ADVERTISEMENT
ಗಾಡ್ ಫಾದರ್ ಸಿನಿಮಾ ಖ್ಯಾತಿಯ ಹಾಲಿವುಡ್ ನಟ 82 ವರ್ಷದ ಅಲ್ ಪಸಿನೋ ಅವರು ತಮ್ಮ ಗೆಳತಿ 29 ವರ್ಷದ ನೂರ್ ಅಲಫಲ್ಹಾ ಮೂಲಕ ಮತ್ತೆ ತಂದೆಯಾಗಿದ್ದಾರೆ.
ಸಿನಿಮಾ ನಿರ್ಮಾಪಕಿಯೂ ಆಗಿರುವ ನೂರ್ ಅಲ್ಪಲ್ಹಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ರೋಮನ್ ಪಸಿನೋ ಎಂದು ನಾಮಕರಣ ಮಾಡಲಾಗಿದೆ.
ಅಲ್ ಪಸಿನೋ ಅವರಿಗೆ ತಮ್ಮ ಮಾಜಿ ಗೆಳತಿ ಜ್ಯಾನ್ ಟಾರ್ಯಾಂಟ್ರಿಂದ 33 ವರ್ಷದ ಜೂಲಿ ಮೇರಿ ಎಂಬ ಮಗಳಿದ್ದಾಳೆ.
1997ರಿಂದ 2003ರವರೆಗೆ ತಮ್ಮ ಗೆಳತಿಯಾಗಿದ್ದ ಬೆವರ್ಲಿ ಡಿ ಆ್ಯಂಜೆಲೋ ಅವರಿಂದ 22 ವರ್ಷ ವಯಸ್ಸಿನ ಇಬ್ಬರು ಅವಳಿ ಮಕ್ಕಳಿದ್ದಾರೆ.
ಕಳೆದ ವರ್ಷದ ಏಪ್ರಿಲ್ ನೂರ್ ಮತ್ತು ಅಲ್ ಪಸಿನೋ ಅವರು ಜೊತೆಯಾಗಿ ಓಡಾಡುತ್ತಿರುವ ಬಗ್ಗೆ ಸುದ್ದಿಯಾಗಿತ್ತು.
ADVERTISEMENT