್ಷ ಜನಸಂಖ್ಯೆ ಇದ್ದು, ನಿಗಮ ಸ್ಥಾಪನೆ ಮೂಲಕ ಮತಗಳಿಸುವ ಲೆಕ್ಕಾಚಾರ ಬಿಜೆಪಿಯದ್ದು.
ಫೆಬ್ರವರಿ 19ರಿಂದ ಫೆಬ್ರವರಿ 20ರ ನಡುವೆ ಎರಡು ದಿನದ ಅಂತರದಲ್ಲಿ ಬಿಜೆಪಿ ಸರ್ಕಾರ ಐದು ಹೊಸ ಅಭಿವೃದ್ಧಿ ನಿಗಮಗಳನ್ನು ರಚಿಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ: IAS ರೋಹಿಣಿ ಸಿಂಧೂರಿ ವಿರುದ್ಧ IPS ಡಿ ರೂಪಾ ಹೊಸ ಪೋಸ್ಟ್..? – ಏನಿದೆ ಅದರಲ್ಲಿ..?