ಅಪರಿಚಿತ ಮಹಿಳೆಯೊಬ್ಬಳು ನರ್ಸ್ ವೇಷದಲ್ಲಿ ಬಂದು ಬೆಳಗಾವಿಯ ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನವಜಾತು ಶಿಶುವನ್ನು ಕಳ್ಳತನ (Baby Theft) ಮಾಡಿರುವ ಪ್ರಕರಣ ವರದಿಯಾಗಿದೆ.
ಮಂಗಳವಾರ ಮಗು ಜನಿಸಿತ್ತು. ಇಂದು ಅಪರಿಚಿತ ಮಹಿಳೆಯೊಬ್ಬಳು ನರ್ಸ್ ವೇಷದಲ್ಲಿ ಬಂದು ಮಗುವಿನ ತೂಕ ಮಾಡಬೇಕು ಎಂದು ಹೇಳಿ ಮಗುವನ್ನು ತಾತಿಯ ಮಡಿಲಿನಿಂದ ತೆಗೆದುಕೊಂಡು ಹೋಗಿದ್ದಳು. ಅರ್ಧ ತಾಸಿನ ಬಳಿಕವೂ ನರ್ಸ್ ಮಗುವನ್ನು ತೆಗೆದುಕೊಂಡು ಬಾರದೇ ಇರುವುದನ್ನು ಗಮನಿಸಿದ ಪೋಷಕರು ಆಸ್ಪತ್ರೆಯ ಸಿಬ್ಬಂದಿ ಗಮನಕ್ಕೆ ತಿಳಿಸಿದ್ದಾರೆ. ಆ ಬಳಿಕವೇ ಮಗು ನಾಪತ್ತೆಯಾಗಿರುವುದರ ಬಗ್ಗೆ ತಿಳಿದಿತ್ತು. ಇದನ್ನೂ ಓದಿ : Bridge Nut Bolt Stolen : ರಾಷ್ಟ್ರೀಯ ಹೆದ್ದಾರಿ ಸೇತುವೆಯ 3800 ನಟ್-ಬೋಲ್ಟ್ ಕಳ್ಳತನ
ಅನಂತರ ಅಥಣಿ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ದೂರು ದಾಖಲಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ಶವಶಂಕರ್ ಮುಗರಿ ಪೋಷಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಸಿಸಿಟಿವಿಯಲ್ಲಿ ಅಪರಿಚಿತ ನರ್ಸ್ ವೇಷದಲ್ಲಿದ್ದ ಮಹಿಳೆ ಮಗುವನ್ನು ಹೊತ್ಯೊಯ್ದಿರುವ (Baby Theft) ದೃಶ್ಯ ದಾಖಲಾಗಿದೆ. ಈ ಮಹಿಳೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಬೆಂಗಳೂರಲ್ಲಿ ಶಿಶು ಮಾರಾಟ ಜಾಲ ಪತ್ತೆ, ಐವರು ಬಂಧನ, 12 ಮಕ್ಕಳ ರಕ್ಷಣೆ