ವಿಧಾನಸಭಾ ಚುನಾವಣಾ ವರ್ಷವಾದ 2022-23 ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ನಡೆಯಲಿದೆ. ಮುಂದಿನ ವಿಧಾನಸಭೆಗೆ ಬಿಬಿಎಂಪಿ ಬಹು ಮುಖ್ಯ ಪಾತ್ರ ವಹಿಸುವುದರಿಂದ ಬಿಜೆಪಿ ಇಲ್ಲಿ ಗೆಲ್ಲಲೇಬೇಕು ಎಂಬ ತಂತ್ರ ಎಣೆಯುತ್ತಿದೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ಚುನಾವಣೆಯಲ್ಲಿ ಗೆಲ್ಲಲು ಹಾಲಿ ಕಾರ್ಪೋರೇಟ್ಗಳಿಗೆ ಬಿಜೆಪಿ ಟಿಕೇಟ್ ನೀಡದೇ ಇರಲು ನಿರ್ಧರಿಸಿದೆ ಎನ್ನಲಾಗಿದೆ. ಬಿಜೆಪಿ 2010ರಲ್ಲಿ 110 ವಾರ್ಡ್ ಮತ್ತು 2015ರಲ್ಲಿ 100 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿತ್ತು.
2023ರ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ಫಲಿತಾಂಶ ಪರಿಣಾಮ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಮತ್ತೆ ಹೇಗಾದರೂ ಗೆಲ್ಲಲಬೇಕೆಂಬ ತಂತ್ರಗಾರಿಕೆ ಬಿಜೆಪಿಯಿಂದ ನಡೆಯುತ್ತಿದೆ.
ದೆಹಲಿಯಲ್ಲೂ 2017ರಲ್ಲಿ ಹಾಲಿ ಕಾರ್ಪೋರೇಟರ್ಗಳಿಗೆ ಬಿಜೆಪಿ ಟಿಕೆಟೇ ಕೊಟ್ಟಿರಲಿಲ್ಲ. ಈ ತಂತ್ರಗಾರಿಕೆಯಿಂದ ದೆಹಲಿಯಲ್ಲಿ ಮೂರು ಪಾಲಿಕೆಗಳನ್ನು ಬಿಜೆಪಿ ಗೆದ್ದಿತ್ತು. ಉತ್ತರಪ್ರದೇಶ, ಮಣಿಪುರ, ಉತ್ತರಾಖಂಡ್ ಚುನಾವಣೆಯಲ್ಲೂ ಬಿಜೆಪಿ ಇದೇ ತಂತ್ರಗಾರಿಕೆ ಅನುಸರಿಸುತ್ತದೆ ಎಂದು ತಿಳಿದುಬಂದಿದೆ.