ಕಳೆದ 11 ವರ್ಷಗಳಲ್ಲಿ ದೇಶದ ನಾಲ್ಕನೇ ಅತೀ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್, ಕರ್ನಾಟಕ ಮೂಲದ ಕೆನರಾ ಬ್ಯಾಂಕ್ (Canara Bank) ಬರೋಬ್ಬರೀ 1 ಲಕ್ಷದ 29 ಸಾವಿರ ಕೋಟಿ ರೂಪಾಯಿ ಮೊತ್ತದಷ್ಟು ಸಾಲವನ್ನು ಮನ್ನಾ ಮಾಡಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯನ್ನು ಆಧರಿಸಿ ಪ್ರಮುಖ ಬ್ಯುಸಿನೆಸ್ ವೆಬ್ಸೈಟ್ ಮನಿಲೈಫ್ ವರದಿ ಮಾಡಿದೆ.
Write off ಎಂದರೆ:
ಅನುತ್ಪಾದಕ ಸಾಲಗಳನ್ನು (NPA) ಬ್ಯಾಂಕುಗಳು ತಮ್ಮ ಬ್ಯಾಲೆನ್ಸ್ ಶೀಟ್ ನಿಂದ ತೆಗೆದು ಹಾಕುವುದು. Write offನಲ್ಲಿ ಸಾಲ ವಸೂಲಾತಿಗೆ ಬ್ಯಾಂಕುಗಳು ಪ್ರಕ್ರಿಯೆಗಳನ್ನು ಮುಂದುವರೆಸುತ್ತವೆಯಾದರೂ ಆ ಸಾಲಗಳು ಪೂರ್ಣ ಪ್ರಮಾಣದಲ್ಲಿ ವಸೂಲಿ ಆದ ಉದಾಹರಣೆಗಳಿಲ್ಲ. write off ಆದ ಸಾಲಗಳು ಬ್ಯಾಂಕ್ಗೆ ವಾಪಸ್ ಆಗಿದ್ದೇ ಕಡಿಮೆ, ಅಂದರೆ ಈ ಸಾಲಗಳ ವಸೂಲಾತಿ ಬಹುತೇಕ ಮುಗಿದ ಕಥೆ ಎಂದೇ ಅರ್ಥ.
Write off ಸಾಲಗಳನ್ನು ಬ್ಯಾಂಕುಗಳು ತಮ್ಮ ಬ್ಯಾಲೆನ್ಸ್ ಶೀಟ್ಸ್ನಿಂದ ತೆಗೆದುಹಾಕುವ ಮೂಲಕ ಬ್ಯಾಂಕ್ನ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಸಾಬೀತುಪಡಿಸುವ ಪ್ರಯತ್ನ. ಇದನ್ನು ಅಘೋಷಿತ ಸಾಲ ಮನ್ನಾ ಎಂದೂ ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಹುದು.
100 ಕೋಟಿ ರೂ.ಗಿಂತಲೂ ಹೆಚ್ಚು ಸಾಲ Write off:
ಪುಣೆ ಮೂಲದ ಆರ್ಟಿಐ ಕಾರ್ಯಕರ್ತ ಪಡೆದಿರುವ ಮಾಹಿತಿ ಪ್ರಕಾರ 11 ವರ್ಷಗಳಲ್ಲಿ ಕೆನರಾ ಬ್ಯಾಂಕ್ 100 ಕೋಟಿ ರೂಪಾಯಿಗಿಂತಲೂ ಹೆಚ್ಚು ಸಾಲ ಪಡೆದ ಹಲವು ಉದ್ಯಮಿಗಳ ಸಾಲವನ್ನು Write Off ಮಾಡಿದೆ.
ಆದರೆ ಈ ರೀತಿ ಕೆನರಾ ಬ್ಯಾಂಕ್ Write off ವರ್ಗದಲ್ಲಿರುವ ಆ ಉದ್ಯಮಿಗಳು ಯಾರ್ಯಾರು..? ಅವರುಗಳು ಪಡೆದ ಒಟ್ಟು ಸಾಲದ ಮೊತ್ತ ಎಷ್ಟು.? ಒಬ್ಬೊಬ್ಬ ಉದ್ಯಮಿಯ ಎಷ್ಟೆಷ್ಟು ಸಾಲದ ಮೊತ್ತವನ್ನು Write Off ಮಾಡಲಾಗಿದೆ ಎಂಬ ಮಾಹಿತಿಯನ್ನು ಗೌಪ್ಯತೆ ಕಾರಣಕ್ಕಾಗಿ ಬಹಿರಂಗಗೊಳಿಸಲು ನಿರಾಕರಿಸಿದೆ.
ಆದರೆ ಕೆನರಾ ಬ್ಯಾಂಕ್ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್. ಹೀಗಾಗಿ ಈ ಬ್ಯಾಂಕ್ನಿಂದ ಎಷ್ಟು ಉದ್ಯಮಿಗಳ ಸಾಲ Write Off ಆಗಿದೆ, ಮೊತ್ತ ಎಷ್ಟು ತಿಳಿದುಕೊಳ್ಳುವ ಹಕ್ಕು ಸಾರ್ವಜನಿಕರಿಗೆ ಇರುತ್ತದೆ.
ಪ್ರತಿ ವರ್ಷವೂ Write Off ಸಾಲದ ಮೊತ್ತ ಹೆಚ್ಚಳ:
ಕೆನರಾ ಬ್ಯಾಂಕ್ ಕಳೆದ ವರ್ಷಗಳಲ್ಲಿ ಎಷ್ಟು ಮೊತ್ತದ ಸಾಲವನ್ನು Write Off ಮಾಡಿದೆ ಎಂಬ ಅಂಕಿಅಂಶವನ್ನು ನೀಡಿದೆ. ಆ ಅಂಕಿಅಂಶದ ಪ್ರಕಾರ 2011ರಿಂದ ಪ್ರತಿ ವರ್ಷ Write Off ಸಾಲದ ಮೊತ್ತ ಏರುಗತಿಯಲ್ಲೇ ಇದೆ.
2011: 3,801 ಕೋಟಿ ರೂ.
2012: 4,080 ಕೋಟಿ ರೂ.
2013: 3,930 ಕೋಟಿ ರೂ.
2014: 4,917 ಕೋಟಿ ರೂ.
2015: 6,863 ಕೋಟಿ ರೂ.
2016: 8,467 ಕೋಟಿ ರೂ.
2017: 10,669 ಕೋಟಿ ರೂ.
2018: 12,311 ಕೋಟಿ ರೂ.
2019: 14,398 ಕೋಟಿ ರೂ.
2020: 28,179 ಕೋಟಿ ರೂ.
2021: 33,091 ಕೋಟಿ ರೂ.
2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕ ಮೂಲದ ಮತ್ತೊಂದು ಪ್ರಮುಖ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ನ್ನು (Syndicate Bank) ಕೆನರಾ ಬ್ಯಾಂಕ್ನೊಂದಿಗೆ ವಿಲೀನ ಮಾಡಿತ್ತು.
ADVERTISEMENT
ADVERTISEMENT