ಶವದ ಮೇಲೆ ಕುಳಿತು ಅಘೋರ ಪೂಜೆ

ಓರ್ವ ಅಘೋರ ಗೆಳೆಯನ ಮೃತದೇಹದ ಮೇಲೆ ಕುಳಿತು ಪೂಜೆ ಮಾಡಿರುವ ಘಟನೆ ತಮಿಳುನಾಡಿನ ಕೋಯಮತ್ತೂರು ಜಿಲ್ಲೆಯ ಸೂಲೂರು ಬಳಿ ನಡೆದಿದೆ.

ಸೂಲೂರು ಸಮೀಪದ ಕುರುಂಬಪಾಳೆಯದ ನಿವಾಸಿ ಮಣಿಕಂಠನ್ ಆಂಬ್ಯುಲೆನ್ಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಎರಡು ವರ್ಷದ ಹಿಂದಷ್ಟೇ ಮದುವೆ ಆಗಿತ್ತು.

ಆದರೆ, ನಿರಂತರ ಕೌಟುಂಬಿಕ ಸಂಘರ್ಷದಿಂದ ಬೇಸತ್ತ ಮಣಿಕಂಠನ್ ಭಾನುವಾರ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ವಿಷಯ ತಿಳಿದ ಮಣಿಕಂಠನ್ ಬಾಲ್ಯದ ಗೆಳೆಯ, ಸದ್ಯ ಅಘೋರ ಆಗಿರುವ ಓರ್ವ ವ್ಯಕ್ತಿ ಸೂಲೂರಿಗೆ ಧಾವಿಸಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.

ಗೆಳೆಯನ ಮೃತದೇಹದ ಮೇಲೆ ಕುಳಿತು ಹಲವು ರೀತಿಯ ಪೂಜೆಗಳನ್ನು ಮಾಡಿದ್ದಾರೆ. ಸದ್ಯ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.