IndiraDevi no more – ನಟ ಮಹೇಶ್  ಬಾಬುಗೆ ಮಾತೃ ವಿಯೋಗ

ಟಾಲಿವುಡ್ (Tollywood )ಪ್ರಮುಖ ನಟ ಮಹೇಶ್  ಬಾಬು (Mahesh Babu ) ತಾಯಿ, ಸೂಪರ್ ಸ್ಟಾರ್ ಘಟ್ಟಮನೇನಿ ಕೃಷ್ಣ (Super Star Krishna)ಅವರ ಧರ್ಮಪತ್ನಿ ಇಂದಿರಾದೇವಿ (IndiraDevi )ಇನ್ನಿಲ್ಲ.

ಕಳೆದ ಕೆಲ  ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್ ನ ತಮ್ಮ  ನಿವಾಸದಲ್ಲಿ ಇಂದು ನಸುಕಿನ ಜಾವ ಇಹಲೋಕ ತ್ಯಜಿಸಿದ್ದಾರೆ. ಟಾಲಿವುಡ್ ನಲ್ಲಿ ಇದೀಗ ವಿಷಾದಛಾಯೆ ಆವರಿಸಿದೆ.

ಕೃಷ್ಣ – ಇಂದಿರಾದೇವಿ ದಂಪತಿಗಳಿಗೆ ಐವರು ಮಕ್ಕಳು. ರಮೇಶ್  ಬಾಬು, ಮಹೇಶ್  ಬಾಬು, ಪದ್ಮಾವತಿ, ಮಂಜಲ, ಪ್ರಿಯದರ್ಶಿನಿ..

ಈ ಪೈಕಿ ಕೆಲ ದಿನಗಳ ಹಿಂದಷ್ಟೇ ರಮೇಶ್  ಬಾಬು ಸಾವನ್ನಪ್ಪಿದ್ದರು. ಇದೀಗ ಇಂದಿರಾದೇವಿ ಸಾವಿನೊಂದಿಗೆ ಮಹೇಶ್  ಬಾಬು ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

LEAVE A REPLY

Please enter your comment!
Please enter your name here