ಬೆಂಗಳೂರು ಎಕ್ಸ್​ಪ್ರೆಸ್​​ ವೇನಲ್ಲಿ ಟೋಲ್​ ಸಂಗ್ರಹ ಶುರು – ಟೋಲ್​ ದುಬಾರಿ – ಸ್ಥಳೀಯರಿಗೂ ಟೋಲ್​ ಹೊಡೆತ

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಫೆಬ್ರವರಿ 28ರಿಂದ ಅಂದರೆ ಇದೇ ತಿಂಗಳ ಕೊನೆಯ ದಿನದಿಂದ ಟೋಲ್​ ಸಂಗ್ರಹ ಆರಂಭ ಆಗಲಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್​ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಬೆಂಗಳೂರು-ನಿಡಘಟ್ಟ ನಡುವಿನ ಶೇಷಗಿರಿಹಳ್ಳಿಯ ಟೋಲ್​ನಲ್ಲಿ ಟೋಲ್​ ಸಂಗ್ರಹ ಆರಂಭ ಆಗಲಿದೆ.

ದಶಪಥ ಹೆದ್ದಾರಿಯ ಮೊದಲ ಹಂತದ 55.63 ಕಿ.ಮೀ ರಸ್ತೆಗೆ ಶುಲ್ಕ ವಸೂಲಿ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಸೂಚನೆ ಹೊರಡಿಸಿದೆ.

ಕಾರು, ಜೀಪು, ವ್ಯಾನು – ಏಕಮುಖ ಸಂಚಾರಕ್ಕೆ 135ರೂ. ಅದೇ ದಿನ ಮರು ಸಂಚಾರಕ್ಕೆ 205 ರೂ.

ಸ್ಥಳೀಯ ವಾಹನಗಳಿಗೆ 70 ರೂಪಾಯಿ – ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್ ಗೆ 4,525 ರೂಪಾಯಿ

ಲಘು ವಾಣಿಜ್ಯ ವಾಹನಗಳು/ಲಘು ಸರಕು ವಾಹನಗಳು/ಮಿನಿ ಬಸ್ – ಏಕಮುಖ ಸಂಚಾರಕ್ಕೆ 220 ರೂ. ಅದೇ ದಿನ ಮರು ಸಂಚಾರಕ್ಕೆ 320 ರೂ.

ಸ್ಥಳೀಯ ವಾಹನಗಳಿಗೆ 110 ರೂಪಾಯಿ – ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್​ಗೆ 7,315 ರೂಪಾಯಿ

ಬಸ್ ಅಥವಾ ಟ್ರಕ್(ಎರಡು ಆಕ್ಸೆಲ್) – ಏಕಮುಖ ಸಂಚಾರಕ್ಕೆ 460 ರೂಪಾಯಿ – ಅದೇ ದಿನ ಮರು ಸಂಚಾರಕ್ಕೆ 690 ರೂಪಾಯಿ

ಸ್ಥಳೀಯ ವಾಹನಗಳಿಗೆ 230 ರೂಪಾಯಿ – ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್ ಗೆ 15,325 ರೂಪಾಯಿ.

ವಾಣಿಜ್ಯ ವಾಹನಗಳು (ಮೂರು ಆಕ್ಸೆಲ್​) – ಏಕಮುಖ ಸಂಚಾರಕ್ಕೆ 500 ರೂಪಾಯಿ. ಅದೇ ದಿನ ಮರು ಸಂಚಾರಕ್ಕೆ 750 ರೂಪಾಯಿ.

ಸ್ಥಳೀಯ ವಾಹನಗಳಿಗೆ 250 ರೂಪಾಯಿ, ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್​ಗೆ 16,715 ರೂಪಾಯಿ

ಭಾರಿ ನಿರ್ಮಾಣ ಯಂತ್ರ, ಭೂ ಅಗೆತ ಯಂತ್ರ, ಬಹು ಆಕ್ಸೆಲ್ ವಾಹನ (6ರಿಂದ 8 ಆಕ್ಸೆಲ್) – ಏಕಮುಖ ಸಂಚಾರಕ್ಕೆ 720 ರೂಪಾಯಿ. ಅದೇ ದಿನ ಮರು ಸಂಚಾರಕ್ಕೆ 1080 ರೂಪಾಯಿ

ಸ್ಥಳೀಯ ವಾಹನಗಳಿಗೆ 360 ರೂಪಾಯಿ – ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್​ಗೆ 24,030 ರೂಪಾಯಿ

ಅತೀ ಗಾತ್ರದ ವಾಹನಗಳು (7ರಿಂದ ಹೆಚ್ಚಿನ ಆಕ್ಸೆಲ್)- ಏಕಮುಖ ಸಂಚಾರಕ್ಕೆ 880 ರೂಪಾಯಿ. ಅದೇ ದಿನ ಮರು ಸಂಚಾರಕ್ಕೆ 1,315 ರೂಪಾಯಿ.

ಸ್ಥಳೀಯ ವಾಹನಗಳಿಗೆ 440 ರೂಪಾಯಿ, ಒಂದು ತಿಂಗಳ 50 ಏಕ‌ಮುಖ ಸಂಚಾರದ ಪಾಸ್ ಗೆ 29,255ರೂ ದರ

LEAVE A REPLY

Please enter your comment!
Please enter your name here