ಬಹುಜನಸಮಾಜವಾದಿ ಪಕ್ಷದಿಂದ ಲೋಕಸಭಾ ಸಂಸದ ಡ್ಯಾನಿಶ್ ಅಲಿಯವರನ್ನು ಉಚ್ಛಾಟನೆ ಮಾಡಲಾಗಿದೆ.
ಜೆಡಿಎಸ್ನಿಂದ ಮಾಜಿ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಮತ್ತು ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಸಿ ಕೆ ನಾನು ಅವರನ್ನು ಉಚ್ಛಾಟನೆ ಮಾಡಿದ ದಿನವೇ ಡ್ಯಾನಿಶ್ ಅಲಿಯವರನ್ನು ಉಚ್ಛಾಟನೆ ಮಾಡಲಾಗಿದೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಎಸ್ಪಿಯಿಂದ ಉಚ್ಛಾಟನೆ ಮಾಡಲಾಗಿದೆ ಎಂದು ಪಕ್ಷ ಆದೇಶದಲ್ಲಿ ತಿಳಿಸಿದೆ.
ಸಂಸತ್ತಿನ ಈ ಹಿಂದಿನ ಅಧಿವೇಶನದಲ್ಲಿ ಡ್ಯಾನಿಶ್ ಅಲಿಯವರನ್ನು ಬಿಜೆಪಿ ಸಂಸದ ರಮೇಶ್ ಬಿಧೂರಿ ಧರ್ಮದ ಹೆಸರಲ್ಲಿ ನಿಂದನೆ ಮಾಡಿದ್ದರು. ಈ ಸಂಬಂಧ ಡ್ಯಾನಿಶ್ ಅಲಿ ಕ್ರಮಕ್ಕೆ ಆಗ್ರಹಿಸಿ ಲೋಕಸಭಾ ಸ್ಪೀಕರ್ಗೆ ದೂರು ನೀಡಿದ್ದರು.
ಈ ಹಿಂದೆ ಜೆಡಿಎಸ್ನಲ್ಲಿದ್ದ ಡ್ಯಾನಿಶ್ ಅಲಿಯವರು ಮಾಜಿ ಪ್ರಧಾನಿ ದೇವೇಗೌಡರ ಅನುಮತಿ ಪಡೆದು ಮಾಯಾವತಿ ಪಕ್ಷಕ್ಕೆ ಸೇರ್ಪಡೆಯಾಗಿ ಉತ್ತರಪ್ರದೇಶದಿಂದ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದರು.
ADVERTISEMENT
ADVERTISEMENT