ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಜನವರಿ 22ರಂದು ಮಧ್ಯಾಹ್ನ 12:20 ಕ್ಕೆ ನಡೆಯಲಿದೆ. ಆ ದಿನ ಭಾರತ ಮತ್ತು ವಿದೇಶಗಳಿಂದ 7,000 ಕ್ಕೂ ಹೆಚ್ಚು ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇನ್ನೂ ರಾಮಮಂದಿರದ ಸಾರ್ವಜನಿಕರ ದರ್ಶನವು ಜನವರಿ 23ರಿಂದ ಶುರುವಾಗಲಿದ್ದು, ಈ ವಿಷಯವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ರಾಮಮಂದಿರ ಧಾರ್ಮಿಕ ವಿಧಿವಿಧಾನಗಳು ಜನವರಿ 16 ಆರಂಭವಾಗಲಿವೆ. ಜನವರಿ 18ರಂದು ರಾಮಲಲ್ಲಾ ವಿಗ್ರಹವನ್ನು ಗರ್ಭ ಗೃಹದಲ್ಲಿ ಇಡಲಾಗುವುದು ಎಂದು ಅವರು ತಿಳಿಸಿದ್ದಾರೆ.