16ನೇ ಆವೃತ್ತಿಯ ಐಪಿಎಲ್ ಕಿರೀಟಕ್ಕಾಗಿ ಅಹಮದಾಬಾದ್ನ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವೆ ಆಟ ನಡೆಯುತ್ತಿದೆ.
ಈ ವೇಳೆ ವಿಶೇಷ ಅಂಕಿ ಅಂಶವೊಂದಿದೆ.
ಬೆಸ ವರ್ಷಗಳು ಅಂದರೆ ಬೆಸ ಸಂಖ್ಯೆಯಿಂದ ಕೊನೆಯಾಗುವ ಇಸವಿಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವೇ ಐಪಿಎಲ್ ಗೆದ್ದಿದೆ, ಗುರಿ ಬೆನ್ನತ್ತಿದ ತಂಡ ಐಪಿಎಲ್ ಟ್ರೋಫಿ ಗೆದ್ದಿಲ್ಲ.
2009, 2011, 2013, 2015, 2017, 2019 ಮತ್ತು 2021ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡವೇ ಐಪಿಎಲ್ ಗೆದ್ದಿದೆ.
ಇವತ್ತು ಟಾಸ್ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಮೊದಲಿಗೆ ಫೀಲ್ಡ್ ಮಾಡಲು ನಿರ್ಧರಿಸಿದೆ.
ಒಂದು ವೇಳೆ ಇವತ್ತು ಚೆನ್ನೈ ಸೂಪರ್ ಕಿಂಗ್ಸ್ ಗೆದ್ದರೆ ಹೊಸ ದಾಖಲೆ ಕೂಡಾ ನಿರ್ಮಾಣವಾಗಲಿದೆ.
ADVERTISEMENT
ADVERTISEMENT