ಆಗಸ್ಟ್ 15ರಂದು ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) (BMTC) ಸಾರ್ವಜನಿಕ ಉಚಿತ ಪ್ರಯಾಣದ ಉಡುಗೊರೆ ಪ್ರಕಟಿಸಿದೆ.
ಆಗಸ್ಟ್ 15ರಂದು ಒಂದು ದಿನ ಬಿಎಂಟಿಸಿಯಲ್ಲಿ ಪ್ರಯಾಣಿಸುವ ಸಾರ್ವಜನಿಕರು ಟಿಕೆಟ್ ಕೇಳಿ ಪಡೆಯಬೇಕಿಲ್ಲ.
ಸಾಮಾನ್ಯ ಸಾರಿಗೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮಾತ್ರ ಈ ಉಚಿತ ಸೌಲಭ್ಯ ಸಿಗಲಿದೆ.