ನಾಗಲ್ಯಾಂಡ್​​ನಲ್ಲಿ BJP+NDPP ಮೈತ್ರಿಕೂಟ ಅಧಿಕಾರಕ್ಕೆ

ನಾಗಲ್ಯಾಂಡ್​ನಲ್ಲಿ ನ್ಯಾಷನಲಿಸ್ಟ್​ ಡೆಮಾಕ್ರಾಟಿಕ್​ ಪ್ರೋಗ್ರೇಸೀವ್​​ ಪಾರ್ಟಿ (NDPP) ಮತ್ತು ಬಿಜೆಪಿ ಮೈತ್ರಿ ಕೂಟ ಅಧಿಕಾರಕ್ಕೆ ಬಂದಿದೆ.

60 ಶಾಸಕ ಬಲದ ವಿಧಾನಸಭೆಯಲ್ಲಿ ಎನ್​ಡಿಪಿಪಿ ಮತ್ತು ಬಿಜೆಪಿ ಮೈತ್ರಿಕೂಟ 36 ಸೀಟುಗಳನ್ನು ಗೆದ್ದುಕೊಂಡಿದೆ. ಎನ್​ಡಿಎ ಪಾಲುದಾರ ಪಕ್ಷವಾಗಿರುವ ರಾಷ್ಟ್ರೀಯ ಸೋಷಿಯಲಿಸ್ಟ್​ ಪಾರ್ಟಿ (ರಾಮದಾಸ್​ ಅಠಾವಳೆ ಬಣ) 2 ಸೀಟುಗಳನ್ನು ಗೆದ್ದುಕೊಂಡಿದೆ.

ಕಳೆದ ಬಾರಿಯಂತೆ ಈ ಬಾರಿಯೂ ಕಾಂಗ್ರೆಸ್​ ಒಂದೇ ಒಂದು ಸೀಟು ಗೆದ್ದಿಲ್ಲ.

ಎನ್​ಸಿಪಿ -7, ಎನ್​ಪಿಪಿ – 5 ಸೀಟುಗಳನ್ನು ಗೆದ್ದುಕೊಂಡಿದೆ. ನಾಗ ಪೀಪಲ್ಸ್​ ಫ್ರಂಟ್​ 2 ಸೀಟುಗಳನ್ನು ಗೆದ್ದುಕೊಂಡಿದೆ.

ಲೋಕಜನಶಕ್ತಿ ಪಕ್ಷ ( ರಾಮ್​ವಿಲಾಸ್​ ಪಾಸ್ವಾನ್​ ಬಣ) 3, ಜೆಡಿಯು 1, ಸ್ವತಂತ್ರ ಅಭ್ಯರ್ಥಿಗಳು 4 ಕ್ಷೇತ್ರಗಳಲ್ಲಿ ಗೆದ್ದಿದ್ದಾರೆ.

LEAVE A REPLY

Please enter your comment!
Please enter your name here