`ಅನುದಾನ ಬಿಡುಗಡೆ ಮಾಡ್ತಾರೆ ಎಂದು ಸಚಿವ ಈಶ್ವರಪ್ಪ ಅವರ ಮೇಲೆ ನಂಬಿಕೆ ಇಟ್ಟು ಕಾಮಗಾರಿ ಮಾಡಿದ್ದೇವೆ. ಈಗ ನುಣುಚಿಕೊಳ್ಳುವುದು ಸರಿಯಲ್ಲ’ ಎಂದು ಸಚಿವ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಬೆಳಗಾವಿ ಜಿಲ್ಲೆಯ ಸಿವಿಲ್ ಗುತ್ತಿಗೆದಾರ ಸಂತೋಷ್ ಪಾಟೀಲ್ ತಿರುಗೇಟು ನೀಡಿದ್ದಾರೆ. `ಅಲ್ಲದೇ ವರ್ಕ್ ಆರ್ಡರ್ ನೀಡದೇ ಹೋದರೆ ಮುಂದಿನ ಅನಾಹುತಕ್ಕೆ ಈಶ್ವರಪ್ಪ ಅವರೇ ಹೊಣೆ’ ಎಂದೂ ಎಚ್ಚರಿಸಿದ್ದಾರೆ.
ಜೊತೆಗೆ ತಾವು ಬಿಜೆಪಿ ಕಾರ್ಯಕರ್ತ ಎಂದಿರುವ ಸಂತೋಷ್ ಪಾಟೀಲ್, ಆ ಸಂಬAಧ ಬಿಜೆಪಿ ಪಕ್ಷ ನೀಡಿರುವ ಕಾರ್ಯಕರ್ತರ ಗುರುತಿನ ಚೀಟಿಯನ್ನೂ ಹಂಚಿಕೊAಡಿದ್ದಾರೆ.
`108 ಕಾಮಗಾರಿ ಮಾಡ್ಬೇಕಾದ್ರೆ ಯಾರಾದ್ರೂ ಸುಮ್ನೆ ಇರ್ತಾರಾ..? ಮೇಲಿಂದ ದೇವರು ಬಂದು ಮಾಡಿದ್ದಾ..? ಅಭಿವೃದ್ಧಿ ಮಾಡಿದ್ದೇವೆ. ಸುಮ್ನೆ ನುಣುಚಿಕೊಳ್ಳುವ ಸಲುವಾಗಿ ಏನೇನೋ ಹೇಳಲ ಹೋಗ್ಬೇಡಿ. ಮಂತ್ರಿ ಈಶ್ವರಪ್ಪ ಅವರನ್ನು ಕೇಳಿಕೊಳ್ಳುವುದಿಷ್ಟೇ, ಅಭಿವೃದ್ಧಿ ಮಾಡಿದ್ದೇವೆ, ಚೆನ್ನಾಗಿ ಪಕ್ಷ ಬೆಳೆಸಿಕೊಂಡು ಬಂದಿದ್ದೇವೆ. ನೀವು ಕೂಡಲೇ ವರ್ಕ್ ಆರ್ಡರ್ ಮತ್ತು ಅನುದಾನ ಬಿಡುಗಡೆ ಮಾಡ್ಬೇಕು’ ಎಂದು ಗುತ್ತಿಗೆದಾರ ಸಂತೋಷ್ ಕೆ ಪಾಟೀಲ್ ಆಗ್ರಹಿಸಿದ್ದಾರೆ.
`ಸುಮ್ನೆ ಪಾರಾಗಲು ಅವರು ಗೊತ್ತಿಲ್ಲ, ಇವರು ಗೊತ್ತಿಲ್ಲ ಎಂದು ಹೇಳುವುದು ಸರಿಯಲ್ಲ’ ಎಂದು ಗುತ್ತಿಗೆದಾರ ಸಂತೋಷ್ ಪಾಟೀಲ್ ತಿರುಗೇಟು ನೀಡಿದ್ದಾರೆ.