ಚಂಡೀಗಢ ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಸೋಲಾಗಿದೆ.
ಮೇಯರ್ ಆಗಿ ಪಾಲಿಕೆಯ ಬಿಜೆಪಿ ಸದಸ್ಯ ಮನೋಜ್ ಸೋನ್ಕಾರ್ ಗೆದ್ದಿದ್ದಾರೆ. ಅವರಿಗೆ 16 ಮತಗಳು ಸಿಕ್ಕಿವೆ.
ಕಾಂಗ್ರೆಸ್ ಮತ್ತು ಆಪ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಕುಲದೀಪ್ ಸಿಂಗ್ಗೆ 12 ಮತಗಳು ಸಿಕ್ಕಿವೆ. 8 ಮತಗಳನ್ನು ಚುನಾವಣಾಧಿಕಾರಿ ಅಸಿಂಧುಗೊಳಿಸಿದ್ದರಿಂದ ಮೈತ್ರಿಕೂಟಕ್ಕೆ ಸೋಲಾಗಿದೆ.
ಪಾಲಿಕೆಯಲ್ಲಿ ಆಪ್ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ 20 ಕೌನ್ಸಿಲರ್ಗಳ ಬೆಂಬಲ ಇತ್ತು. ಬಿಜೆಪಿ 15 ಕೌನ್ಸಿಲರ್ ಗಳನ್ನು ಹೊಂದಿದೆ. ಚಂಡೀಗಢ ಬಿಜೆಪಿ ಸಂಸದೆ ಕಿರೋನ್ ಖೇರ್ ಅವರು ಬಿಜೆಪಿ ಪರ ಮತ ಹಾಕಿದ್ದಾರೆ.
ಫಲಿತಾಂಶ ಪ್ರಕಟವಾದ ಬಳಿಕ ಗದ್ದಲ ಏರ್ಪಟ್ಟ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಮಾರ್ಷಲ್ಗಳನ್ನು ಕರೆಯಲಾಯಿತು.
ಜನವರಿ 18ರಂದು ನಿಗದಿಯಾಗಿದ್ದ ಮೇಯರ್ ಚುನಾವಣೆಯನ್ನು ಫೆಬ್ರವರಿ 8ಕ್ಕೆ ಮುಂದೂಡಲಾಗಿತ್ತು. ಆಪ್-ಕಾಂಗ್ರೆಸ್ ಕೌನ್ಸಿಲರ್ಗಳು ಪಂಜಾಬ್-ಹರಿಯಾಣ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಜನವರಿ 29ರಂದು ಮೇಯರ್ ಚುನಾವಣೆಗೆ ಹೈಕೋರ್ಟ್ ಆದೇಶಿಸಿತ್ತು.