ಕರ್ನಾಟಕದಲ್ಲಿ ಜೈನ ಧರ್ಮ ಬಳಗ ಹಾಗೂ ಭಾರತೀಯ ಜೈನ್ ಮಿಲನ್ ವಲಯ – 8 ರ ಜಂಟಿ ಆಯೋಜನೆಯ ಚಿಣ್ಣರ ಜಿನಭಜನಾ ಸೀಸನ್ – 3ರನ್ನು ಭಾನುವಾರ ಆನ್ಲೈನ್ ಮಾಧ್ಯಮದ ಮೂಲಕ ಉದ್ಘಾಟನೆಗೊಂಡಿತು.
ಸಮಾರಂಭದಲ್ಲಿ ಪ.ಪೂ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಆಶೀರ್ವಚನವನ್ನು ದಯಪಾಲಿಸಿದರು. ಮಕ್ಕಳಲ್ಲಿ ಧಾರ್ಮಿಕ ಸಂಸ್ಕಾರ ಬೆಳೆದರೆ ಮುಂದಕ್ಕೆ ಅವರುಗಳು ಜೈನ ಧರ್ಮದ ಆಚಾರ ವಿಚಾರಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟನೆಗೈದ ನಾಡಿನ ಖ್ಯಾತ ಗಾಯಕಿ ಶ್ರೀಮತಿ ಜಯಶ್ರೀ ಡಿ ಜೈನ್ ಹೊರನಾಡು ಅವರು ಚಿಣ್ಣರೆಲ್ಲರೂ ಜಿನ ಭಜನಾ ಸ್ಪರ್ಧೆಯಲ್ಲಿ ಮುಕ್ತವಾಗಿ ಭಾಗವಹಿಸಿ ಸೋಲು ಗೆಲುವುಗಳ ಪರಿಗಣಿಸದೇ ಮುನ್ನಡೆಯಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ಜೈನ್ ಮಿಲನ್ ವಲಯ ೮ ರ ಅಧ್ಯಕ್ಷ ಶ್ರೀಪುಷ್ಪರಾಜ್ ಜೈನ್ ಅವರು ಮಾತನಾಡುತ್ತಾ ಇಂದಿನ ಜನಾಂಗಕ್ಕೆ ಧಾರ್ಮಿಕ ಸಂಸ್ಕಾರದ ಅಗತ್ಯವಿದ್ದು ಈ ನಿಟ್ಟಿನಲ್ಲಿ ಜೈನ ಸಂಘಟನೆಗಳ ಸಹಿತ ಎಲ್ಲರೂ ಈ ಕೈಂಕರ್ಯದಲ್ಲಿ ಕೈ ಜೋಡಿಸಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಮೈತ್ರಿ ನಂದೀಶ್ ಬೆಂಗಳೂರು, ಶ್ರೀ ಯುವ ಅಜಿತ್ ಬೆಂಗಳೂರು, ಶ್ರೀ ಚಿತ್ತಾ ಜಿನೇಂದ್ರ ಬೆಂಗಳೂರು, ಶ್ರೀ ಸಂದೇಶ್ ಜೈನ್ ಅಂಗಡಿಬೆಟ್ಟು ದುಬೈ ಚಿಣ್ಣರ ಜಿನ ಭಜನೆ ಅತ್ಯಂತ ಯಶಸ್ವಿಯಾಗಲಿ ಎಂದು ಹಾರೈಸಿದರು.
