ADVERTISEMENT
ರಾಮನಗರ ಜಿಲ್ಲೆಯ ಪ್ರತಿಷ್ಠಿತ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಯಾರಿಗೆ ಬಿಜೆಪಿ ಟಿಕೆಟ್..? ಈ ಬಾರಿಯೂ ತಮಗೇ ಬಿಜೆಪಿ ಟಿಕೆಟ್ ಸಿಗಲಿದೆ ಎಂಬ ಖಚಿತತೆಯೊಂದಿಗೆ ಮಾಜಿ ಸಚಿವ ಪಿ ಪಿ ಯೋಗೇಶ್ವರ್ ಕ್ಷೇತ್ರದಲ್ಲಿ ಓಡಾಡ್ತಿದ್ದಾರೆ.
ಈ ನಡುವೆ ಮಾಜಿ ಸಚಿವ, ಮಾಜಿ ಶಾಸಕ, ಹಾಲಿ ವಿಧಾನಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಅವರಿಗೆ ಬಿಜೆಪಿ ಟಿಕೆಟ್ ನೀಡದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ರಾಷ್ಟ್ರೀಯ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಸಿ ಪಿ ಯೋಗೇಶ್ವರ್ ಅವರಿಗೆ ಟಿಕೆಟ್ ನೀಡದಂತೆ ಯಡಿಯೂರಪ್ಪ ಅವರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.
2019ರ ಜುಲೈನಲ್ಲಿ ಆಪರೇಷನ್ ಕಮಲದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಿ ಪಿ ಯೋಗೇಶ್ವರ್ ಅವರು ಆ ಬಳಿಕ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಬದ್ಧ ವಿರೋಧಿಯಾಗಿ ಬದಲಾದರು.
ಆಪರೇಷನ್ ಕಮಲ ಮೂಲಕ ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗಲು ಕಾರಣರಾಗಿದ್ದ ಯೋಗೇಶ್ವರ್ ಆ ಬಳಿಕ ಯಡಿಯೂರಪ್ಪ ಅವರನ್ನು ಗಾದಿಯಿಂದ ಇಳಿಸುವ ಭಿನ್ನರ ಕೂಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದರು.
ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಈ ಹಿಂದೆ ಕೊಟ್ಟಿದ್ದ ಹೇಳಿಕೆಗಳು:
ನನ್ನ ಅಧಿಕಾರದಲ್ಲಿ ನನ್ನ ಮಗ ಮೂಗು ತೂರಿಸಿದ್ರೆ ಸರಿಯಲ್ಲ ಅದು. ಆದ್ರೆ ರಾಜ್ಯದಲ್ಲಿ ಇದೇ ನಡಿಯುತ್ತಿದೆ. ನಾನೊಬ್ಬ ಸಚಿವ. ಇವತ್ತು ನನ್ನ ಸಚಿವಗಿರಿಯನ್ನು ನನ್ ಮಗ ಚಲಾಯಿಸಿದ್ರೆ ನಾನು ಒಪ್ಪಲ್ಲ. ನನ್ನ ಅಧಿಕಾರದಲ್ಲಿ ಬೇರೆಯವರು ಮೂಗು ತೂರಿಸೋದು ಇಷ್ಟವಿಲ್ಲ.
ಅಪ್ಪ ಅಂಬಾರಿ ಹೊತ್ತಿದ್ದಾನೆ ಎಂದು ಮರಿಯಾನೆಗೂ ಅಂಬಾರಿ ಹೊರಿಸಲಾಗುತ್ತಾ. ಅದು ಸಾಧ್ಯವಿಲ್ಲ. ಬದಲಾವಣೆ ಪ್ರಕೃತಿ ಸಹಜ.
ನನ್ನ ಸರ್ಕಾರ ಅನ್ನುವ ಭಾವನೆ ನನಗೆ ಬರುತ್ತಿಲ್ಲ. ನನಗೆ ಆಗುತ್ತಿರುವ ನೋವು, ಚಿತ್ರಹಿಂಸೆಯನ್ನು ಹೇಳುತ್ತಿದ್ದೇನೆ. ಅದರಲ್ಲಿ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ನಮ್ಮ ಸರ್ಕಾರವಿದ್ದರೂ, ವಿರೋಧಪಕ್ಷದವರ ಕೈ ಮೇಲಾಗುತ್ತಿದೆ. ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಮೀಸಲಾತಿ ಕೂಡ ಹೆಚ್.ಡಿ. ಕುಮಾರಸ್ವಾಮಿ ಹೇಳಿದಂತೆಯೇ ಆಗುತ್ತಿದೆ. ಸಾಕಷ್ಟು ಬಾರಿ ಹಿಂಸೆಯಾಗಿದೆ.
ADVERTISEMENT