ನಾಳೆಯಿಂದ ಡಿಸೆಂಬರ್ 22ರವರೆಗೆ ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಎಲ್ಲ ರೈಲುಗಳ ಓಡಾಟವನ್ನು ರೈಲ್ವೆ ಇಲಾಖೆ ಸ್ಥಗಿತಗೊಳಿಸಿದೆ.
ಹಾಸನ ಜಂಕ್ಷನ್ನ ಹಾಸನ ನಿಲ್ದಾಣದಲ್ಲಿ ಯಾರ್ಡ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈಲುಗಳ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ. ಡಿಸೆಂಬರ್ 14ರಿಂದ ಡಿಸೆಂಬರ್ 22ರವರೆಗೆ ಕಾಮಗಾರಿ ಹಿನ್ನೆಲೆಯಲ್ಲಿ ರೈಲುಗಳ ಓಡಾಟ ಸ್ಥಗಿತಗೊಂಡಿದೆ.
ರದ್ದಾಗಿರುವ ರೈಲುಗಳು:
ಬೆಂಗಳೂರು-ಕಣ್ಣೂರು-ಬೆಂಗಳೂರು, ಬೆಂಗಳೂರು-ಕಾರವಾರ-ಬೆಂಗಳೂರು ಪಂಚಗಂಗಾ ಎಕ್ಸ್ಪ್ರೆಸ್ ರೈಲುಗಳ ಓಡಾಟ ರದ್ದುಗೊಳಿಸಲಾಗಿದೆ.
ಬೆಂಗಳೂರು-ಕಣ್ಣೂರು (16511), ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್ಪ್ರೆಸ್ (16595) ರೈಲನ್ನು ಡಿಸೆಂಬರ್ 16ರಿಂದ ಡಿಸೆಂಬರ್ 20ರವರೆಗೆ ರದ್ದುಗೊಳಿಸಲಾಗಿದೆ.
ವಾರದಲ್ಲಿ ಮೂರು ಬಾರಿ ಸಂಚರಿಸುವ ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್ಪ್ರೆಸ್ (16575) ರೈಲನ್ನು ಡಿಸೆಂಬರ್ 14, 17, 19, 21ರಂದು ರದ್ದುಗೊಳಿಸಲಾಗಿದೆ.
ಯಶವಂತಪುರ-ಕಾರವಾರ ನಡುವೆ ವಾರದಲ್ಲಿ ಮೂರು ಬಾರಿ ಸಂಚರಿಸುವ ರೈಲನ್ನು (16515) ಡಿಸೆಂಬರ್ 13, 15, 18, 20 ಮತ್ತು 22ರಂದು ಮತ್ತು ಕಾರವಾರ-ಯಶವಂತಪುರ (16516) ನಡುವಿನ ರೈಲನ್ನು ಡಿಸೆಂಬರ್ 14, 16, 19, 21, 23ರಂದು ರದ್ದುಗೊಳಿಸಲಾಗಿದೆ.
ಯಶವಂತಪುರ-ಮಂಗಳೂರು ಜಂಕ್ಷನ್ (16539/16540) ನಡುವಿನ ರೈಲನ್ನು ಡಿಸೆಂಬರ್ 16 ಮತ್ತು 17ರಂದು ರದ್ದುಗೊಳಿಸಲಾಗಿದೆ.
ಒಂದೇ ರೈಲು:
ಸದ್ಯಕ್ಕೆ ಬೆಂಗಳೂರು-ಕರಾವಳಿ ನಡುವೆ ಪ್ರಯಾಣಿಸಲಿರುವ ಏಕೈಕ ರೈಲು ಎಂದರೆ 16585/16586 ಸಂಖ್ಯೆಯ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್-ಬೆಂಗಳೂರು-ಮುರ್ಡೇಶ್ವರ ರೈಲು. ಇದು ಮೈಸೂರು ಮಾರ್ಗದ ಬದಲು ಯಶವಂತಪುರ, ನೆಲಮಂಗಲ, ಶ್ರವಣಬೆಳಗೊಳ, ಹಾಸನ ಮೂಲಕ ಸಂಚರಿಸಲಿದೆ.
ADVERTISEMENT
ADVERTISEMENT