ವಲಯ ಸಂಯೋಜಕರಾದ ಪ್ರೇಮಾ ಸುಖಾನಂದ್ ಬೆಂಗಳೂರು, ಶ್ರೀ ಜೀವಂಧರ್ ಕುಮಾರ್ ಧಾರವಾಡ, ಶ್ರೀಮತಿ ಶೀಲಾ ಅನಂತರಾಜ್ ಮೈಸೂರು, ಶ್ರೀ ವಿಲಾಸ್ ಪಾಸಣ್ಣನವರ್, ಶ್ರೀ ಯುವರಾಜ್ ಭಂಡಾರಿ, ಶ್ರೀ ಬಾಹುಬಲಿ ಬಿರಾದಾರ್ ಜಮಖಂಡಿ, ಶ್ರೀ ಸುದರ್ಶನ್ ಜೈನ್ ಮಂಗಳೂರು, ಶ್ರೀ ಮಹಾವೀರ್ ಶಹಾಪೂರ್ ಜಮಖಂಡಿ, ಶ್ರೀ ಪವನಂಜಯ ಬಲ್ಲಾಳ್ ಮುಂಬೈ, ಮುಂತಾದವರು ಚಿಣ್ಣರ ಜಿನ ಭಜನಾ ಸ್ಪರ್ಧೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
ನಿರಂಜನ್ ಜೈನ್ ಕುದ್ಯಾಡಿ ಕಾರ್ಯಕ್ರಮ ನಿರೂಪಿಸಿದರು. ಚಿಣ್ಣರ ಜಿನ ಭಜನಾ ಸ್ಪರ್ಧೆ – ೨ ರ ವಿಜೇತೆ ಸಹಸ್ರಾ ಎ ಜೈನ್ ಮೈಸೂರು ಮಂಗಲಾಚರಣೆ ಹಾಡಿದರು. ಶ್ರೀ ಮಹಾವೀರ್ ಪ್ರಸಾದ್ ಹೊರನಾಡು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನು ಆಡಿದರು. ಉಜ್ವಲ್ ಮೇಗುಂದ ಸ್ಪರ್ಧೆಯ ನಿಯಮಾವಳಿಗಳನ್ನು ಪ್ರಕಟಿಸಿದರು. ಡಾಲಿ ವಿಜಯ ಕುಮಾರ್ ಧನ್ಯವಾದಗೈದರು. ಶ್ರೀ ಮಿತ್ರಸೇನ್ ಜೈನ್ ಅಳದಂಗಡಿ ಶಾಂತಿಮಂತ್ರ ಪಠಿಸಿದರು. ಧೀರಜ್ ಜೈನ್ ಡಿ ಹೊರನಾಡು ಹಾಗೂ ವಜ್ರಕುಮಾರ್ ಜೈನ್ ಬೆಂಗಳೂರು ತಾಂತ್ರಿಕ ಸಹಕಾರ ನೀಡಿದರು.
ಶ್ರೀ ಪ್ರಸನ್ನ ಕುಮಾರ್ ಮೈಸೂರು, ಶ್ವೇತಾ ಜೈನ್ ನೋಟರಿ ಮೂಡುಬಿದಿರೆ, ಶ್ರೀ ವಸಂತ್ ಕುಮಾರ್ ಬಂಗ ಕಾರ್ಕಳ, ಧೀರಜ್ ಜೈನ್ ಹೊಳೆನರಸೀಪುರ, ಶ್ರೀ ಪ್ರಶಾಂತ್ ಉಪಾಧ್ಯೆ, ಶ್ರೀಮತಿ ನಂದಿನಿ ಜೈನ್ ಇಂಧೋರ್, ಶ್ರೀಮತಿ ಸ್ಪೂರ್ತಿ ಜೈನ್ ಬೆಂಗಳೂರು, ಶ್ರೀ ಸುದೇಶ್ ಜೈನ್ ಮಕ್ಕಿಮನೆ, ಅಕ್ಷಯ್ ಜೈನ್ ಕೆರ್ವಾಶೆ, ಪ್ರಜ್ವಲ್ ಜೈನ್ ಚಾಮರಾಜನಗರ, ಪೂಜಾ ಜೈನ್ ತುಮಕೂರು, ಅರ್ಚಿತ್ ಜೈನ್ ಸಂಸೆ ಮುಂತಾದವರು ಉಪಸ್ಥಿತರಿದ್ದರು.
-ನಿರಂಜನ್ ಜೈನ್ ಕುದ್ಯಾಡಿ