ಹಿಂದೂಗಳು ನಾಲ್ಕು ಮಕ್ಕಳನ್ನು ಹೆರಬೇಕು ಎಂದು ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಜಾ ಕರೆ ನೀಡಿದ್ದಾರೆ.
ಅಂದಹಾಗೆ 2023ರ ವಿಧಾನಸಭಾ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಮಾಹಿತಿಯ ಪ್ರಕಾರ ಹರೀಶ್ ಪೂಂಜಾ ಅವರಿಗೆ ಇಬ್ಬರು ಗಂಡು ಮಕ್ಕಳು. ತಮಗೆ ಗಹನ್ ಮತ್ತು ಚಾರ್ವಿಕ್ ಗಂಡು ಮಕ್ಕಳಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ಮಾಹಿತಿ ನೀಡಿದ್ದಾರೆ.
ನೀವು ಸಂಖ್ಯೆಯನ್ನ ಜಾಸ್ತಿ ಮಾಡಿ ಎಂದು ಹೇಳುತ್ತಿಲ್ಲ. ನಮ್ಮವರು (ಹಿಂದೂಗಳು) ಒಂದು ಮಗು, ಎರಡು ಮಗು ಅಂತಿದ್ದಾರೆ. ಆದರೆ ಬೇರೆ ಧರ್ಮದವರ ಸಂಖ್ಯೆ ನೋಡಿ. ಹೆಚ್ಚಿನವರು ನಾವು 80 ಕೋಟಿ ಇದ್ದೀವಿ, ಅವರು ಇರೋದು 20 ಕೋಟಿ ಅಂತಾರೆ. ಆದರೆ ಅದೇ 20 ಕೋಟಿಗೆ ನಾಲ್ಕರ ಹಾಗೆ ಮಕ್ಕಳು ಹುಟ್ಟಿದರೆ ಎಷ್ಟಾಗುತ್ತೆ..? ನಮಗೆ ಹುಟ್ಟೋದು ಒಂದು, ತಪ್ಪಿದ್ರೆ ಎರಡು. ಇದರ ಬಗ್ಗೆ ನೀವೆಲ್ಲ ಮನೆಯಲ್ಲಿ ಕೂತು ಸ್ವಲ್ಪ ಯೋಚಿಸಿ
ಎಷ್ಟು ವರ್ಷಕ್ಕೆ ನಮ್ಮ ಜನಸಂಖ್ಯೆ ಕಡಿಮೆ ಆಗಬಹುದು ಮತ್ತು ಬ್ಯಾರಿಗಳ ಜನಸಂಖ್ಯೆ ಎಷ್ಟು ವರ್ಷಗಳಲ್ಲಿ ಜಾಸ್ತಿಯಾಗಲಿದೆ ಎನ್ನುವುದನ್ನು ಯೋಚಿಸಿ. ಒಂದು ವೇಳೆ ಹಿಂದೂಗಳ ಸಂಖ್ಯೆ 20 ಕೋಟಿ ಆಗಿ, ಬ್ಯಾರಿಗಳ ಸಂಖ್ಯೆ 80 ಕೋಟಿಯಾದರೆ ಈ ದೇಶದಲ್ಲಿ ಹಿಂದೂ ಸಮಾಜದ ಸ್ಥಿತಿ ಏನಾಗಬಹುದು ಎನ್ನುವುದನ್ನು ಆಲೋಚಿಸಿ
ಎಂದು ಜನವರಿ 7ರಂದು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪೆರಾಡಿಯಲ್ಲಿ ನಡೆದ ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮದಲ್ಲಿ ಶಾಸಕ ಪೂಂಜಾ ಹೇಳಿದ್ದಾರೆ.
ಚುನಾವಣಾ ಆಯೋಗಕ್ಕೆ ಹರೀಶ್ ಪೂಂಜಾ ಸಲ್ಲಿಸಿರುವ ಪ್ರಮಾಣಪತ್ರದಲ್ಲಿನ ಮಾಹಿತಿ:
ADVERTISEMENT
ADVERTISEMENT