ADVERTISEMENT
ಬಿಗ್ಬಾಸ್ ಮನೆಯ ಸ್ಪರ್ಧಿಗಳಿಗೆ ಹೊಸ ವರ್ಷದ ಹೊಸ್ತಿಲಲ್ಲಿ ಮಹಾಗುರುಗಳ ಆಶೀರ್ವಾದ ಸಿಕ್ಕಿದೆ. ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಬಿಗ್ಬಾಸ್ಮನೆಯೊಳಗೆ ಅಡಿಯಿಟ್ಟು ಎಲ್ಲರನ್ನೂ ಆಶೀರ್ವದಿಸಿದ್ದಾರೆ.
ಬಿಗ್ಬಾಸ್ ಮನೆಯೊಳಗೆ ಪೂಜೆ ಮಾಡಿ ಮಂಗಳಾರತಿ ಪ್ರಸಾದ ನೀಡಿದ ಸ್ವಾಮೀಜಿ ಎಲ್ಲ ಸ್ಪರ್ಧಿಗಳನ್ನೂ ಪ್ರತ್ಯೇಕವಾಗಿ ಕರೆದು ಅವರ ಬದುಕಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ವರ್ತೂರು ಸಂತೋಷ್ ಅವರನ್ನು ಕರೆದು, ‘ನೀವು ಕಾಲಿನ ಮೇಲೆ ಹಾಕಿಸಿಕೊಳ್ಳದ ಜಾಗದಲ್ಲಿ ಟ್ಯಾಟೋ ಒಂದಿದೆ. ಹಾಕಿಸಿಕೊಂಡು ಬಂದ ದಿನದಿಂದಲೇ ನೆಮ್ಮದಿ ಹೋಯ್ತು’ ಎಂದು ಹೇಳಿದ್ದಾರೆ. ಅದನ್ನು ವರ್ತೂರು ಒಪ್ಪಿಕೊಂಡಿದ್ದಾರೆ ಕೂಡ.
ನಮ್ರತಾ ಅವರ ಬಳಿ, ‘ನಿಮ್ಮ ಜೀವನದಲ್ಲಿ ಹೊಸ ಬೆಳಕು, ಹೊಸ ವ್ಯಕ್ತಿಯ ಆಗಮನವಾಗುತ್ತಿದೆ’ ಎಂದು ಹೇಳಿದ್ದಾರೆ. ಅವರ ಮಾತು ಕೇಳಿ ನಮ್ರತಾ ಅವರ ಮುಖದಲ್ಲಿ ನಗುವರಳಿದೆ.
ಪ್ರತಾಪ್ ಅವರಿಗೆ ಮಾತ್ರ ಸಂಕಟಪಡುವಂಥ ಭವಿಷ್ಯ ನುಡಿದಿದ್ದಾರೆ. ‘ಈ ವಿಚಾರ ಹೇಳುವುದಕ್ಕೆ ನನಗೆ ಸಂಕಟವಾಗುತ್ತಿದೆ. ಕುಟುಂಬದಿಂದ ದೂರವೇ ಇರಬೇಕಾಗುತ್ತದೆ. ಕುಟುಂಬದ ಜೀವನ ಅಷ್ಟು ಸರಿ ಇಲ್ಲ. ದೂರ ಇದ್ದು ದೂಪವಾಗ್ತೀಯೋ ಹತ್ತಿರ ಹೋಗಿ ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು’ ಎಂದು ಖಡಕ್ಕಾಗಿ ಹೇಳಿದ್ದಾರೆ. ಅವರ ಮಾತುಗಳನ್ನು ಕೇಳಿ ಪ್ರತಾಪ್ ಕಣ್ಣುಗಳಲ್ಲಿ ಕಣ್ಣೀರು ತುಂಬಿ ಹರಿದಿದೆ.
ADVERTISEMENT